"ನಿಕ್ಷಿಪ್ತ..., ನಿಗಮ್ಯ...,ನಿರ್ಮಲ,,."

"ನಿಕ್ಷಿಪ್ತ..., ನಿಗಮ್ಯ...,ನಿರ್ಮಲ,,."

ರಾತ್ರಿ ಸಾರ್ಥಕ ನಿದ್ದೆ ಮಾಡಿದಂತೆ ಬೆಳಗ್ಗೆ ಎದ್ದಾಗ ಅನಿಸಿ ತುಂಬಾ  ದಿನವಾಗಿದೆ ,
ಎಂತಹ ಸುಂದರ ಬೆಳಗೂ .....!..?ಬಹುಷಃ ಕತ್ತಲೆಯನ್ನು ಒಡಲೊಳಗೆ
 ಕಾಣದಂತೆ ತುಂಬಿಕೊಂಡ ಬೆಳಕೊಂದೆ  ಸತ್ಯವೇನೋ ,,,,,,,,?


ತಲೆಯಲ್ಲೇನೋ ಸೆಳೆತ... ಹಾಗೆಯೇ ಒಳಗೂ ಬದುಕಿನ ಬಗೆಗಿನ ವೈಚಾರಿಕ  ಸೆಳೆತ ...
ಬಹಳ ದಿನಗಳಿಂದ ಮಾತಿರಲಿ, ಏನು ಬೇಡವಾಗಿದೆ..
ಅದು ಇದು ,,ಅವರು ಇವರು,,,,,,ಸಂಭಂದಗಳ
ಬೇಕುಬೇಡಗಳ ವಿಚಿತ್ರ ಸುಳಿಯಲ್ಲಿ ಬದುಕಿನ ಚಕ್ರ ಸಿಲುಕಿದೆ....


ಮನಸ ಮೂಲೆಯಲ್ಲಿ ಸುಂದರ ಬಣ್ಣ ಬಿಡಿಸಿ, ರೂಪು ಕೊಟ್ಟು,
ಜೀವ ಬರಿಸಿ, ನಮ್ಮವರು ಎಂದು ಕರೆಯುವ ಹಂಬಲ...
ಹೊರಗಿನ ಯಾರನ್ನೋ ನಮ್ಮವರು ಎಂದುಕೊಳ್ಳುವುದಕ್ಕಿಂತ ಒಳಗಿನ ನಾವು ಕಲ್ಪಿಸಿದ ನಮ್ಮವರು ಲೇಸಲ್ಲವೇ??
ಅವರಿಂದ ಯಾವ ತೆರನಾದ ನೋವನ್ನು ಪಡೆಯದೇ ಬರಿಯ ಸಂತಸ, ಸಡಗರ,ಹೊಸ ಉನ್ಮಾದದ
ಕ್ಷಣಗಳನ್ನು ರಾಶಿ ರಾಶಿ ಪದೆಯಬಹುದೀನೋ...??
ಆದರೆ ಸುಖದ ಅಪೇಕ್ಷೆಗಳಸ್ಟೇ ಸರಿಯಲ್ಲ,,,,,,ಈ ಜಗಳ,ಸಂಕಟ, ಇರದೇ ಬರಿಯ ಉನ್ಮತ್ತವಾದ ಪ್ರೀತಿಯ ಸೆಲೆಯಲ್ಲಿ ಸಿಕ್ಕು ಈ ಜಗದ ವಿಲಕ್ಷಣ ಸ್ತಿತಿಯನ್ನು ಮರೆಬಹುದೇನೋ ಅಂತ ಅಸ್ಟೇ...!!!


ಸರಿ, ಈ ನಂಬಿಕೆ ಎಂಬುದು ಯಾರಿಗಾದರೂ ,ಯಾವುದರ ಮೇಲಾದರೂ ಕಾಲಗಣನೆಗೆ ಬರದೇ ಉದ್ಭವಿಸುವುದೇ ..?
ಗೊತ್ತು ಅವರು ಸರಿಆಗಲಾರರು ಎಂದು! ಆದರೂ ಅವರ ಹಿಂದೇ ಹೋಗುವುದೇಕೆ?
ಅವರನ್ನೇ ಮನಸು ದ್ಯಾನಿಸುವುದೇಕೆ?
ಬೇಡುವುದೇಕೆ ?ಕ್ಷಣವೂ ನೆನಪೇಕೆ? ಕಲ್ಪಿಸಿಕೊಂಡು ಸುತ್ತದುವುದೇಕೆ? ಗರಿಸ್ಟಮಟ್ಟದ ಈ ತೃಪ್ತಿ ಏಕೆ?
ಈ ಪ್ರೀತಿ ವಿಚಿತ್ರವಲ್ಲವ.?ಹುಚ್ಚು ವ್ಯಾಮೊಹ...! ಹಪಹಪಿಕೆ !!   ಯಾರಲ್ಲಿ  ? ಪ್ರೀತಿಯಲ್ಲಾ?ಆ ವ್ಯಕ್ತಿಯಲ್ಲ?
ಒಮ್ಮೊಮ್ಮೆ ನೋಡದೇನೆ ,ಭೇಟಿಯಾಗದೇನೆ, ಏನು ಇಲ್ಲದೆ ಸುಮ್ಮನೆ ಮೂಡುವ ಈ ಹೊಸ ಚಿಗುರಿಗೆ ಹೆಸರೆನಿದೆ?
ಭಾವನೆಗಳು ಮನುಷ್ಯನನ್ನು ಬಡಿದೆಬ್ಬಿಸುತ್ತದೆನೋ....ನಿಜವೇ......!..

ಎಲ್ಲಿ ಮರೆಯಾಗಿರುತ್ತದೋ,ಏನೋ, ಕ್ಷಣ ಮಾತ್ರಕ್ಕೆ ಮೊಳೆತು, ಸಸಿಯಾಗಿ, ಹೆಮ್ಮರವಾಗಿ, ಭದ್ರವಾಗಿ, ಬೇರು ಬಿಡುತ್ತಂತೆ,,,,.
"ಎಲ್ಲದನ್ನು ಹತ್ತಿಕ್ಕುವ, ಎಲ್ಲವನ್ನೂ ತುಂಬಿಕೊಳ್ಳುವ ಪ್ರೀತಿ ಅದು. ಇದೆಲ್ಲದರ ಆಳ ಅಳತೆ ಬೇರೊಬ್ಬರಿಗೆ ತಿಳಿದೀತೇ ?


ಮನಸ್ಸಿನ ತುಮುಲಗಳು ಹೆಚ್ಚಾದಂತೆ ದುಗುಡಗಳು ಬೆಳೆಯುವುದಲ್ಲಾ!! ಈ ದುಗುಡ ಹೋಗಲೂ ಬಹಳಾ ಸಮಯ ಬೇಕಾದೀತೋ ಏನೋ...
?ಈ ವೈರುದ್ಯಗಳ ಮಧ್ಯೆ  ಈ ರೀತಿ ಬೇರ್ಪಡುವ ಸಂಕಸ್ಟಗಳೂ ವೈವಿಧ್ಯಮಯವೇ,,,,,ಅಹುದೇನೊ....!..?
ಈ ನಿಂದನೆಯೂ ಹೀಗೆ ಅಲ್ಲವೇ...
ಮಾತನ್ನು ಮುಂದಿಟ್ಟು ಕೊಂಡು ಬದುಕನ್ನು ಬೇರೆಯವರ ನೋಟದಿಂದ ನೋಡುವ, ಬೇರೆಯವರ ನೋಟ ಗ್ರಹಿಸಿ ಬಹಳಾ
ಉಮ್ಮಳಕ್ಕೆ ಒಳಗಾದೆ...ಮನಸ್ಸು ಪ್ರಕ್ಶುಭ್ದವಾಗಿದೆ....  ಹೀಗಿರುವಾಗ ಸಾರ್ಥಕ ನಿದ್ದೆಗೆಲ್ಲಿ ಜಾಗ??


ಬದುಕಿನ ವಿಸ್ತಾರವಾದ ಹೊoಬಣ್ಣದ  ಹಂದರಕ್ಕೆ ಒಂದು ಲಯವಿದೆ.....
ಪ್ರಕೃತಿಯನ್ನು ಆರಾಧಿಸುವ ಮತ್ತು ಅದರೊಂದಿಗೆ ಮಾತಾಡುವ ಯಾವನಿಗಾದರೂ ಈ ಸತ್ಯ ಅರ್ಥವಾದೀತು,, ಹಾಗೆಯೇ ಬದುಕು.ಪ್ರಕೃತಿಯಂತೆಯೇ..ಅಲ್ಲವೇ?
"ನಿಕ್ಷಿಪ್ತ..., ನಿಗಮ್ಯ...,ನಿರ್ಮಲ,,."
Rating
No votes yet

Comments