ಇರುವೆಯಲ್ಲಿನ ಒಗ್ಗಟ್ಟು ಮನುಷ್ಯನಲ್ಲೇಕಿಲ್ಲ.

ಇರುವೆಯಲ್ಲಿನ ಒಗ್ಗಟ್ಟು ಮನುಷ್ಯನಲ್ಲೇಕಿಲ್ಲ.

ಬರಹ

ಈ ಲೇಖನ ವಿಶೇಷ ಅಂತಾಗಲಿ, ಅಥವಾ ಯಾರಿಗೂ ಗೊತ್ತಿಲ್ಲದ ವಿಷಯವಂತಾಗಲಿ ಖಂಡಿತಾ ಅಲ್ಲ. ದಿನನಿತ್ಯ ನಮ್ಮ ಕಣ್ಣೆದುರುಗಿನ ಇರುವೆಗಳು ಆಹಾರವನ್ನು ಹೇಗೆ ಹಂಚಿಕೊಂಡು ತಿನ್ನುತ್ತವೆ ಎನ್ನುವುದನ್ನು ನೋಡಿರುತ್ತೇವೆ. ಇವತ್ತು ಬೆಳಗ್ಗೆ ಹೊರಗಡೆ ಜಗುಲಿಯ ಮೇಲೆ ಕೂತಂತಹ ಸಂದರ್ಭದಲ್ಲಿ ಜಿರಲೆಯೊಂದು ಸತ್ತಿದ್ದನ್ನು ಕಂಡೆ. ಅನಾಥ ಶವವಾಗಿ ಬಿದ್ದಿತ್ತು.

 

ಮೊದಲು ಎರಡು ಇರುವೆ ಬಂದು ಸತ್ತಿದ್ದನ್ನ ನೋಡಿ ತನ್ನ ಬಂಧುಗಳಿಗೆ ಹಾಗೂ ಸ್ನೇಹಿತರಿಗೆ "ಬನ್ರೋ ಇವತ್ತು ಒಳ್ಳೇ ಆಹಾರ ಇದೆ" ಎಂದು ತಿಳಿಸಿದವು. ಅವುಗಳ ಜೊತೆಗೆ ಪೂರ್ಣ ಹಿಂಡು ಬರದೆ, ಮತ್ತೆರೆಡು ಇರುವ ಇನ್ಸ್ ಪೆಕ್ಷನ್ ಗೆ ಬಂದವು. ನಂತರದಲ್ಲಿ ಸಂಖ್ಯೆಗಳು ದ್ವಿಗುಣಗೊಳ್ಳುತ್ತಾ. ಒಂದು ನಿಮಿಷದಲ್ಲಿ ನೂರಕ್ಕೂ ಹೆಚ್ಚಿನ ಇರುವೆಗಳು ಜಿರಲೆ ಸಮೀಪ ಜಮಾವಣೆಗೊಂಡಿತು. ಮೊದಲು ಸತ್ತ ಜಿರಲೆಯನ್ನು ಎತ್ತಲು ಕಸರತ್ತು ಮಾಡಿದವು. ನಂತರ ತಲೆ,ಕಾಲು,ದೇಹದ ಬಳಿ ಸೇರಿಕೊಂಡ,ಅವೆಲ್ಲವೂ "ಗೋವಿಂದಾ ಗೋವಿಂದಾ" ಎನ್ನುತ್ತಾ ದೊಡ್ಡ ಗಾತ್ರದ ಜಿರಲೆಯನ್ನು ಗೂಡಿನ ಸಮೀಪ ಕೊಂಡೊಯ್ದವು. ಮನೆ ಸಣ್ಣದಾಗಿದ್ದರಿಂದ ಜಿರಲೆಯ ಪಾರ್ಟ ಬೈ ಪಾರ್ಟ್ ನ್ನು ಒಳಗೆ ತೆಗೆದುಕೊಂಡು ಹೋದವು. ಇದೇನು ದೊಡ್ಡ ವಿಷಯವಲ್ಲ ದಿನನಿತ್ಯ ಹಳ್ಳಿಕಡೆ ಇದಕ್ಕಿಂತಲೂ ವಿಚಿತ್ರ ದೃಶ್ಯಗಳನ್ನು ಸಂಪದಿಗರು ನೋಡಿರುತ್ತಾರೆ. ಇದನ್ನು ನೋಡಿ ನನಗೆನ್ನಿಸಿದ್ದು, ಇದೇ ಒಗ್ಗಟ್ಟು ಮನುಷ್ಯನಲ್ಲಿ ಇದ್ದಿದ್ದರೆ ಇವತ್ತು ಜಾತಿ,ಭಾಷೆ,ಧರ್ಮ ಅಂತಾ ಹೊಡೆದಾಡುವ ಪ್ರಮೇಯವೇ ಬರುತ್ತಿರಲಿಲ್ಲ. ಜಮೀನಿಗಾಗಿ ಕೊಲೆಗಳು ನಡೆಯುತ್ತಿರಲಿಲ್ಲ. ಆಸ್ತಿಗಾಗಿ ಹೊಡೆದಾಟವಿರುತ್ತಿರಲಿಲ್ಲ. ಅವಿಭಕ್ತ ಕುಟುಂಬಗಳನ್ನು ಹೆಚ್ಚಾಗಿ ನೋಡಬಹುದಿತ್ತು. ತಾರತಮ್ಯ ನೀತಿ ಇರುತ್ತಿರಲಿಲ್ಲ ಹೀಗೆ ಹತ್ತು ಅನೇಕ ಪ್ರಶ್ನೆಗಳು ಸುಳಿಯುತ್ತಿದ್ದಾಗಲೇ ನನ್ನ ಮಗಳು ಕ್ಯಾಮೆರಾ ಇಟ್ಟುಕೊಂಡು ಏನ್ಮಾಡ್ತಾ ಇದೀಯಾ, ಶಾಲೆಗೆ ಟೈಂ ಆಯ್ತು ಬಿಡು ಅಂದಿದ್ದಳು.