ಮೂಢ ಉವಾಚ - 14
ಬರಹ
ಮೂಢ ಉವಾಚ - 14
ಸಲ್ಲದ ನಡೆಯು ತೋರಿಕೆಯ ಜಪತಪವು|
ಪರರ ಮೆಚ್ಚಿಸಲು ಡಂಭದಾಚರಣೆಯು||
ಹಿತಕಾಯದು ಮರುಳೆ ಮತಿ ನೀಡದು|
ಕಪಟ ಫಲಕಾಗಿ ಬಳಲದಿರು ಮೂಢ||
ನೀತಿವಂತರ ನಡೆಯು ನ್ಯಾಯಕಾಸರೆಯು|
ನುಡಿದಂತೆ ನಡೆಯುವರು ಸವಿಯ ನೀಡುವರು||
ಪ್ರಾಣವನೆ ಪಣಕಿಟ್ಟು ಮಾತನುಳಿಸುವರು|
ಜಗದ ಹಿತ ಕಾಯ್ವ ಧೀರರವರು ಮೂಢ||
**********************
-ಕವಿನಾಗರಾಜ್.