ತಲೆ ಕೆರೆದು ಕೊಳ್ಳುತ್ತಾ ಕೂತಿರುತ್ತೀಯಾ ಪ್ಲೀಸ್?!
ಕಳೆದು ಹೋಗಿದ್ದ ಬೇತಾಳವನ್ನು ಹುಡುಕಿಕೊಂಡು ವಿಕ್ರಮಾದಿತ್ಯನು ಹೊರಡುತ್ತಾನೆ. ಎಲ್ಲಿಯೂ ಕಾಣಿಸದೆ ಇರುವುದರಿಂದ ಬಂದು, ಬೇತಾಳವನ್ನು ಕುರಿತು ಗೂಗಲ್ ಸರ್ಚ್ ಮಾಡುತ್ತಾನೆ. ಟಿಂಗ್! ಎಂದು ಅಪಿಯರ್ ಆಗುವ ಬೇತಾಳದ ಫೇಸ್ ಬುಕ್ ಪ್ರೊಫೈಲ್ ನೋಡಿ, ದಂಗಾಗುತ್ತಾನೆ. ಅರೆ, ಇಲ್ಲೇ ಎಲ್ಲೋ ಇದೆಯಲ್ಲ ನಮ್ಮ ಬೇತಾಳ ಅಂದುಕೊಂಡು ಖುಷಿ ಪಡುತ್ತಾನೆ. ಅಲ್ಲೇ, ಇರುವ ಬೇತಾಳದ ಲಿಂಕೆಡ್-ಇನ್ ಪ್ರೊಫೈಲ್ ಓದತೊಡಗಿದ ವಿಕ್ರಮಾದಿತ್ಯನು ಬೇಸ್ತು ಬೀಳುವುದೊಂದು ಬಾಕಿ! ಬೇತಾಳದ ಪ್ರೊಫೈಲ್ ಹೈ-ಲೈಟ್ಸ್ ವಿಕ್ರಮಾದಿತ್ಯನನ್ನು ಅಟ್ಟಾಡಿಸಿಕೊಂಡು, ಕಥೆ ಹೇಳುವುದು, ಪ್ರಶ್ನೆ ಕೇಳುವುದು ಆಗಿರುತ್ತದೆ. ಎಲ- ಎಲಾ ಬೇತಾಳವೆ! ಬೇರೊಬ್ಬ ವಿಕ್ರಮಾದಿತ್ಯನು ನಿನ್ನೀ ಸಾಮರ್ಥ್ಯ ನೋಡಿ, ನಿನ್ನನ್ನು ಹೈರ್ ಮಾಡಿಕೊಂಡು ಬಿಟ್ಟರೆ ಹೇಗೆ? ಎಂದು ಒಂದು ಕ್ಷಣ ಕಳವಳಪಟ್ಟು, ಬೇತಾಳದ ಕರೆಂಟ್ ಸ್ಟೇಟಸ್ನ್ನು ನೋಡುತ್ತದೆ. ನೋಡಿ ಒಂದು ಕ್ಷಣ ಸಮಾಧಾನದ ನಿಟ್ಟುಸಿರು ಬಿಡುತ್ತಾನೆ. ಬೇತಾಳವು ಖಾನ್- ಅಕಾಡೆಮಿಯ ವೀಡಿಯೊ ಗಳನ್ನೂ ನೋಡಿ ಕರ್ಲ್, ಡೈವರ್ಜನ್ಸ್ ಗಳನ್ನೂ ದಿಫ್ಫೆರೆನ್ಸಿಯಲ್ ಈಕ್ವೆಶನ್ಸ್ಗಳನ್ನೂ ಕಲಿಯಲು ತೊಡಗಿರುತ್ತದೆ. ಅಷ್ಟೇ ಅಲ್ಲದೆ, ಗೂಗಲ್ ಸಮ್ಮರ್ ಕೋಡ್ -೨೦೧೦ ನಲ್ಲಿ ಪೈಥಾನ್ ಬಗ್ ಫಿಕ್ಸ್ ಮಾಡುವಲ್ಲಿ ಕಾಂಟ್ರಿಬ್ಯೂಟ್ ಮಾಡುತ್ತಿರುತ್ತದೆ. ಇದಲ್ಲದೆ, ನೆಕ್ಷ್ಟ್ ವಿಕ್ರಮಾದಿತ್ಯನಿಗೆ ಒಂದು ಚೊಂಬು ಹಿಡಿಸುವಂಥ ಟೆಕ್ನಿಕಲ್ ಕಥೆ ಹೇಳಲು ಪ್ರಿಪೇರ್ ಆಗುತ್ತಿದೆ ಎಂದೂ ಹಾಕಿಕೊಂಡಿರುತ್ತದೆ. ಇವನ್ನು, ನೋಡಿ ತನಗೆ ಮುಂದೆ ಒದಗಲಿರುವ ಕ್ಲಿಷ್ಟಕರವಾದ ಕಥೆಗಳನ್ನೂ ಅದರ ಕೊಂಪ್ಲೆಕ್ಸಿಟಿಯನ್ನೂ ನೆನಸಿಕೊಂಡು, ಬಾಯಲ್ಲಿ ಜೊಲ್ಲು ಸುರಿಸಿಕೊಂಡು, ಮನಸ್ಸಿನಲ್ಲೇ ಮಂಡಿಗೆಯನ್ನು ತಿನ್ನ ತೊಡಗುತ್ತಾನೆ. ಬೇತಾಳದ ಜೊತೆ ಎಂಥಹ ಮಜವಿತ್ತೆ, ಇದರಲಿ ಎಂಥಹ ಹದವಿತ್ತೇ! ಎಂದು ಗುನುಗತೊಡಗುತ್ತಾನೆ. ಖುಷಿಯನ್ನು ತಡೆಯಲಾರದೆ ಥಯ್ಯ ಥಕ ಥಯ್ಯ ಥಕ ಎಂದು ನಾಲ್ಕು ಸ್ಟೆಪ್ಸ್ ಕುಣಿಯುತ್ತಾನೆ. ಉದ್ದನೆಯ ಎಕ್ಸಿಕ್ಯೂಟ್ ಆಗದ ಪೈಥಾನ್ ಪ್ರೊಗ್ರಾಮ್ ಒಂದು ಬರೆದು, ಅದನ್ನೇ ಪ್ರಶ್ನೆಗಳಲ್ಲಿ ಕೇಳುತ್ತದೋ ಏನೋ! ಎಂದು ಒಂದು ಕ್ಷಣ ಯೋಚಿಸುತ್ತಾನೆ. ಯಾಕೋ ಖುಷಿ ಆಗುತ್ತದೆ. ಹಲ್ಲು ಕಿರಿಯುತ್ತಾನೆ! ಮತ್ತೊಮ್ಮೆ ಡಿಂಗ-ಡಾಂಗ್-ಡಿಂಗ್-ಡಾಗ್-ಡಿನ್ಗಾ- ಡಿಗ ಅಂತ ಕುಣಿದು ಕುಪ್ಪಳಿಸುತ್ತಾನೆ! ಖಾನ್- ಅಕಾಡೆಮಿಯ ವೀಡಿಯೊಗಳನ್ನೆಲ್ಲ ಶ್ರದ್ಧೆಯಿಂದ ನೋಡಿ ಕಲಿಯುತ್ತಿರುವ ಬೇತಾಳದ ಬಗೆಗೆ ಏನೋ ಒಂದು ಅಭಿಮಾನ ಮೂಡುತ್ತದೆ ವಿಕ್ರಮನಿಗೆ. ಏನೇನೋ ಸಖತ್ತಾಗಿ ತಿಳ್ಕೊಂಡೆ ಬಂದಿರುತ್ತೆ! ಏನ್ ಕೇಳಬಹುದು? ಒಳ್ಳೆ ಇಂಟರೆಸ್ಟಿಂಗ್ ದಿಸ್ಕಾಶನ್ ಮಾಡಬಹುದು ನಮ್ಮ ಬೇತಾಳದ ಜೊತೆ ಫಿಲೋಸೋಫಿಕಾಲ್ ಆಗಿ! ಅಂದುಕೊಂಡು ಜೊಲ್ಲು ಸುರ್ಸೇ ಸುರ್ಸ್ತಾನೆ! ಹೀಗಿರುವಾಗ, ಬೇತಾಳವು, ತಲೆ ತುರಿಸಿಕೊಳ್ಳುತ್ತಾ ಅಲ್ಲಿಯೇ ಪ್ರತ್ಯಕ್ಷವಾಗುತ್ತದೆ. ಒಂದು ದಿಫೆರೆನ್ಶೀಯಲ್ ಇಕ್ವೇಶನ್ ಕೈಲ್ಲಿ ಹಿಡಿದುಕೊಂಡು. ಜೊತೆಗೆ ಸಸ್ಟೈನೆಬಲ್ ಎನರ್ಜಿ ಬುಕ್. ಗ್ಲೋಬಲ್ ವಾರ್ಮಿಂಗ್ಗೆ ಸಂಭಂದಿಸಿದ ಏನೇನೋ ನೋಟ್ಸ್ ಜೊತಗೆ! ಇದಿಷ್ಟನ್ನು ನೋಡಿ ಅಲ್ಲಿಯೇ ಲೆಕ್ಕ ಹಾಕಿದ ರಾಜನು, " ಬೇತಾಳವೇ! ಈ ಸಲದ ನಿನ್ನ ಕಥೆ ಶುರು ಆಗುವ ಮುನ್ನ ಒಂದಿಷ್ಟು ರೀಸರ್ಚ್ ಮಾಡಿಕೊಳ್ಳಬೇಕಾಗಿದೆ ನಾನು. ನೀನು ಇನ್ನೊಂದು ಸ್ವಲ್ಪ ಹೊತ್ತು ಹಾಗೇ ತಲೆ ಕೆರೆದು ಕೊಳ್ಳುತ್ತಾ ಕೂತಿರುತ್ತೀಯಾ ಪ್ಲೀಸ್?!" ಎಂದು ಕೇಳಿ ಬೇತಾಳದ ಉತ್ತರಕ್ಕೂ ಕಾಯದೇ, ಲರ್ನಿಂಗ್ ಮೋಡ್ ಗೆ ಜಿಗಿಯುತ್ತಾನೆ.