IIFA ಮತ್ತು ಕನ್ನಡ ಚಿತ್ರರಂಗದ ಕಡೆಗಣನೆ
ಅಂತರರಾಷ್ಟ್ರೀಯ ಭಾರತ ಚಲನಚಿತ್ರ ಅಕ್ಯಾಡಮಿ(IIFA)ಯು ತನ್ನ ೧೧ ನೇ ವಾರ್ಷಿಕ ಸಮಾರಂಭವನ್ನು ಶ್ರೀಲಂಕಾ ದೇಶದ ರಾಜಧಾನಿಯಾದ ಕೊಲಂಬೋ ಆಯೋಜಿಸಿತ್ತು. ಈ ಸಂಸ್ಥೆಯ ಮುಖ್ಯ ಉದ್ದೇಶ, ಭಾರತೀಯ ಚಿತ್ರಗಳಿಗೆ ವಿದೇಶಗಳಲ್ಲಿ ಮಾರುಕಟ್ಟೆ ಬೆಳೆಸುವುದು. ಆದರೆ ಇವರು ಮಾಡುತ್ತಿರಿವುದಾದರೂ ಏನು? ಕೇವಲ ಹಿಂದಿ ಚಿತ್ರಗಳನ್ನು ಮಾತ್ರ ಪ್ರಚಾರ ಮಾಡುತ್ತಿದ್ದಾರೆ. ೨೦೦೦ ರಲ್ಲಿ ಲಂಡನ್ನಲ್ಲಿ ನಡೆದ ಸಮಾರಂಭದಿಂದ ಹಿಡಿದು ೨೦೧೦ ರಲ್ಲಿ ಕೊಲಂಬೋದಲ್ಲಿ ನಡೆದ ಸಮಾರಂಬದವರೆಗೂ ಹಿಂದಿ ಬಿಟ್ಟು ಉಳಿದ ಭಾರತದ ಬೇರಾವುದೇ ಭಾಷೆಯ ಚಿತ್ರಗಳನ್ನು ಗಣನೆಗೇ ತೆಗೆದುಕೊಂಡಿಲ್ಲ. ಇನ್ನು ಪ್ರಶಸ್ತಿ ಬರುವುದು ದೂರದ ಮಾತು. ಅಂದರೇ ಈ IIFAದವರು ಭಾರತದಲ್ಲಿ ಕನ್ನಡ ಚಿತ್ರರಂಗ ಅಸ್ತಿತ್ವದಲ್ಲಿದೇ ಅನ್ನೋದನ್ನೇ ಮರೆತಂತಿದ್ದಾರೆ.
೨೦೦೦ ರಿಂದ ೨೦೧೦ ರವರೆಗೆ ಅವರು ನಡೆಸುರುವ ಸಮಾರಂಭಗಳ ವಿವರ ಇಲ್ಲಿದೆ:
ಒಟ್ಟು ಆಯ್ಕೆ ಆದ ಚಿತ್ರಗಳು ಮತ್ತು ಪ್ರಶಸ್ತಿ ಗೆದ್ದ ಹಿಂದಿ ಚಿತ್ರಗಳು ಎರಡೂ ಒಂದೇ.ಅಂದರೆ ಬೇರೆ ಭಾಷೆ ಚಿತ್ರಗಳು ಆಟಕ್ಕುಂಟು ಲೆಕ್ಕಕ್ಕಿಲ್ವಾ?
ಹಾಗಾಗಿ ಅವರಿಗೆ ನಾವೆಲ್ಲರೂ ಮಿಂಚೆ ಬರೆಯೊಣ.ಕೇವಲ ಹಿಂದಿ ಚಿತ್ರಗಳನ್ನು ಮೆರೆಸುವ ಉದ್ದೇಶವಿದ್ದರೆ IIFA(International Indian Film Academy)ಹೆಸರು ಬದಲು IHFA(International Hindi Film Academy)ಎನ್ನುವುದೇ ಸೂಕ್ತ ಎಂದು ಹೇಳೋಣ. ಬರುವ ದಿನಗಳಲ್ಲಿ ಕನ್ನಡ ಚಿತ್ರರಂಗಕ್ಕೂ ಗೌರವಯುತವಾಗಿ ಮನ್ನಣೆ ಕೊಡಬೇಕು ಎಂದು ಒತ್ತಾಯಿಸೋಣ.
ಅವರಿಗೆ ಮಿಂಚೆ ಬರೆಯಬೇಕಾದ ವಿಳಾಸ:- iifa@iifa.com