ಕಲ್ಪನೆಯ ಶತ್ರು ಕನ್ನಡಿಯಾದರೆ ಪೂರ್ಣ ವ್ಯಕ್ತಿತ್ವವು ಆಗಿಹೋದವರಲ್ಲಿ ಮಾತ್ರ ಸಾಧ್ಯ!
(೧೦೬) ಮಾನವನ ಕಲ್ಪನೆಯ ಶತ್ರು ಕನ್ನಡಿ! ನಾವು ಬೇರೆಯವರಿಗೆ ಹೇಗೆ ಕಾಣುತ್ತೇವೆ ಎಂಬುದನ್ನು ಅದು ತೋರಿಸದು. ನಮಗೂ ಸಹ ಅದು ನಮ್ಮನ್ನೇ ತಿರುವು ಮರುವು ಮಾಡಿ ತೋರಿಸುತ್ತದೆ.
(೧೦೭) ಯಾವ ಬಣ್ಣದ ಮಸಿಯನ್ನು ಬರವಣಿಗೆಗೆ ಬಳಸುತ್ತೇವೆಂಬುದು ಬಹಳ ಮುಖ್ಯ. ತೀರ ಅವಸರಸದಲ್ಲಿರುವಾಗ, ಚೆಕ್‍ಬುಕ್ಕನ್ನು ಕೆಂಪು ಮಸಿಯಲ್ಲಿ ಸಹಿ ಮಾಡಿ ನೋಡಿ, ತಿಳಿಯುತ್ತದೆ!
(೧೦೮) ವಾಹನವಿದ್ದಲ್ಲಿ ಮಾರ್ಗ!
(೧೦೯) ಸಂಪೂರ್ಣ ವ್ಯಕ್ತಿತ್ವದ ಮಾನವನೊಬ್ಬನನ್ನು ತೋರಿಸಿ. ಆತ ಸತ್ತಿದ್ದಾನೆಂದು ಸಾಬೀತುಪಡಿಸುವೆ! ಆದ್ದರಿಂದಲೇ ನಿರ್ಭಾವುಕವಾಗಿ ನಾವು ಪರಿಪೂರ್ಣ ವ್ಯಕ್ತಿತ್ವವನ್ನು ಆಗಿಹೋದವರಲ್ಲಿ ಮಾತ್ರ ಗುರ್ತಿಸುವುದು. ಇರುವವರಲ್ಲಿ ಹಾಗೂ ಇನ್ನೂ ಬರುವವರಲ್ಲಿ ಅಂತಹ ಗುಣವನ್ನು ಗುರ್ತಿಸುವುದೆಂದರೆ ನಮ್ಮ ಸ್ವಾರ್ಥಸಾಧನೆಗೆ ಪರ್ಯಾಯ ಮಾರ್ಗವನ್ನು ಹುಡುಕುವುದೇ ಆಗಿದೆ.
(೧೧೦) ನಮ್ಮ ಸಾಮರ್ಥ್ಯವು ನಮ್ಮ ಸಂಪಾದನೆಯ ಇತಿಮಿತಿ. ಮತ್ತು ಆ ಮಿತಿಯ ಹೊರಗೆ ನಾವೇನು ಮಾಡುತ್ತೇವೋ ಅದೇ ಸಾಧನೆ!
Rating
Comments
ಉ: ಕಲ್ಪನೆಯ ಶತೃ ಕನ್ನಡಿಯಾದರೆ ಪೂರ್ಣ ವ್ಯಕ್ತಿತ್ವವು ಆಗಿಹೋದವರಲ್ಲಿ ...
In reply to ಉ: ಕಲ್ಪನೆಯ ಶತೃ ಕನ್ನಡಿಯಾದರೆ ಪೂರ್ಣ ವ್ಯಕ್ತಿತ್ವವು ಆಗಿಹೋದವರಲ್ಲಿ ... by hamsanandi
ಉ: ಕಲ್ಪನೆಯ ಶತೃ ಕನ್ನಡಿಯಾದರೆ ಪೂರ್ಣ ವ್ಯಕ್ತಿತ್ವವು ಆಗಿಹೋದವರಲ್ಲಿ ...