ಮೂಢ ಮನ !!! - 3

ಮೂಢ ಮನ !!! - 3

ನೋಟದಲಿ ಕಹಿಯಿರಲು
ಮಾತಿನಲಿ ಬಿಸಿಯಿರಲು
ಅಸಹನೆಯ ಭಾವನೆಯು
ಎದ್ದೆದ್ದು ಕುಣಿದಿರಲು
ನೆಮ್ಮದಿಯು ನಿನಗೆಲ್ಲಿ
ಮೂಢ ಮನಸೆ ???

 

*****************************

 

ಹಣೆಬರಹ ಬರೆದ ವಿಧಿ
ಕಣ್ಮುಚ್ಚಿ ಕುಳಿತಿರಲು
ನೀ ನಾಲ್ಕು ಗೆರೆ ನೆತ್ತಿಯಲಿ
ಎಳೆದ ಮಾತ್ರಕ್ಕೆ
ವಿಧಿಲಿಖಿತ ಬದಲಿಸದು
ಮೂಢ ಮನಸೆ !!!

 

Rating
No votes yet

Comments