ಸಂಸ್ಕೃತಿ - ಹಾಗೆಂದರೇನು?
ಇತ್ತೀಚಿಗೆ ಸಂಸ್ಕೃತಿಯ ಕುರಿತಾಗಿ ಸಂಪದದ ಮತ್ತೊಂದು ಪುಟದಲ್ಲಿ ವಾದ-ವಿವಾದಗಳು ನಡೆದವು.
ಆದರೆ, ಅದರ ಅಂತ್ಯ ಸರಿಯಾಗಿ ಆಗಲಿಲ್ಲ.
ನನಗನ್ನಿಸಿದಂತೆ ಅದಕ್ಕೆ ಕಾರಣ, "ಸಂಸ್ಕೃತಿ" ಎಂಬ ಪದವನ್ನು ಕೇಳಿದಾಗ ಪ್ರತಿಯೊಬ್ಬರೂ ವಿವಿಧ ರೀತಿಯಲ್ಲಿ ಅರ್ಥೈಸುತಾರೆ.
ಹಾಗಾದರೆ "ಸಂಸ್ಕೃತಿ"ಯ ನಿಜವಾದ ಅರ್ಥವೇನು, ಎಂಬುದನ್ನು ಪತ್ತೆ ಹಚ್ಚಲು ಈ ಒಂದು ಪ್ರಯತ್ನ.
ಮೊದಲಿಗೆ "ಸಂಸ್ಕೃತಿ" ಪದದ ಕುರಿತಾಗಿ ನನ್ನ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿರುವೆ.
ತನ್ಮೂಲಕ ಚರ್ಚೆ ಪ್ರಾರಂಭವಾಗಲೆಂದು ಆಶಯ.......ಅಥವಾ ಮತ್ತೆ ವಾದ-ವಿವಾದಗಳೇ ಮರುಕಳಿಸುತ್ತವೋ ಕಾದು ನೋಡೋಣ.
ಸಂಸ್ಕೃತಿ ಎಂಬುದು ಎರಡು ಪದಗಳನ್ನು ಒಳಗೊಂಡಿದೆ - ಸಮ್ಯಕ್ + ಕೃತಿ.
ಕೃತಿ ಎಂದರೆ ಕೆಲಸ.
ಅದನ್ನೇ ಚೆನ್ನಾಗಿ ಮಾಡಿದಾಗ ಅದು ಸಂಸ್ಕೃತಿಯಾಗುತ್ತದೆ.
ಇದಕ್ಕೆ ವಿರುದ್ಧವಾದದ್ದೇ ವಿಕೃತಿ.
ಉದಾಹರಣೆಗೆ ಊಟವೆಂಬ ಕೆಲಸವನ್ನೇ ನೋಡೋಣ.
ಊಟ ಮಾಡುವುದು ಕ್ರಿಯೆ ಅಥವಾ ಕೃತಿ.
ಊಟ ಮಾಡುವ ಮೊದಲು, ಎಲ್ಲರಿಗು ಬಡಿಸಿದ್ದಾರೆಯೇ, ಎಲ್ಲರಿಗೂ ಎಲ್ಲವು ಬಂದಿದೆಯೇ, ಎಂದೆಲ್ಲಾ ನೋಡಿ ನಂತರ ಊಟ ಮಾಡುವುದು ಸಂಸ್ಕೃತಿ.
ಇಲ್ಲಿ ಇನ್ನು ಒಂದು ಮುಂದೆ ಹೋಗಿ, ಸುತ್ತಲಿರುವ ಪ್ರಾಣಿ-ಪಕ್ಷಿಗಳಿಗಾಗಿಯೂ ಸ್ವಲ್ಪ ಊಟವನ್ನು ತೆಗೆದಿಡಬಹುದು, ಹಸಿದವರಿಗೆ ಮೊದಲು ಕೊಟ್ಟು ನಂತರ ನಮ್ಮ ಊಟ ಮಾಡಬಹುದು......
ಇದಕ್ಕೆ ವ್ಯತಿರಿಕ್ತವಾಗಿ, ಪಕ್ಕದ ತಟ್ಟೆಯಲ್ಲಿರುವುದನ್ನೂ ತೆಗೆದುಕೊಂಡು, ಅವರಿಗಿಲ್ಲದಂತೆ ಮಾಡಿಬಿಡುವುದು ವಿಕೃತಿ.
ಹೀಗೆ ಪ್ರತಿಯೊಂದು ಸಂಗತಿಯ ಕುರಿತಾಗಿ ಒಂದು ಸಮೂಹವು ತನಗೆ ಒಳ್ಳೆಯದೆನಿಸಿದ್ದನ್ನೆಲ್ಲಾ ಸೇರಿಸಿಕೊಂಡು, ಅದನ್ನು ಪದ್ಧತಿಯನ್ನಾಗಿಯು ಮಾಡಿಕೊಂಡು, ಆಚರಣೆಗೆ ತರುವುದೋ ಅದನ್ನೇ ಸಂಸ್ಕೃತಿ ಎನ್ನಬಹುದು.
ಹಾಗೆಂದ ಮಾತ್ರಕ್ಕೆ ಆ ಸಮೂಹ ಮಾಡಿದ್ದೆಲ್ಲ ಸಂಸ್ಕೃತಿಯೇ ಆಗಿರಬೇಕೆಂದಿಲ್ಲ.
ಅದರಲ್ಲಿ ವಿಕೃತಿಗಳು ಸೇರಿರಬಹುದು.
ಉದಾಹರಣೆಗೆ, ನಮ್ಮ ಸಮಾಜದಲ್ಲಿರುವ ಜಾತೀಯತೆ, ಅಸ್ಪೃಶ್ಯತೆ, ಮುಂತಾದವು ವಿಕೃತಿಗಳು.
ಅದೇ ರೀತಿ, ವಿಧವೆಯರು ತಲೆ ಬೋಳಿಸುವುದು, ಕೆಲವೊಮ್ಮೆ ಕೇಳಿಬರುವ ಸತಿಪದ್ಧತಿ, ಬಾಲ್ಯ ವಿವಾಹ, ಇತ್ಯಾದಿಗಳೂ ವಿಕೃತಿಗಳೇ.
ಯಾವ ಸಮಾಜ ತನ್ನಲ್ಲಿನ ವಿಕೃತಿಗಳನ್ನು ಒಪ್ಪಿಕೊಂಡು ಅವನ್ನು ತೆಗೆದುಹಾಕಲು ಪ್ರಯತ್ನಿಸುವುದೋ, ಅದನ್ನೂ ಕೂಡಾ ಸಂಸ್ಕೃತಿ ಎಂದೆ ಹೇಳಬಹುದು.
ಸಂಸ್ಕೃತಿ ಎಂಬುದು ನಿರಂತರ ಪ್ರಕ್ರಿಯೆ. ಅದು ಎಂದೂ ನಿಲ್ಳುವಂತಹದಲ್ಲ - ಅಲ್ಲಿ continuous improvement ಇರಬೇಕು.
ಈ ಬೆಳವಣಿಗೆ ನಿಂತರೆ, ಅದು ನಿಂತ ನೀರಿನಂತಾಗುವುದು ಮತ್ತು ಕಡೆಗೆ ಅಲ್ಲಿ ಉಳಿಯುವುದು ಕೇವಲ ವಿಕೃತಿ.
Comments
ಉ: ಸಂಸ್ಕೃತಿ - ಹಾಗೆಂದರೇನು?
In reply to ಉ: ಸಂಸ್ಕೃತಿ - ಹಾಗೆಂದರೇನು? by ananthesha nempu
ಉ: ಸಂಸ್ಕೃತಿ - ಹಾಗೆಂದರೇನು?
In reply to ಉ: ಸಂಸ್ಕೃತಿ - ಹಾಗೆಂದರೇನು? by ssnkumar
ಉ: ಸಂಸ್ಕೃತಿ - ಹಾಗೆಂದರೇನು?
In reply to ಉ: ಸಂಸ್ಕೃತಿ - ಹಾಗೆಂದರೇನು? by ssnkumar
ಉ: ಸಂಸ್ಕೃತಿ - ಹಾಗೆಂದರೇನು?
ಉ: ಸಂಸ್ಕೃತಿ - ಹಾಗೆಂದರೇನು?
In reply to ಉ: ಸಂಸ್ಕೃತಿ - ಹಾಗೆಂದರೇನು? by mpneerkaje
ಉ: ಸಂಸ್ಕೃತಿ - ಹಾಗೆಂದರೇನು?
In reply to ಉ: ಸಂಸ್ಕೃತಿ - ಹಾಗೆಂದರೇನು? by suresh nadig
ಉ: ಸಂಸ್ಕೃತಿ - ಹಾಗೆಂದರೇನು?
In reply to ಉ: ಸಂಸ್ಕೃತಿ - ಹಾಗೆಂದರೇನು? by ssnkumar
ಉ: ಸಂಸ್ಕೃತಿ - ಹಾಗೆಂದರೇನು?
In reply to ಉ: ಸಂಸ್ಕೃತಿ - ಹಾಗೆಂದರೇನು? by mpneerkaje
ಉ: ಸಂಸ್ಕೃತಿ - ಹಾಗೆಂದರೇನು?
In reply to ಉ: ಸಂಸ್ಕೃತಿ - ಹಾಗೆಂದರೇನು? by shanmukha24
ಉ: ಸಂಸ್ಕೃತಿ - ಹಾಗೆಂದರೇನು?
In reply to ಉ: ಸಂಸ್ಕೃತಿ - ಹಾಗೆಂದರೇನು? by ssnkumar
ಉ: ಸಂಸ್ಕೃತಿ - ಹಾಗೆಂದರೇನು?
In reply to ಉ: ಸಂಸ್ಕೃತಿ - ಹಾಗೆಂದರೇನು? by ksraghavendranavada
ಉ: ಸಂಸ್ಕೃತಿ - ಹಾಗೆಂದರೇನು?
In reply to ಉ: ಸಂಸ್ಕೃತಿ - ಹಾಗೆಂದರೇನು? by ssnkumar
ಉ: ಸಂಸ್ಕೃತಿ - ಹಾಗೆಂದರೇನು?
In reply to ಉ: ಸಂಸ್ಕೃತಿ - ಹಾಗೆಂದರೇನು? by ssnkumar
ಉ: ಸಂಸ್ಕೃತಿ - ಹಾಗೆಂದರೇನು?
In reply to ಉ: ಸಂಸ್ಕೃತಿ - ಹಾಗೆಂದರೇನು? by gnanadev
ಉ: ಸಂಸ್ಕೃತಿ - ಹಾಗೆಂದರೇನು?
ಉ: ಸಂಸ್ಕೃತಿ - ಹಾಗೆಂದರೇನು?
In reply to ಉ: ಸಂಸ್ಕೃತಿ - ಹಾಗೆಂದರೇನು? by shreekant.mishrikoti
ಉ: ಸಂಸ್ಕೃತಿ - ಹಾಗೆಂದರೇನು?
In reply to ಉ: ಸಂಸ್ಕೃತಿ - ಹಾಗೆಂದರೇನು? by Praveen Konandur
ಉ: ಸಂಸ್ಕೃತಿ - ಹಾಗೆಂದರೇನು?