ಇದ್ದುದೆಲ್ಲವ ಬಿಟ್ಟು - ಹರ್ಷದ ಕೂಳಿಗೊಸ್ಕರ !!1

ಇದ್ದುದೆಲ್ಲವ ಬಿಟ್ಟು - ಹರ್ಷದ ಕೂಳಿಗೊಸ್ಕರ !!1

ಬರಹ

ಕೆಲವಾರು ದಿನಗಳಿಂದ ನನ್ನ ತಲೆ ತಿನ್ತ ಇರೋ ಎರಡು ಸಾಲುಗಳನ್ನು ಇಲ್ಲಿ ಬರೀತಾ ಇದ್ದೀನಿ. ಈ ಸಾಲುಗಳ ಬಗ್ಗೆ ನಿಮಗೇನಾದರೂ ಅನ್ನಿಸಿದರೆ ಬರಿಯಿರಿ.


 


೧. "ಇದ್ದುದೆಲ್ಲವ ಬಿಟ್ಟು ಇರದುದರೆಡೆಗೆ ತುದಿವಿದೆ ಜೀವನ" 


ಗೋಪಾಲ ಕೃಷ್ಣ ಅಡಿಗರ ಬಾವಗೀತೆಯದ್ದು. 


 


ಇಲ್ಲಿ ಈ ಸಾಲನ್ನು ಹೇಳಿದವ ಒಬ್ಬ ಭಾವುಕ ಕವಿ.. ಬಹುಶ ಈ ಬಾವಗೀತೆಗಳು ಜೀವನದ ಕಟು ಸತ್ಯಗಳನ್ನು  ನೇರವಾಗಿ ಎದುರಿಸಲ್ಲ ಅನ್ನೋ ಕಾರಣ ಕೊಟ್ಟು ಈ ಸಾಲಿನ ಬಗ್ಗೆ ಮೌನವಹಿಸಬಹುದು.


 


೨. "ಹರ್ಷದ ಕೂಳಿಗೊಸ್ಕರ ವರ್ಷದ ಕೂಳು ಕಳಕೊಂಡ". 


ಇದು ನಮ್ಮ ಜನಪದರು ತಮ್ಮ  ಜೀವನಾನುಭವದಿಂದ  ಕಡೆದು ತೆಗೆದ ಸಾಲು. ಇದರ ತೂಕ ತುಂಬಾ ಹೆಚ್ಚು. ಈ ಸಾಲನ್ನು ನಾವು ಕಡೆಗಣಿಸಲು ಆಗೋಲ್ಲ.


  


..........................


  


  


ಜೀವನದ ಕಟು ಸತ್ಯಗಳೇನೆ ಇರಲಿ.. ಎಲ್ಲ ಮನುಷ್ಯರೂ  ಭಾವಜೀವಿಗಳೇ. ಇರೋದು ಬಿಟ್ಟು ಇರದೇಇರೋ ಕಡೆ ಮನುಸ್ಸು ಸೆಳೆಯುತ್ತೆ. ಅದರಲ್ಲೂ ಆ ಇರೆದಿರ ವಸ್ತು / ಪದವಿಗೆ ಸಮಾಜದಲ್ಲಿ ಬೆಲೆ ಹೆಚ್ಚಿದ್ದರಂತೂ ಮನಸ್ಸು ಆ ಕಡೆ ಸದಾ ಧ್ಯಾನ ಮಾಡ್ತಾನೆ ಇರುತ್ತೆ. 


 


ಈಗೊಂದು ಪ್ರಶ್ನೆ ನನ್ನ ತಲೆ ತಿಂತಾ ಇದೆ. ಇಲ್ಲಿನ ಸನ್ನಿವೇಶದ  "ಹರ್ಷದ ಕೂಳು" ..ಇದು ನಿಜಕ್ಕೂ ಉನ್ನತ ಮಟ್ಟದ್ದು. ಎಲ್ಲರೂ ಅದರ ಬಗ್ಗೆ ಕನಸು ಕಾಣುವನ್ತದ್ದು. ಆದರೆ ಅದು ಸಿಗಬಹುದು ಸಿಗದೇ ಇರಬಹುದು. ವರ್ಷದ ಕೂಳು ಬಗ್ಗೆ ವರಿ ಮಾಡದೆ ಪ್ರಯಾಣ ಮಾಡಿದರೆ ಸಿಗುವ "ಸಾಧ್ಯತೆ"ಗಳೇ ಹೆಚ್ಚು!.  


 


ಈ ಹರ್ಷದ ಕೂಳಿನ ಪ್ರಯತ್ನದಲ್ಲಿ ವರ್ಷದ ಕೂಳನ್ನು ಕಳೆದುಕೊಳ್ಳುವ ಸಾಧ್ಯತೆಗಳಿವೆ. 


 


ಆಯ್ಕೆ ಅನ್ನೋದು ಹೇಗಿರಬೇಕು ಅಂತ ಹೊಳೀತಾ ಇಲ್ಲ!!  


 


 


 


 


 


  

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet