ಕವನ "ಕಾಲ ಮೀರಿದ ಮೇಲೆ" : ವಿಶ್ವ ತಂಬಾಕು ದಿನದ ಪ್ರಯುಕ್ತ

ಕವನ "ಕಾಲ ಮೀರಿದ ಮೇಲೆ" : ವಿಶ್ವ ತಂಬಾಕು ದಿನದ ಪ್ರಯುಕ್ತ

ಬರಹ

ಅಗಿಯುವರು ಜಗಿಯುವರು ತಂಬಾಕು

ಬಾರದು ಬುದ್ಧಿ ಸವಿಯುವಾಗ.

ಬಲಿ ಯಾದರೆ ಚಟಕ್ಕೆ-

ಬರುವುದು ನಿಶ್ಚಿತ ಘೋರ ರೋಗ.

ಜೀವ - ರೋಗದಿಂದ ಸವೆಯುವಾಗ

ಬೇಕೆನಿಸಲಿಲ್ಲ ಹೊಗೆಸೊಪ್ಪಿನ ತ್ಯಾಗ.

ದಾಸ ನೀನೀಗಲೆ - ತಂಬಾಕಿಗೆ -

ಫಲವೇನು ತಿಳಿಯೆ ಈಗ?

ಬಗ್ಗದು ಬಗೆ ಬಗೆಯ

ಉಪಚಾರಕ್ಕೆ ಖಾಯಿಲೆ.

ಓ ಗೆಳೆಯ, ಮೋಜಿಗಾಗಿ ಹೋದ ಆರೋಗ್ಯವ

ಮತ್ತೆ ಗಳಿಸಬಹುದೇ ಕಾಲ ಮೀರಿದ ಮೇಲೆ?

 

-- ಸೌಮ್ಯ ಶಾಸ್ತ್ರಿ