ವಿಶ್ವಕಪ್ ಫುಟ್ಬಾಲ್ : ನೋಡಬೇಕಾದ ಪಂದ್ಯಗಳು; ಕುತೂಹಲಕರ ಮಾಹಿತಿಗಳು
ಈ ಸಲದ ವಿಶ್ವಕಪ್ ಫುಟ್ಬಾಲ್ ಪಂದ್ಯಾವಳಿಯಲ್ಲಿ ೩೨ ತಂಡಗಳು ಒಟ್ಟು ೬೪ ಪಂದ್ಯಗಳನ್ನಾಡುತ್ತವೆ. ನೀವು ಕಿರುತೆರೆಯಲ್ಲಿ ಅಷ್ಟೂ ಪಂದ್ಯಗಳನ್ನೂ ನೋಡುವುದಾದರೆ ಸಂತೋಷ. ಎಲ್ಲ ಪಂದ್ಯಗಳನ್ನೂ ನೋಡಲು ವ್ಯವಧಾನವಿಲ್ಲದೆ ಅಥವಾ ಮನಸ್ಸಿಲ್ಲದೆ, ಕೆಲವು ಆಯ್ದ ಪಂದ್ಯಗಳನ್ನು ಮಾತ್ರ ನೋಡುವವರಾದರೆ ಇಲ್ಲಿದೆ ಆಯ್ದ ಪಂದ್ಯಗಳ ಪಟ್ಟಿ. ಎಲ್ಲ ತಂಡಗಳ ಪ್ರಸ್ತುತ ಸಾಧನೆ ಮತ್ತು ಇತ್ತೀಚಿನ ’ಫಿಫಾ ವಿಶ್ವ ರ್‌ಯಾಂಕಿಂಗ್’ (FIFA World Ranking) ಆಧಾರದಮೇಲೆ ನಾನು ವೈಜ್ಞಾನಿಕವಾಗಿ ಸಿದ್ಧಪಡಿಸಿರುವ ಪಟ್ಟಿ ಇದು:
ಜೂನ್ ೨೬ರಿಂದ ಆರಂಭವಾಗುವ ನಾಕೌಟ್ ಹಂತದ ಎಲ್ಲ ೧೬ ಪಂದ್ಯಗಳನ್ನೂ ತಪ್ಪದೇ ನೋಡಿರಿ.
ಜೂನ್ ೧೧ರಿಂದ ೨೫ರ ರಾತ್ರಿವರೆಗೆ (೨೬ರಂದು ೦೦-೦೦ ಗಂಟೆಗೆ ಆರಂಭವಾಗುವ ಪಂದ್ಯದವರೆಗೆ) ನಡೆಯುವ ಗ್ರೂಪ್ ಹಂತದ ೪೮ ಪಂದ್ಯಗಳ ಪೈಕಿ ಈ ಕೆಳಗಿನ ೧೮ ಪಂದ್ಯಗಳನ್ನು ನೋಡಿರಿ.
(ಆಟದ ಸಮಯ ಭಾರತೀಯ ಕಾಲಮಾನದನ್ವಯ)
* ಜೂನ್ ೧೨ - ೦೦-೦೦ - ಉರುಗ್ವೆ-ಫ್ರಾನ್ಸ್
* ಜೂನ್ ೧೨ - ೧೯-೩೦ - ಅರ್ಜೆಂಟೀನಾ-ನೈಜೀರಿಯಾ
* ಜೂನ್ ೧೩ - ೦೦-೦೦ - ಇಂಗ್ಲೆಂಡ್-ಯುಎಸ್‌ಎ
* ಜೂನ್ ೧೪ - ೦೦-೦೦ - ಜರ್ಮನಿ-ಆಸ್ಟ್ರೇಲಿಯಾ
* ಜೂನ್ ೧೪ - ೧೭-೦೦ - ಹಾಲೆಂಡ್-ಡೆನ್ಮಾರ್ಕ್
* ಜೂನ್ ೧೫ - ೦೦-೦೦ - ಇಟಲಿ-ಪರಗ್ವೆ
* ಜೂನ್ ೧೫ - ೧೯-೩೦ - ಐವರಿ ಕೋಸ್ಟ್-ಪೋರ್ಚುಗಲ್
* ಜೂನ್ ೧೬ - ೧೯-೩೦ - ಸ್ಪೇನ್-ಸ್ವಿಟ್ಸರ್‍ಲೆಂಡ್
* ಜೂನ್ ೧೭ - ೧೯-೩೦ - ಗ್ರೀಸ್-ನೈಜೀರಿಯಾ
* ಜೂನ್ ೧೮ - ೦೦-೦೦ - ಫ್ರಾನ್ಸ್-ಮೆಕ್ಸಿಕೊ
* ಜೂನ್ ೧೮ - ೧೭-೦೦ - ಜರ್ಮನಿ-ಸರ್ಬಿಯಾ
* ಜೂನ್ ೨೧ - ೦೦-೦೦ - ಬ್ರೆಜಿಲ್-ಐವರಿ ಕೋಸ್ಟ್
* ಜೂನ್ ೨೨ - ೧೯-೩೦ - ಮೆಕ್ಸಿಕೊ-ಉರುಗ್ವೆ
* ಜೂನ್ ೨೩ - ೦೦-೦೦ - ಗ್ರೀಸ್-ಅರ್ಜೆಂಟೀನಾ
* ಜೂನ್ ೨೩ - ೧೯-೩೦ - ಸ್ಲೊವೇನಿಯಾ-ಇಂಗ್ಲೆಂಡ್
* ಜೂನ್ ೨೫ - ೦೦-೦೦ - ಕೆಮರೂನ್-ಹಾಲೆಂಡ್
* ಜೂನ್ ೨೫ - ೧೯-೩೦ - ಪೋರ್ಚುಗಲ್-ಬ್ರೆಜಿಲ್
* ಜೂನ್ ೨೬ - ೦೦-೦೦ - ಚಿಲಿ-ಸ್ಪೇನ್
ಈ ೩೪ ಪಂದ್ಯಗಳನ್ನಲ್ಲದೆ, ಆತಿಥೇಯ ದಕ್ಷಿಣ ಆಫ್ರಿಕಾ ಮತ್ತು ಮೆಕ್ಸಿಕೊ ನಡುವಿನ ಪಂದ್ಯವನ್ನು, ಅದು ಪಂದ್ಯಾವಳಿಯ ಆರಂಭಿಕ ಪಂದ್ಯವಾದ್ದರಿಂದ ನೋಡಬಹುದು.
ನಾನು ಪಟ್ಟಿಯಲ್ಲಿ ಸೇರಿಸದಿರುವ ಪಂದ್ಯಗಳೆಂದರೆ ಪ್ರಬಲ-ದುರ್ಬಲ ತಂಡಗಳ ನಡುವಿನ ಪಂದ್ಯಗಳು ಮತ್ತು ಎರಡು ದುರ್ಬಲ ತಂಡಗಳ ನಡುವಿನ ಪಂದ್ಯಗಳು. ಹಾಗೊಂದು ವೇಳೆ ನಿಮ್ಮ ಗಮನಕ್ಕೆ ಬರದ ಯಾವುದಾದರೂ ದುರ್ಬಲ ತಂಡವು ಉತ್ತಮವಾಗಿ ಆಡಿ ನಾಕೌಟ್ ಹಂತ ಪ್ರವೇಶಿಸಿತೆಂದರೆ ಅದರ ಆಟವನ್ನಾಗ ನೀವು ನಾಕೌಟ್ ಹಂತದಲ್ಲಿ ನೋಡಬಹುದು.
ಇನ್ನು, ಕೆಲ ಕುತೂಹಲಕರ ಮಾಹಿತಿಗಳು:
* ವಿಶ್ವ rankingನಲ್ಲಿ ಕ್ರಮವಾಗಿ ೧೦, ೧೧ ಮತ್ತು ೧೨ನೇ ಸ್ಥಾನ ಹೊಂದಿರುವ ಕ್ರೊವೇಷಿಯಾ, ರಷಿಯಾ ಮತ್ತು ಈಜಿಪ್ಟ್ ದೇಶಗಳು ೩೨ ರಾಷ್ಟ್ರಗಳ ಪೈಪೋಟಿಯ ಈ ವಿಶ್ವಕಪ್ ಪಂದ್ಯಾವಳಿಗೆ ಅರ್ಹತೆ ಗಳಿಸಿಲ್ಲ!
* ಅದೇ ವೇಳೆ, ವಿಶ್ವ rankingನಲ್ಲಿ ಕ್ರಮವಾಗಿ ೭೮, ೮೩ ಮತ್ತು ೧೦೫ನೇ ಸ್ಥಾನ ಹೊಂದಿರುವ ನ್ಯೂಜಿಲ್ಯಾಂಡ್, ದಕ್ಷಿಣ ಆಫ್ರಿಕಾ ಮತ್ತು ಉತ್ತರ ಕೊರಿಯಾ (ಡಿಪಿಆರ್ ಕೊರಿಯಾ) ದೇಶಗಳು ಈ ವಿಶ್ವಕಪ್ ಪಂದ್ಯಾವಳಿಗೆ ಅರ್ಹತೆ ಗಳಿಸಿವೆ!
* ವಿಶ್ವ rankingನಲ್ಲಿ ಭಾರತವು ೧೩೩ನೆಯ ಸ್ಥಾನದಲ್ಲಿದೆ! (ಜನಸಂಖ್ಯೆಯಲ್ಲಿ ಭಾರತಕ್ಕೆ ವಿಶ್ವದಲ್ಲಿ ಎರಡನೆಯ ಸ್ಥಾನ.)
* ಫಿಜಿ, ಸ್ವಾಜಿಲ್ಯಾಂಡ್, ಸಿಯೆರಾ ಲಿಯೋನ್, ಕಝಕ್‌ಸ್ತಾನ್, ಲಕ್ಸೆಂಬರ್ಗ್, ಸಿಂಗಪೂರ್, ಫರೋ ದ್ವೀಪಗಳು, ಗ್ರೆನೆಡಾ, ಇಥಿಯೋಪಿಯಾ, ಗಯಾನಾ, ಕಾಂಗೊ ಡಿಆರ್, ಜಾರ್ಜಿಯಾ, ಆಂಟಿಗುವಾ-ಬರ್ಬುಡಾ, ಸೂಡಾನ್, ವಿಯೆಟ್ನಾಂ, ಬೋಟ್ಸ್ವಾನಾ, ಕೇಯ್ಪ್ ವರ್ಡ್ ದ್ವೀಪಗಳು, ಗ್ವಾಟೆಮಾಲಾ, ಯೆಮೆನ್, ಅಜರ್‌ಬೈಜಾನ್, ರ್‍ವಾಂಡಾ, ಕಾಂಗೊ, ಲಿಬ್ಯಾ, ಎಸ್ಟೋನಿಯಾ, ಉಜ್ಬೆಕಿಸ್ತಾನ್, ಗಾಂಬಿಯಾ, ಹೈಟಿ, ಗಿನಿ, ಮಲಾವಿ, ಟೋಗೊ, ಮಾಂಟೆನೆಗ್ರೊ, ಎಫ್‌ವೈಆರ್ ಮಸೆಡೋನಿಯಾ, ಬೆನಿನ್, ಮಾಲಿ ಮುಂತಾದ ಪುಟ್ಟ/ಹಿಂದುಳಿದ/ಹೆಸರು ಕೇಳಿರದ ರಾಷ್ಟ್ರಗಳು ವಿಶ್ವ rankingನಲ್ಲಿ ಭಾರತಕ್ಕಿಂತ ಉನ್ನತ ಸ್ಥಾನದಲ್ಲಿವೆ! (ಇನ್ನೂ ನಾವು ಕ್ರಿಕೆಟ್ಟೊಂದನ್ನೇ ತಲೆಮೇಲೆ ಹೊತ್ತುಕೊಂಡಿದ್ದೇವೆ.)
* ಗಬೊನ್, ಲಾತ್ವಿಯಾ, ಬರ್ಕಿನಾ ಫಾಸೊ, ಲಿತ್ವೇನಿಯಾ ಈ ಹೆಸರುಗಳನ್ನು ಕೇಳಿದ್ದೀರಾ? ಈ ಪುಟಾಣಿ ದೇಶಗಳು ಫುಟ್ಬಾಲ್‌ನ ವಿಶ್ವ rankingನಲ್ಲಿ ಪ್ರಥಮ ೫೦ರೊಳಗಿನ ಸ್ಥಾನ ಗಳಿಸಿವೆ! ಈ ದೇಶಗಳ ಜನಸಂಖ್ಯೆ ಕ್ರಮವಾಗಿ ೧೫ ಲಕ್ಷ, ೨೨ ಲಕ್ಷ, ಒಂದೂವರೆ ಕೋಟಿ ಮತ್ತು ೩೩ ಲಕ್ಷ.
* ಈ ಸಲದ ವಿಶ್ವಕಪ್ ಪಂದ್ಯಾವಳಿಯಲ್ಲಿ ಅರ್ಹತೆ ಗಳಿಸಿ ಆಡುತ್ತಿರುವ ಉರುಗ್ವೆ ಮತ್ತು ಸ್ಲೊವೇನಿಯಾ ದೇಶಗಳ ಜನಸಂಖ್ಯೆ ಕ್ರಮವಾಗಿ ೩೫ ಲಕ್ಷ ಮತ್ತು ೨೦ ಲಕ್ಷ. (ಬೆಂಗಳೂರಿನ ಜನಸಂಖ್ಯೆಯೇ ೬೦ ಲಕ್ಷ ದಾಟಿದೆ.)
ಭಾರತದ ಕ್ರಿಕೆಟ್‌ಗೆ ಜಯವಾಗಲಿ.
ಭಾರತದ ಫುಟ್ಬಾಲ್ ಆಟ ಕೂಡ ಉನ್ನತಿಗೇರಲಿ. ಈ ನಿಟ್ಟಿನಲ್ಲಿ ದೇಶಾದ್ಯಂತ ಈ ವಿಶ್ವಕಪ್ ಫುಟ್ಬಾಲ್ ಪಂದ್ಯಾವಳಿಯು ಪ್ರೇರಣೆಯಾಗಲಿ.