ಸ್ನೇಕ್ ಕಿರಣ್ ಎಂಬ ಹಾವಾಡಿಗ

ಸ್ನೇಕ್ ಕಿರಣ್ ಎಂಬ ಹಾವಾಡಿಗ

ಬರಹ

ಕಿರಣ್ ಶಿವಮೊಗ್ಗದ ವಾಸಿ. ಈತ ಹುಟ್ಟಿದಾಗಿನಿಂದಲೂ ಹಾವನ್ನು ಹಿಡಿಯುವ ವಿದ್ಯೆಯನ್ನು ಕಲಿತವನಲ್ಲ. ಹೊಟ್ಟೆ ಪಾಡಿಗಾಗಿ ಶಿವಮೊಗ್ಗದ ಗ್ಯಾರೇಜ್ ಒಂದರಲ್ಲಿ ಮೆಕ್ಯಾನಿಕ್ ಆಗಿ ಕೆಲಸ ಮಾಡುತ್ತಿದ್ದ. ಮೊದಲು ಸಣ್ಣ ಪುಟ್ಟ ಹಾವುಗಳನ್ನು ಹಿಡಿಯುತ್ತಿದ್ದ ಕಿರಣ್ ನಂತರದ ದಿನಗಳಲ್ಲಿ ಹಾವು ಹಿಡಿಯುವ ಕಲೆಯನ್ನು ಕರಗತ ಮಾಡಿಕೊಂಡ.

 

ಈಗಾಗಲೇ ಚಿಕ್ಕಮಗಳೂರು,ತೀರ್ಥಹಳ್ಳಿ,ಸಾಗರ,ಮಂಡಗದ್ದೆ ಸೇರಿದಂತೆ ಹಲವೆಡೆ ದೊಡ್ಡ ಕಾಳಿಂಗ ಸರ್ಪಗಳನ್ನು ಹಿಡಿದಿದ್ದಾನೆ. ನಾಗರಹಾವಿಗೆ ಲೆಕ್ಕವಿಲ್ಲ. ಇತ್ತೀಚೆಗೆ ಒಂದೇ ಬಾರಿಗೆ 53ಕೊಳಕ ಮಂಡಲ ಹಾವುಗಳನ್ನು ಹಿಡಿದಿದ್ದು ದೊಡ್ಡ ಸುದ್ದಿಯಾಯಿತು. ಮೆನಯಲ್ಲಿ ಹಾವು ಇದೆ ಅಂತಾದರೆ. ತಕ್ಷಣ ಪೋನಾಯಿಸಿದರೆ ಚೀಲದೊಂದಿಗೆ ಕಿರಣ್ ಅಲ್ಲಿಗೆ ಹಾಜರ್. ಬಂದಂತಹ ವಾಹನದ ಬಾಡಿಗೆ ನೀಡಿದರೆ ಆಯಿತು. ಹಾವಿದ್ದರೆ ಮಾತ್ರ ಹೇಳಿ ಬಂದು ಹಾಗೇ ತೆರಳಿದರೆ ನನಗೆ ಬೇಸರವಾಗುತ್ತದೆ ಎನ್ನುತ್ತಾರೆ ಕಿರಣ್. ಹಿಡಿದಂತಹ ಹಾವುಗಳನ್ನು ಕುದುರೆಮುಖದ ಅರಣ್ಯಕ್ಕೆ ಅರಣ್ಯ ಇಲಾಖೆಯ ಸಹಾಯದೊಂದಿಗೆ ಬಿಡುತ್ತಾರೆ. ಹಾವು ಹಿಡಿಯುವುದನ್ನೇ ಕಾಯಕವನ್ನಾಗಿರಿಸಿಕೊಂಡಿರುವ ಕಿರಣ್ ಅನೇಕ ಸಾಧನೆಗಳ ಮಾಡುವ ಕನಸಿನಲ್ಲಿದ್ದಾರೆ. ಒಮ್ಮೆ ಮಾತ್ರ ನಾಗರಹಾವೊಂದು ಕಚ್ಚಿತು ತಕ್ಷಣವೇ ಆಸ್ಪತ್ರೆಗೆ ಸೇರಿದ್ದರಿಂದ ಬದುಕಿದೆ. ಹಾವು ಹಿಡಿಯುವುದು ಒಂದು ಕಲೆಯಷ್ಟೆ, ಇದರಲ್ಲಿ ಯಾವುದೇ ಮಂತ್ರ ತಂತ್ರ ಇಲ್ಲ ಎಂದು ಸ್ಪಷ್ಟಪಡಿಸುತ್ತಾರೆ. ಇದೀಗ ಶಿವಮೊಗ್ಗ ಸುತ್ತಮುತ್ತ ಜಿಲ್ಲೆಗಳಿಗೆ ಕಿರಣ್ ಚಿರಪರಿಚಿತ.