ಆತ್ಮಹತ್ಯೆ ಮಾಡಿಕೊಂಡಿದ್ದು ಸರಿಯಾ

ಆತ್ಮಹತ್ಯೆ ಮಾಡಿಕೊಂಡಿದ್ದು ಸರಿಯಾ

Comments

ಬರಹ

ಸ್ನೇಹಿತರೆ, ನಿನ್ನೆ ಶಿವಮೊಗ್ಗದಲ್ಲಿ ಒಂದು ದಾರುಣ ಘಟನೆ ಸಂಭವಿಸಿದೆ.

ಪತಿ ಮಂಜುನಾಥನಿಗೆ ಕ್ಯಾನ್ಸರ್, ಆತನನ್ನು ಇತ್ತೀಚೆಗೆ ಮಣಿಪಾಲ್ ಆಸ್ಪತ್ರೆಗೆ ಚಿಕಿತ್ಸೆಗೆಂದು ಸೇರಿಸಲಾಯಿತು. ರೋಗ ದಿನದಿಂದ ದಿನಕ್ಕೆ ಉಲ್ಬಣವಾಗುತ್ತಿತ್ತು. ಇದನ್ನು ತಿಳಿದ ಪತ್ನಿ ಸರೋಜ ಖಿನ್ನಲಾಗಿದ್ದಳಾದರೂ ಗಂಡ ಚೇತರಿಸಕೊಳ್ಳಬಹುದು ಎನ್ನುವ ಆಶಾಭಾವನೆ ಹೊಂದಿದ್ದಳು. ಸರೋಜ ಮೆಗ್ಗಾನ್ ಆಸ್ಪತ್ರೆಯಲ್ಲಿ ಶುಶ್ರೂಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾಳೆ. ಆದರೆ ನಿನ್ನೆ ಮಧ್ಯಾಹ್ನ ಮಣಿಪಾಲ್ ಆಸ್ಪತ್ರೆಯಿಂದ ಇನ್ನು ಕೆಲವೇ ದಿನಗಳಲ್ಲಿ ನಿಮ್ಮ ಗಂಡ ಸಾಯಲಿದ್ದಾರೆ ಎಂಬ ಮಾಹಿತಿ ರವಾನಿಸಿದ್ದಾರೆ.

ಇದನ್ನು ತಿಳಿದ ಸರೋಜ, ತನ್ನ 12ವರ್ಷದ ಮಗಳು ಹಾಗೂ ಸುಮಾರು 10ವರ್ಷದ ಮಗನೊಂದಿಗೆ ಸಾಯುವ ನಿರ್ಧಾರಕ್ಕೆ ಬಂದಿದ್ದಾಳೆ. ಇದಕ್ಕೆಂದು ಊಟದಲ್ಲಿ ವಿಷ ಬೆರೆಸಿ, ತಾನು ಮಗಳು ಮೊದಲು ಸೇವಿಸಿದ್ದಾರೆ. ಮಗ ಬೇಡ ಬೇಡವೆಂದರೂ ಬಲವಂತವಾಗಿ ತುರುಕಿದ್ದಾಳೆ. ಊಟ ಮಾಡಿದ ಕೆಲ ಸಮಯಕ್ಕೆ ಪರಿಚಿತರೊಬ್ಬರು ಬಂದು ಬಾಗಿಲು ಬಡಿದಿದ್ದಾರೆ. ಅರೆ ಪ್ರಜ್ಞಾವಸ್ಥೆಯಲ್ಲಿದ್ದ ಮಗ ಬಾಗಿಲು ತೆಗೆದಿದ್ದಾನೆ. ಅಷ್ಟೊತ್ತಿಗಾಗಲೇ ಸರೋಜ ಮತ್ತು ಮಗಳ ಪ್ರಾಣ ಪಕ್ಷಿ ಹಾರಿಹೋಗಿತ್ತು. ಮಗನನ್ನು ತಕ್ಷಣಕ್ಕೆ ಆಸ್ಪತ್ರೆಗೆ ದಾಖಲಿಸಲಾಗಿದೆಯಾದರೂ ಬದುಕುವುದು ಕಷ್ಟ ಸಾಧ್ಯದ ಮಾತಾಗಿದೆ. ಈಕಡೆ ಪತ್ನಿ ಹಾಗೂ ಮಕ್ಕಳು ತೀರಿಕೊಂಡಿದ್ದ ವಿಷಯ ತಿಳಿದು ಮಂಜುನಾಥ ಹೃದಯಾಘಾತದಿಂದ ಸತ್ತಿದ್ದಾರೆ. ಇವರ ಬಂಧುಗಳು ದಿಕ್ಕೇ ತೋಚದಂತಾಗಿದ್ದಾರೆ.

ಒಂದು ಕುಟುಂಬವೇ ಸರ್ವ ನಾಶವಾದಂತಾಗಿದೆ.

ಆತ್ಮಹತ್ಯೆಗೆ ಮುನ್ನ ಸರೋಜ ಯಾರೊಂದಿಗೂ ಚರ್ಚಿಸಿಲ್ಲ. ಹಾಗೇ ಆತ್ಮಹತ್ಯೆ ಮುನ್ನ ಯಾವ ಪತ್ರವೂ ಬರೆದಿಲ್ಲ.

 

ಇದೀಗ ಎಲ್ಲರಲ್ಲಿರುವ ಪ್ರಶ್ನೆ.

ಸರೋಜಳಿಗೆ ಸರ್ಕಾರಿ ನೌಕರಿಯಿತ್ತು ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ಕೊಡಿಸಿ, ಮುಂದಿನ ದಿನಗಳಲ್ಲಿ ತಾನು ಉತ್ತಮವಾಗಿ ಬದುಕಬಹುದಿತ್ತು ಅಲ್ಲವಾ?

 

ಏನೂ ಗೊತ್ತಿಲ್ಲದ ಮಕ್ಕಳಿಗೆ ವಿಷ ಉಣಿಸಿದ್ದು ಎಷ್ಟು ಸರಿ, ಹೇಗಾದರೂ ಮನಸ್ಸು ಬಂತೋ?

 

ಪತಿಯ ಕಷ್ಟ ನೋಡಲಾರದೇ ಸತ್ತು ಹೋದಳೆ? ಕಟುಂಬದ ಪ್ರೀತಿ ಅಂದರೆ ಇದೇನಾ? ಅವನಿಗಿಲ್ಲದ್ದು ತನಗೆ ಯಾಕೆ ಬೇಕು ಎಂದು ಇಂತಹ ನಿರ್ಧಾರ ಕೈಗೊಂಡಳಾ ?ಹೀಗೆ ಹತ್ತು ಹಲವು ಪ್ರಶ್ನೆಗಳು ಎಲ್ಲರಲ್ಲೂ ಕಾಡುತ್ತಿದೆ.

 

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet