ಎಪ್ಪತ್ತೈದರ ವೃದ್ಧನನ್ನು ಮರಕ್ಕೆ ತೂಗು ಹಾಕಿದ ಪೊಲೀಸರು?

ಎಪ್ಪತ್ತೈದರ ವೃದ್ಧನನ್ನು ಮರಕ್ಕೆ ತೂಗು ಹಾಕಿದ ಪೊಲೀಸರು?

Comments

ಬರಹ

himse

 

ಇದು ನಡೆದಿರುವುದು ರಾಜಸ್ತಾನದ ಧೋಲ್ಪುರ್ ಎಂಬಲ್ಲಿ. ಮಾರ್ಚ್ 27ರಂದು ಇಲ್ಲಿನ ಗ್ಯಾರೇಜ್ ಒಂದರಲ್ಲಿ 1.5 ಲಕ್ಷ ರೂಪಾಯಿ ದರೋಡೆ ನಡೆದಿತ್ತು. ಇಲ್ಲಿದ್ದ ಮೊಬೈಲ್ ಫೋನನ್ನೂ ದರೋಡೆಕೋರರು ಹೊತ್ತೊಯ್ದಿದ್ದರು. ಇದೇ ಆಧಾರದಲ್ಲಿ ಪೊಲೀಸರು ಬಲೆ ಬೀಸಿ ವೃದ್ಧ ಜೈದೇವ್ ಅವರನ್ನು ಬಂಧಿಸಿದ್ದಾರೆ. ಪೊಲೀಸರ ಪ್ರಕಾರ ಇಲ್ಲಿನ 'ಬಾವಾರಿಯಾ ಗ್ಯಾಂಗ್' ನಾಯಕ ಈ 75ರ ವೃದ್ಧ. ಇವರ ಜತೆ ಇತರ 12 ಮಂದಿಯನ್ನೂ ವಶಕ್ಕೆ ತೆಗೆದುಕೊಳ್ಳಲಾಗಿದೆ. ಆದರೆ ಜೈದೇವ್ ಮತ್ತು ಇನ್ನೊಬ್ಬ ವ್ಯಕ್ತಿಗೆ ಮಾತ್ರ ಈ ರೀತಿ ಚಿತ್ರಹಿಂಸೆ ನೀಡಲಾಗಿದೆ.ಈ ಇಳಿ ವಯಸ್ಸಿನ ವ್ಯಕ್ತಿಯ ಕೈಗಳನ್ನು ಹಿಂದಿನಿಂದ ಕಟ್ಟಿ, ಠಾಣೆಯ ಆವರಣದಲ್ಲೇ ಇದ್ದ ಮರಕ್ಕೆ ನೇತು ಹಾಕಿದ್ದರು. ಮಾಧ್ಯಮಗಳಲ್ಲಿ ಚಿತ್ರಸಹಿತ ಪ್ರಕರಣ ಬಹಿರಂಗವಾಗುತ್ತಿದ್ದಂತೆ ಪೊಲೀಸರು ತೇಪೆ ಹಚ್ಚಲು ಯತ್ನಿಸಿದ್ದಾರೆ. ಜೈದೇವ್ ಸೇರಿದಂತೆ ಎಲ್ಲಾ ಆರೋಪಿಗಳನ್ನು ತಕ್ಷಣವೇ ಬಿಡುಗಡೆ ಮಾಡಲಾಗಿದೆ.
75ರ ವೃದ್ಧನೊಬ್ಬನನ್ನು ಮರಕ್ಕೆ ನೇತು ಹಾಕಿದ ಪೊಲೀಸರು ಮನಸೋ ಇಚ್ಛೆ ಹಿಂಸಿಸಿದ್ದನ್ನು ಸ್ಥಳೀಯ ಛಾಯಾಚಿತ್ರಗಾರನೊಬ್ಬ ಸೆರೆ ಹಿಡಿದ ನಂತರ ತೀವ್ರ ವಿವಾದಕ್ಕೆ ಕಾರಣವಾಗಿದೆ.
ಇವನ್ನು ನಿಯಂತ್ರಿಸಲು ಮಾನವ ಹಕ್ಕುಗಳ ಆಯೋಗ ಮತ್ತು ಸಂಘಟನೆಗಳು ಶತಯತ್ನ ನಡೆಸುತ್ತವೆ. ಆದರೂ ಅಮಾನವೀಯ ಕೃತ್ಯಗಳು ಮಾತ್ರ ನಿಲ್ಲುತ್ತಿಲ್ಲ.

 

ಫೋಟೋ ಕೃಪೆ :Kannada.webduniya.com

 

 

-ಚೈತನ್ಯ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet