ಅಸಂಗತ ಎನ್ನಬಹುದಾದ ಕವಿತೆಗಳು

ಅಸಂಗತ ಎನ್ನಬಹುದಾದ ಕವಿತೆಗಳು

೧)

ಆ ದಿನ ನನ್ನನ್ನು ನೇಣಿಗೇರಿಸುವ  ದಿನವಾಗಿತ್ತು

ಅಂದೇ ಪ್ರಳಯವೋ ಎಂಬಂತೆ ಮಳೆ ಸುರಿಯುತ್ತಿತ್ತು

ನಡೆಸಿಕೊಂಡು ಹೊರಟಿದ್ದರು, ದೂರದ ನೇಣುಗಂಬದ ಕಡೆಗೆ

ಇಂಥ ಮಳೇಲಿ ಒಯ್ಯೋಕೆ ಮನುಷ್ಯತ್ವ ಇದೆಯಾ, ಎಂದೆ

ಉತ್ತರ ಬಂತು; ಸುಮ್ನಿರಯ್ಯ, ತಿರುಗಿ ಬರುವ ಕಷ್ಟ ಇರೋದು ನಮಗೆ

 

೨)

 

ನಮ್ಮ ಮೆಸ್ಸಲ್ಲಿ ತಟ್ಟೆ, ಲೋಟಗಳನ್ನು ತೊಳೆಯದೆ ವರ್ಷಗಳಾದ ಹಾಗೆ ಅನ್ಸತ್ತೆ

ನಮಗೆ ಕೊಡೋ ಊಟ ನಾಯಿನೂ ತಿನ್ನಲ್ಲ ಹಾಗಿರತ್ತೆ

ಒಂದ್ವೇಳೆ ನಾಯಿ ತಿಂದರೂ ಸಹ ಬಹುಶಃ ಸತ್ತೇ ಹೋಗುತ್ತೆ

ಅದೂ ಸಾಲದೋ ಅನ್ನೋ ಹಾಗೆ, ಕೊಡೋ ಊಟ ತುಂಬಾ ಕಡಿಮೆ ಇರುತ್ತೆ  :-)

 

 

(ನಗೆಹನಿ ಆಧಾರಿತ)

 

 

Rating
No votes yet

Comments