ಸೂರ್ಯೋದಯ

ಸೂರ್ಯೋದಯ

ಮೂಡಣದಲ್ಲಿ ಕೆಂಪು ಸೂರ್ಯನಿಂದಲೇ ಅರುಣೋದಯ
ಕೆಂಗಿರಣಗಳಿಂದ ಸೃಷ್ಟಿಯಲಿ ಹರಿವ ಚೇತನ ನಿರಾಕಾರಮಯ

ಭವ್ಯ ನಿರಾಡಂಬರ, ನೀಲಾಗಸದೊಳು ಕೆಂಬಣ್ಣದ ಪಸರಿಕೆ
ವಿಶ್ವಾಕಾರ ಗಗನಸದೃಶ ಪ್ರೀತಿಯ ಶೋಭಿಸುವಿಕೆ

ನೇಸರನ ಕಟಾಕ್ಷಕ್ಕೆ ಹೊಳೆಯುವ ಅಮೃತ ಬಿಂದುಗಳು
ಸೊಗಡಿಗೆ ದನಿಗೂಡಿಸುತ್ತಿವೆ ಗುಬ್ಬಿ ಪಿಕರಾಳಗಳು

ಹೊಸಬೆಳಕಿದು ನವನಾಡಿನ ಸೃಷ್ಟಿಗೆ
ಹೊಸ ಹೊಂಗಿರಣವಿದು ಸತ್ಯದ ಅರಿವಿಗೆ

ಹೊಸ ಚೇತನದ ಬಿತ್ತನೆಯಿದು ಅನುದಿನದ ಆರೋಹಣ
ಜಡವಲ್ಲ ಸೃಷ್ಟಿ; ಚಲನೆ ಸರ್ವಾಂಗೀಣ

ಬೆಳಗಲ್ಲ ಬರಿಯ ಸೂರ್ಯೋದಯ
ಕಾವ್ಯ ಸ್ಫುರಣೆಯ ಅಂತರ್ದೃಷ್ಟಿ; ಸಚ್ಚಿದಾನಂದಮಯ

[೨೦೦೪ ರಲ್ಲಿ ಬರೆದ ಕವನ]

Rating
No votes yet

Comments