ಬೇಸರವು ಆಸಕ್ತಿಯ ಸಹವರ್ತಿಯಾದಾಗ ವಿಶ್ವವೇ ರೋಮಾಂಚನದ ಸಂವಹನವಾಗುತ್ತದೆ!

ಬೇಸರವು ಆಸಕ್ತಿಯ ಸಹವರ್ತಿಯಾದಾಗ ವಿಶ್ವವೇ ರೋಮಾಂಚನದ ಸಂವಹನವಾಗುತ್ತದೆ!

(೬೧) ನಾನು ಬೇಸರವನ್ನು ಕುರಿತಂತೆ ಒಂದು ಆಸಕ್ತಿಕರ ಪುಸ್ತಕವನ್ನೋದಿದೆ. ಆಸಕ್ತಿದಾಯಕ ವಿಷಯಗಳನ್ನು ಕುರಿತ ಒಂದು ಒಣಪುಸ್ತಕವು ಮನುಷ್ಯನನ್ನು ಸಿನಿಕನನ್ನಾಗಿಸುತ್ತದೆ.


(೬೨) ಪ್ರತಿಯೊಂದರಲ್ಲೂ ಆಸಕ್ತಿಯನ್ನು ಹೊಂದಬೇಕೆಂದು ಬಲ್ಲವರು ಹೇಳುತ್ತಾರೆ.ಹಾಗಿದ್ದಲ್ಲಿ ಬದುಕು ನಿಜಕ್ಕೂ ಏಕತಾನವಾಗಿಬಿಡುತ್ತದೆ. ಏಕತಾನತೆಯು ಬೇಸರದ ಮೊದಲ ಹೆಜ್ಜೆಯಲ್ಲವೆ?


(೬೩) ವಿಶ್ವವನ್ನು ಕುರಿತು ರೋಮಾಂಚನಗೊಳ್ಳಬೇಕಾದ ಅವಶ್ಯಕತೆಯಿಲ್ಲ, ಅದೂ ಸ್ವತಃ ತಾವುಗಳೇ ಅದರ ಭಾಗವಾಗಿರುವಾಗ!


(೬೪) ನಗರದ ರಸ್ತೆಗಳ ಮೇಲೆ ಓಡಿಯಾಡುವುದೆಂದರೆ ನಿಮ್ಮ ಅಕ್ಕಪಕ್ಕದ ಸವಾರರನ್ನು ಸರ್ಹವರ್ತಿಗಳೆಂದು ಭಾವಿಸದೇ ಸಂವಹಿಸುವುದು. ಅಪಾರ್ಟ್‌ಮೆಂಟ್‍ಗಳಲ್ಲಿ ಬದುಕುವುದೆಂದರೆ ಸಂವಹಿಸದೆ ಸಹವರ್ತಿಗಳನ್ನು ಹೊಂದಿರುವುದು!


(೬೫) ಯಾವುದು ಲಭ್ಯವಿಲ್ಲವೋ ಅದು ಅಸ್ತಿತ್ವದಲ್ಲಿಲ್ಲ. ಯಾವುದು ಲಭ್ಯವಿದೆಯೋ ಅದು ನಮ್ಮ ಖರ್ಚಿನ ಇತಿಮಿತಿಯಲ್ಲಿಯೇ ಇರುತ್ತದೆ ಎಂದರ್ಥ.

Rating
No votes yet

Comments