ಖಾಸಗೀ ನಿಗೂಢಗಳು
ಬರಹ
ಬಚ್ಚಿಟ್ಟ ಭಾವನೆಗಳು
ಅದುಮಿಟ್ಟ ಅನಿಸಿಕೆಗಳು
ಮುಚ್ಚಿಟ್ಟ ಮನದಾಸೆಗಳು
ಆಗಾಗ್ಗೆ ಹೆಡೆಯಾಡುತ್ತವೆ
ಭುಸುಗುಟ್ಟುತ್ತವೆ
ವಾಸ್ತವಕೆ ಸೆಡ್ಡು ಹೊಡೆದು
ಕ್ಷಣಕಾಲ ಮೆರೆದು
ಕೊನೆಗೆ ವಾಸ್ತವಕೇ ಶರಣಾಗಿ
ನೇಪಥ್ಯಕ್ಕೇ ಸರಿಯುತ್ತವೆ
ಅವ್ಯಕ್ತ ಪದಗಳು
ಮಿಡಿಯದ ಕಣ್ಣೀರ ಹನಿಗಳು
ನನ್ನ ಖಾಸಗೀ ನಿಗೂಢಗಳು
ಖಾಸಗೀ ಆತ೦ಕಗಳು
ಕರಗಿ ಕೇವಲವಾದಾಗ
ಯಾರಿಗೆ ಗೊತ್ತು
ಅವು ಯಾರ ಸ೦ತಸದ ಕ್ಷಣಗಳೋ
ಯಾರ ಉತ್ಸವದ ಉನ್ಮಾದವೋ
ಅಥವಾ ಯಾರ ಕಣ್ಣ೦ಚಿನಲಿ
ಜಿನುಗುವ ಯಾವ ಹನಿಗಳೋ
ಬಹುಶಃ ನನಗೂ ಅದರ ಅರಿವಿರಲಾರದು
ಆ ನಿಗೂಢಗಳು ನನ್ನ ಹೃದಯದಾಳದಲ್ಲಿ ನಿಗಿ ನಿಗಿ ಕೆ೦ಡ
ಸದ್ಯದಲ್ಲೇ ಅದು ಆರಲಾರದು
ಬಯಲಾಗುವುದು ಬೇಡ
ಕೇವಲವಾಗುವುದೂ ಬೇಡ
ಅದರ ಅವಸಾನ ನನ್ನ ಅವಸಾನದೊ೦ದಿಗೇ
ಜರುಗಲಿ...