ನೀರಿನ ಮೇಲೆ ಶಬ್ದಗಳ ಪರಿಣಾಮ..!!!

ನೀರಿನ ಮೇಲೆ ಶಬ್ದಗಳ ಪರಿಣಾಮ..!!!

ಬರಹ
-->ಇದರ ಬಗ್ಗೆ ಮಾಹಿತಿ ಒಂದು ಮಿಂಚಂಚೆಯಲ್ಲಿ ಸಿಕ್ಕಿದ್ದು,ಸಂಶೋಧನೆಯ ಸತ್ಯ ಅಸತ್ಯತೆಗಳ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ಅರಿತವರು ತಿಳಿಸಿ..ನಾನೂ ಈ ವಿಚಾರದ ಬಗ್ಗೆ ಕುತೂಹಲಿ<-- ಭಾರತದಲ್ಲಿ,ವಾಸಿಯಾಗದು ಎಂದು ತಿಳಿದ ಕಾಯಿಲೆಗಳನ್ನು ಮಂತ್ರದ ನೀರಿನ ಅಭಿಮಂತ್ರಣದಿಂದ ವಾಸಿಗೊಳಿಸಿದ ಉದಾಹರಣೆಗಳು ಬಹಳಷ್ಟಿವೆ.ಯುಗ ಯುಗಗಳಿಂದ ಹಿಡಿದು ನಿನ್ನೆ ಮೊನ್ನೆಯವರೆಗೂ ಇಂಥವನ್ನು ಕೇಳುತ್ತ ಬಂದಿದ್ದೇವೆ.. ಇದೆ ಅಭಿಮಂತ್ರಿತ ನೀರಿನಿಂದಲೇ ಕಲ್ಲಾದವರನ್ನು ಮನುಷ್ಯರನ್ನಾಗಿ ಮಾಡಿ,ಮನುಷ್ಯರನ್ನು ಕಲ್ಲಾಗಿ ಮಾಡುವುದೂ ಕೇಳಿದ್ದೇವೆ.ಇದೆಲ್ಲ ಮಂತ್ರದ ನೀರಿನಿಂದ ಆದದ್ದು ಎಂದು ಸಾಮಾನ್ಯ ನಂಬಿಕೆ. ಈ ಎಲ್ಲಾ ರೀತಿಯ ಉದಾಹರಣೆಗಳು,ದೇವಸ್ಥಾನದಲ್ಲಿ ಕೊಡುವ ತೀರ್ಥ ಇದೆಲ್ಲ ಆಕಸ್ಮಿಕ,ಮೂಢನಂಬಿಕೆ,ಬರೀ ಗೊಳ್ಳು ವಿಚಾರ ಇದಕ್ಕೆ ಯಾವುದೇ ವೈಜ್ನ್ಯಾನಿಕ ಆಧಾರಗಳಿಲ್ಲ ಎಂದು ಬಡಬಡಿಸುವವರನ್ನು ಸುತ್ತಮುತ್ತಲೂ ಬಹಳ ಕಾಣುತ್ತೇವೆ. ಆಯಾಸವಾಗಿ ಬಂದಾಗ,ತಾಯಿ ಪ್ರೀತಿಯಿಂದ ಮಾತನಾಡುತ್ತ ಕೊಟ್ಟ ನೀರು ಹಾಗೂ ಹೋಟೆಲಿನ ಮಾಣಿ ಎಂಥದೋ ಮುಖ ಮಾಡಿ ಎಲ್ಲೋ ನೋಡಿ ಮಾತನಾಡುತ್ತ ಕೊಟ್ಟ ನೀರಿನಿಂದಾಗುವ ಸಮಾಧಾನದ ವ್ಯತ್ಯಾಸ ಬಹಳ ಎಂದು ತುಸು ಅವಲೋಕಿಸಿದಾಗ ತಿಳಿಯಬಹುದು. ಮಂತ್ರಗಳಲ್ಲಿ /ಶಬ್ದಗಳಲ್ಲಿ/ಮಾತುಗಳಲ್ಲಿ ನೀರಿನ ಅಣುಗಳನ್ನು ಪರಿವರ್ತಿಸುವಂತಹ ಶಕ್ತಿ ಇದೆ ಎಂದು ಜಪಾನಿನ ಡಾ.ಮಸರು ಇಮೊತೋ (dr masaru imoto )ಎಂಬ ಒಬ್ಬ ವಿಜ್ನ್ಯಾನಿಗಳು ತಮ್ಮ ಪ್ರಯೋಗಗಳಿಂದ ತಿಳಿಸಿದ್ದಾರೆ. ಅವರು ನೀರನ್ನು ಪ್ರಾರ್ಥನೆ,ವಿವಿಧ ಶಬ್ದ ತರಂಗ,ಹಾಗೂ ವಿವಿಧ ಭಾವನೆಗಳ ಶಬ್ದಗಳೊಂದಿಗೆ ತಮ್ಮ ಪ್ರಯೋಗವಾದ 'ನೀರಿನ ಮೇಲೆ ಶಬ್ದಗಳ ಪರಿಣಾಮ' ದಲ್ಲಿ ಅಳವಡಿಸಿ ಆಶ್ಚರ್ಯಕರವಾದ ರೀತಿಯಲ್ಲಿ ನೀರಿನ 'ಮಾಲಿಕ್ಯೂಲರ್ ಸ್ಟ್ರಕ್ಚರ್' ಬದಲಾಗುವುದನ್ನು ಕಂಡಿದ್ದಾರೆ.ಮೃದು ಶಬ್ದ,ತರಂಗಗಳಿಂದ ಧನಾತ್ಮಕ ಹಾಗೂ ಕಟ್ಹೊರ ಶಬ್ದ ತರಂಗಗಳಿಂದ ಋಣಾತ್ಮಕ ಪರಿಣಾಮಗಳು ಬಂದಿರುತ್ತವೆ. ಋಷಿ ಮುನಿಗಳ ಮಂತ್ರದ ನೀರಲ್ಲಿ,ದೇವಸ್ಥಾನಗಳಲ್ಲಿ ಕೊಡುವ ತೀರ್ಥಗಳಲ್ಲಿ ತಪಸ್ಸು ಹಾಗೂ ಸಾತ್ವಿಕ ಗುಣಗಳ ಶಕ್ತಿ ಅಡಕವಾಗಿರಬಹುದಲ್ಲವೇ ? ಮಸರು ಅವರು ಇದನ್ನು ಸಾಧಿಸಿ ತೋರಿಸುವ ಪ್ರಯತ್ನವನ್ನು ಮಾಡಿ ತಕ್ಕಮಟ್ಟಿನ ಯಶಸ್ಸನ್ನು ಕಂಡಿದ್ದಾರೆ.ಇದೆ ರೀತಿ ಎಷ್ಟೋ ವಿಚಾರಗಳನ್ನು ನಮ್ಮ ಪೂರ್ವಜರು ನಮ್ಮ ಮುಂದೆ ಇಟ್ಟು ಹೋಗಿದ್ದಾರೆ.ಎಲ್ಲಾ ವಿಚಾರಗಳಿಗೆ ವೈಜ್ಯ್ಞಾನಿಕ ತಳಹದಿ ಇದ್ದೇ ಇರುತ್ತದೆ ಎಂದು ನನ್ನ ಅನಿಸಿಕೆ.ಅದನ್ನು ನಾವು ಸಾಧಿಸಿ ತಿಳಿದು ತಿಳಿಸಬೇಕಷ್ಟೇ.. ಹಾಗೆಯೇ ಹಿತವಾಗಿ,ಒಳ್ಳೆಯದಾಗಿ ಮಾತನಾಡಿ ಎಂದು ಹೇಳುವುದು,ಹಿರಿಯರಿಂದ ಆಶೀರ್ವಾದ ಪಡೆಯುವುದೂ ಶಬ್ದ ತರಂಗಗಳು ಮನಸ್ಸಿನ ಮೇಲೆ ಮಾಡುವ ಪರಿಣಾಮಗಳು ಉತ್ತಮವಾಗಿರಲಿ ಎಂದು. ಕೆಳಗಿನ ಕೊಂಡಿಗಳಲ್ಲಿ ಡಾ.ಮಸರು ಇಮೊತೋ ಅವರ ಬಗ್ಗೆ ಅವರ ಪ್ರಯೋಗಗಳ ಬಗ್ಗೆ ನೋಡಿ ಅರಿಯಬಹುದು.. ಪರಿಚಯ http://en.wikipedia… ಸಂಶೋಧನೆ http://www.life-ent… ಅನಾಲಿಸಿಸ್ ಮತ್ತು ರಿವ್ಯೂ http://www.is-masar…