ಕರೆ

ಕರೆ

ಗೂಡಲ್ಲಿ ಮರಿಯಗಿ
ಬಾನಲ್ಲಿ ಗರಿಯಾಗಿ
ಕಾನಲ್ಲಿ ಝರಿಯಾಗಿ
ಗಿರಿ ಗಿರಿ ಗಿರಿ ಗಿರಿ ತಿರುಗುವ ಬಾ||
ವೈಚಾರಿಕ ಗುಂಪು ಸಂತೆಲಿ ಸಾಧ್ಯತೆಗಳ ಸಂಪು ನಡೆದಿದೆ
ಗರಿಬಿಚ್ಚಿದ ಗುಬ್ಬಿ ಜೀವವು ಕದಮುಚ್ಚಿಯೆ ಒಳಗೆ ಮಲಗಿದೆ
ನೋಡುತ್ತಲೇ ಬೆರಗಾಗಿ
ಕಾಡುತ್ತಿರೋ ಗುರಿಯಾಗಿ
ಆಗಸದಿ ಸೆರೆಯಾಗಿ
ಮಿರಿ ಮಿರಿ ಮಿರಿ ಮಿರಿ ಮಿನುಗುವ ಬಾ||
ಸುದ್ದಿಕಟ್ಟೆಯ ಮರವು ಕೂಡಾ ವಿದ್ಯಮಾನದ ಗುರುತು ಮರೆತಿದೆ
ಶಶಿಯ ವದನದ ಕಲೆಗಳಿಂದು ನಿದ್ದೆ ಮಾಡದೆ ಎದ್ದು ಕುಳಿತಿವೆ
ದೈವದತ್ತ ವರವಾಗಿ
ಭವಿತವ್ಯದ ಪರವಾಗಿ
ಕೊನೆಯಿಲ್ಲದ ಸಿರಿಯಾಗಿ
ಸರಿ ಸರಿ ಸರಿ ಸರಿ ಕರಗುವ ಬಾ||

Rating
No votes yet