ಏನು ಮಾತು..ಏನು ಮಾತಮ್ಮಾ...

ಏನು ಮಾತು..ಏನು ಮಾತಮ್ಮಾ...

ನಿನ್ನೆ ಸಂಜೆ ಪಾರ್ಕ್‌ನಲ್ಲಿ ಒಂದು ಸುತ್ತು ಜಾಗಿಂಗ್ ಹೋಗಿ, ಕುಳಿತು ಕೊಳ್ಳುವಾ ಎಂದರೆ ಒಂದೇ ಒಂದು ಕಲ್ಲುಬೆಂಚು ಖಾಲಿ ಇರಲಿಲ್ಲ- ಪ್ರೇಮಿಗಳು ಭರ್ತಿ.


ನಡೆದುಕೊಂಡು ಎರಡನೇ ಸುತ್ತು ಹಾಕಿದೆ. ಬೆಂಚ್ ಖಾಲಿಯಾಗುವ ಲಕ್ಷಣವೇ ಇಲ್ಲಾ...


ಇನ್ನೊಂದು ರೌಂಡ್ ಓಡಲು ಬೇಕಾದಷ್ಟು ತ್ರಾಣ ಉಳಿಸಿ...ಒಂದು ಬೆಂಚಲ್ಲಿ ಪ್ರೇಮಿಗಳ ಪಕ್ಕ ಹೋಗಿ ಕುಳಿತೆ :) ಆಕೆ "ಕಿಚ ಪಿಚ ಕಿಚ ಪಿಚ" ಅಂತಾ ಪ್ರೇಮಿಯನ್ನು ಕೊರೀತಾ ಇದ್ಳು ಕೊರಿತಾ ಇದ್ಳು... ಅಬ್ಬಾ.. ಅದೇನು ನಾಲಗೆನೋ? ಮೆಷಿನ್ನೋ? ಮಾತನಾಡುತ್ತಿರುವ ವೇಗ ನೋಡಿದರೆ, ಆ ನಾಲಗೆಗೆ ಒಂದು ಮಿನಿ ಜನರೇಟರ್ ಸಿಕ್ಕಿಸಿದರೆ ಇಡೀ ಪಾರ್ಕ್‌ಗೆ ಬೇಕಾದಷ್ಟು ಬೆಳಕು ಸಿಗಬಹುದು!! ಹೀಗೇ ಪಾರ್ಕ್‌ನ ಅಷ್ಟೂ ಪ್ರೇಮಿಗಳ ನಾಲಗೆಯಿಂದ ಇಡೀ ಕರ್ನಾಟಕದ ಕರೆಂಟು ಸಮಸ್ಯೆ ನೀಗಿಸಬಹುದು :)


ನೀವು ಗಮನಿಸಿದ್ದೀರಾ.........?


ಸಾಮಾನ್ಯವಾಗಿ ಈ "ಕ್‌ರ್‌ರ್‌ರ್.."ಎಂದು ಗಂಡಿನ ಕಿವಿಯನ್ನು ಡ್ರಿಲ್ ಮಾಡುವ ಹೆಣ್ಣು ತೆಳ್ಳಗೆ ಸುಂದರವಾಗಿರುತ್ತಾಳೆ.


ಯಾವಾಗ ಆ ಪ್ರೇಮಿಗಳು ಮದುವೆಯಾಗುತ್ತಾರೋ.. (ಆಕೆ ಒಂದೋ ಗಂಡನ ಜತೆ ಮಾತನಾಡುವುದು ಕಮ್ಮಿ ಮಾಡಿದ್ದರಿಂದ ಅಥವಾ ಗಂಡ ಆಕೆಯ ಮಾತು ಕೇಳದಿದ್ದರಿಂದ )ಆಕೆಯ ದೇಹ ಬೆಳೆಯುತ್ತಾ ಹೋಗುತ್ತದೆ :(


ಅದಕ್ಕೆ ಹೆಣ್ಣು ಮಕ್ಕಳೆ..


ಪರ್ಫೆಕ್ಟ್ ಟೆನ್ ಅಥವಾ ಕರೀನಾ ತರಹ ಜೀರೋ ಬಾಡಿ ಬೇಕಾದರೆ, ಮದುವೆಗೆ ಮೊದಲು ಪ್ರೇಮಿಗೆ ಹೇಗೆ ಕಿವಿಕೊರೆಯುತ್ತಿದ್ದಿರೋ ಹಾಗೇ ಮದುವೆ ನಂತರವೂ ಮುಂದುವರಿಸಿ..


ಗಂಡುಗಲಿಗಳೆ,


ನಿಮ್ಮ ಜತೆಯಲ್ಲಿ ಅಥವಾ ಹಿಂದಿನಿಂದ ಬುಲ್‌ಡೋಜರ್ ಬರಬಾರದೆಂದಿದ್ದರೆ ಡ್ರಿಲ್ಲಿಂಗ್ ಮೆಷಿನ್‌ಗೆ ಕಿವಿಯೊಡ್ಡಿ.


ಕೊನೆಹನಿ:


ಎಡಬಲದಲಿ ಶ್ರೀದೇವಿ ಭೂದೇವಿ


ಎಡಬಲದಲಿ ಶ್ರೀದೇವಿ ಭೂದೇವಿ


ಏನಾಗಿರಬಹುದು ವಿಷ್ಣುವಿನ ಕಿವಿ?


ಅದಕ್ಕೆ.....


ತನ್ನ ಒಂದು ಕಿವಿಯಾದರೂ ಸೇಫಾಗಿರಲಿ ಎಂದು


ತನ್ನ ಒಂದು ಕಿವಿಯಾದರೂ ಸೇಫಾಗಿರಲಿ ಎಂದು


ಶಿವ ಗಂಗೆಯನ್ನ ತಲೆಮೇಲೆ ಕುಳ್ಳಿರಿಸಿದ್ದು :)


-ಗಣೇಶ.


ಮುಂದಿನ ಬ್ಲಾಗ್-ಲವ್‌ಬರ್ಡ್ಸ್

Rating
No votes yet

Comments