ಅ೦ತಿಮ ಬಯಕೆ...
ಬರಹ
ನೀ ಜೊತೆಯಿಲ್ಲದಿರೆ ಏನು?, ನೀ ಕೊಟ್ಟ ನೆನಪುಗಳ ಕಾಣಿಕೆಯಿದೆ...
ನನ್ನ ಏಣಿಕೆಯ ದಿನಗಳನ್ನು, ನಿನ್ನ ನೆನಪುಗಳು ಸೊಗಸಾಗಿಸಿದೆ...
ನಿನ್ನ ನೆನಪು ಪುಟ್ಟ ಮಗುವಿನ೦ತೆ ಮುಗ್ದ್ದ ಕಣೇ...
ಅದು ನೋಯಿಸಿದರು ಚೆ೦ದ, ನಗಿಸಿದರೋ ಆನ೦ದ...
ಬರಿ ನೋವನ್ನು೦ಡ ಜೀವವಿದು, ಸುಖವ ಹುಡುಕುತ್ತ ಸ್ವರ್ಗದೆಡೆಗೆ ಓಡಿದೆ...
ಸ್ವರ್ಗ ಸು೦ದರವೆ೦ಬ ಕರೆಗೆ ಓಗೊಟ್ಟು, ನಿನ್ನ ನೆನಪಿನಮೃತವ ತ್ಯಜಿಸಿದೆ...
ಗುಟ್ಟೊ೦ದ ಹೇಳುವೆನು ಕೇಳೇ, ನನ್ನ ಜೀವಕ್ಕೆ ಅರಿವಿಲ್ಲ...
ಸ್ವರ್ಗ ಸು೦ದರವೆ೦ದು ತಿಳಿದ ಅದಕ್ಕೆ ಗೊತಿಲ್ಲ, ಸ್ವರ್ಗದಲ್ಲೂ ನೋವು೦ಟೆ೦ದು...
ಸ್ವರ್ಗದ ಮೋಹವ ಜೀವ೦ತವಾಗಿಡಲು, ಆ ನೋವಿಗೆ ಪ್ರೀತಿಯೆ೦ಬ ಹೆಸರು೦ಟೆ೦ದು...
ನೂರೊ೦ದು ಬಯಕೆ ನನ್ನೊಡನೆ ಸುಟ್ಟು ಬೂದಿಯಾದರು...
ಕಿವಿಗೊಟ್ಟು ಕೇಳು, ನನ್ನ ಕೊನೆಯ ಬಯಕೆಯ ಹೇಳುವೆ...
ನೀ ಕಾಯುವುದಾದರೆ ಚೆಲುವೆ, ನಾ ಮತ್ತೆ ಹುಟ್ಟಿ ಬರುವೆ...