ಮನೆಗಟ್ಟುತ್ತಾರೆ ಬಾಳೆಲೆಯ ಹಾಸ್ಯುಂಡು ಬೀಸಿ ಒಗೆದಂತೆ!
ಪ್ರಧಾನಿಗಳೇ ನಿಮಗೆ ಇಬ್ಬರು ಸ್ತ್ರೀಯರ ಪರೋಕ್ಷ ಮಾರ್ಗದರ್ಶನವಲ್ವೇ
ಒಬ್ಬರ ಕೆಲಸಕ್ಕಾಗಿ ಮೂರು ಮಂದಿಯ ಸಮಯ ಪೋಲಾಗುತಿದೆಯಲ್ವೇ
ತಾ ಕಲಿತ ವಿದ್ಯೆ, ಗಳಿಸಿದ ಅನುಭವಗಳೆಲ್ಲಾ ಸಾಕಾಗಿಲ್ಲ ಅನ್ನೋ ಮಾತೇ
ಸರಕಾರದ ಹೊಣೆಗಾರಿಕೆಯೆಂದರೆ ಅಡುಗೆ ಮನೆಯಲ್ಲಿನ ಕೆಲಸದಂತಾಯ್ತೇ
ಆಕೆ ನುಡಿದಂತೆ ತಾ ನಡೆಯುವ ಬದಲಾಕೆಯನೇ ತಂದು ಕೂರಿಸಬಾರದೇ
ಒಳಿತು ಕೆಡುಕುಗಳಿಗೆಲ್ಲಾ ಆಕೆಯನೇ ಜವಾಬ್ದಾರಳನ್ನಾಗಿ ಮಾಡಬಾರದೇ
ನೀವಿದ್ದರೆಷ್ಟು ಇಲ್ಲದಿದ್ದರೆಷ್ಟು ನಿಮ್ಮ ಮಾತು ನಡೆಯುತ್ತಿಲ್ಲವೆಂದಾದ ಮೇಲೆ
ಸಲಾಮು ಹೊಡೆಸಿಕೊಳ್ಳುತ್ತಿರುವವರೇ ಬಂದು ಕೂರಲಿ ಗದ್ದುಗೆಯ ಮೇಲೆ
ನೀವು ಲೋಕಸಭೆಗೆ ಸ್ಪರ್ಧಿಸಲಾಗದೇ ರಾಜ್ಯಸಭೆಯ ದಾರಿಯ ಹಿಡಿದವರು
ನಿಮಗಿಂತ ಆಕೆಯೇ ವಾಸಿ ಆಕೆ ಲೋಕಸಭೆಗೆ ಸ್ಪರ್ಧಿಸಿ ಗೆದ್ದು ಬಂದವರು
ಆಕೆಯ ಮಗ ತಯಾರಾಗುವ ತನಕ ನೀವಿರಬೇಕು ಅಲ್ಲಿ ಕೈಗೊಂಬೆಯಂತೆ
ಆಮೇಲೆ ನೋಡಿ ಮನೆಗಟ್ಟುತ್ತಾರೆ ಬಾಳೆಲೆಯ ಹಾಸ್ಯುಂಡು ಬೀಸಿ ಒಗೆದಂತೆ
**************************************
- ಆತ್ರಾಡಿ ಸುರೇಶ ಹೆಗ್ಡೆ
Rating