'ಕನ್ನಡ ಪುಸ್ತಕ ಮಾರಾಟ ಮಳಿಗೆ' ಉದ್ಘಾಟನಾ ಸಮಾರಂಭ- ಮುಂಬೈನಲ್ಲಿ !

Submitted by venkatesh on Thu, 12/21/2006 - 12:17

ಮೇಲೆ ಹೇಳಿದ ಸಮಾರಂಭ ಮತ್ತು 'ವಾಚನಾಭಿರುಚಿ ಕಮ್ಮಟ'ಮುಂಬೈನ ಮಾಟುಂಗಾದಲ್ಲಿರುವ ಮೈಸೂರ್ ಅಸೋಸಿಯೇಷನ್ ನ ಭವ್ಯ ಆಂಗಣದಲ್ಲಿ ಈ ತಿಂಗಳ ೨೩ ಮತ್ತು ೨೪ ರಂದು ನಡೆಯಲಿದೆ. ಈಗಾಗಲೇ ಸದಸ್ಯರಿಗೆ 'ಕರೆಯೋಲೆ' ಕಳಿಸಿದ್ದಾಗಿದೆ. ಆದರೆ ಇದರ ಉಪಯೋಗವನ್ನು ಮುಂಬೈನ ಎಲ್ಲ ಕನ್ನಡಿಗರೂ ಪಡೆಯಬಹುದು !

ಕನ್ನಡ ಪ್ರಾಧಿಕಾರದ ಬಹುಮೂಲ್ಯ ಕನ್ನಡದ ಕಿರುಹೊತ್ತಿಗೆಗಳನ್ನು ಅತ್ಯಂತ ಜಾಗರೂಕತೆಯಿಂದ 'ಚಿಣ್ಣರ' ಆಸಕ್ತಿಗಳನ್ನು ಮನಸ್ಸಿನಲ್ಲಿ ಇಟ್ಟುಕೊಂಡು ಬರೆಯಲಾಗಿದೆ. ಉದಾ: ನಮ್ಮ ಪ್ರೀತಿಯ, ಹೆಮ್ಮೆಯ ರಾಷ್ಟ್ರಪತಿ, ಶ್ರೀ ಡಾ.ಅಬ್ದುಲ್ ಕಲಾಂ ರವರ ಬಗ್ಗೆ ಶ್ರೀ.ಪ್ರೊಫೆಸರ್ ರಾಮಕೃಷ್ಣರಾಯರು ಬರೆದು ಸಿದ್ಧಪಡಿಸಿರುವ ಪುಸ್ತಕವನ್ನು ಒದುವುದು ಒಂದು 'ರಸಕವಳ'ವನ್ನು ಮೆದ್ದಂತೆ ! ಎಷ್ಟು ಸರಳ ! ಎಲ್ಲ ವಿವರಗಳನ್ನು ಅವರ ಬಾಳಿನ ಉದ್ದಕ್ಕೂ ನಡೆದ ಎಲ್ಲಾ ಸನ್ನಿವೇಷಗಳನ್ನೂ ರಚಿಸಿ, ಕನ್ನಡದಲ್ಲಿ ಇಷ್ಟು ಸೂಕ್ಶ್ಮತೆಗಳನ್ನೂ ಮತ್ತು ಭೌತಶಾಸ್ತ್ರದ ಅನೇಕ ಕ್ಲಿಷ್ಟಕರ ಸಮೀಕರಣಗಳನ್ನು ನಮ್ಮ ಪುಟಾಣಿಗಳಿಗೆ ಮನವರಿಕೆ ಮಾಡಿಕೊಡುವ ಅವರ ಪ್ರಯತ್ನ ಅನನ್ಯ !

ವಯಸ್ಕ ಓದುಗರಿಗೂ 'ಮುಂದೆ ಎನೋ ಇದೆ' ಎನ್ನುವ ಆಸಕ್ತಿಯನ್ನು ಕೊನೆಯವರೆಗೂ ಇಟ್ಟುಕೊಂಡು ಬರೆದ ವಿಶಿಷ್ಠ ಲೇಖಕರು ಶ್ರೀ ರಾಮಕೃಷ್ಣರಾಯರು ! ಈಗಾಗಲೇ ಅನೇಕ ಪುಸ್ತಕಗಳನ್ನು ಅವರು 'ಕುವೆಂಪು ವಿಶ್ವವಿದ್ಯಾಲಯ'ದ ವತಿಗಿಂದ ರಚಿಸಿದ್ದಾರೆ.

ಅವರ 'ನಕ್ಷತ್ರಲೊಕ ದರ್ಶನ'ದ ಆಕಾಶವಾಣಿ ಕಾರ್ಯಕ್ರಮಗಳನ್ನು ನಾನು ಕೇಳಿ ಬಲ್ಲೆ.

ಹೀಗೆಯೆ ಇನ್ನೂ ಅನೇಕರು, ಅತಿ ಜಾಗರೂಕತೆಯಿಂದ ಬರೆದ 'ಕಿರು ಹೊತ್ತಿಗೆ'ಗಳು ಪುಸ್ತಕ ಪ್ರಾಧಿಕಾರದ ತಲೆಯಲ್ಲಿ ನವಿಲು ಗರಿಯಂತೆ ಶೋಭಿಸುತ್ತವೆ. ನಾನು ಬೆಂಗಳೂರಿಗೆ ಇತ್ತೀಚೆಗೆ ಹೋದಾಗ,ನನ್ನ ಆಪ್ತ ಗಳೆಯರೊಬ್ಬರ ಮನೆಯಲ್ಲಿ ಶ್ರೀ ಕಲಾಂ ಅವರ ಪುಸ್ತಕ ಓದಿ ಪ್ರಭಾವಿತನಾದೆ !

ಪ್ರೊ.ಶ್ರೀ ಸಿದ್ಧರಾಮಯ್ಯ ಮತ್ತು ಅವರ ವೃಂದದವರಿಗೆ ನಮ್ಮ ಕೃತಜ್ಞತೆಗಳು ! ಅವರು ನಿಜಕ್ಕೂ ಅಭಿನಂದನಾರ್ಹರು !

ಬನ್ನಿ ಮೈಸೂರ್ ಅಸೋಸಿಯೇಷನ್ ಗೆ ಹೋಗುವ !...