ಗಂಡ ಹೆಂಡತಿ ಮತ್ತು ಗರ್ಲ್ ಫ್ರೆಂಡ್ ಮತ್ತು ಒಂದಷ್ಟು ಹನಿಗಳು
ನೋವು -ನಲಿವಿನ ಹನಿಗಳು
ಇನಿಯ ಬರಲಿಲ್ಲವೆಂದು ಅರಿವು ಕಣ್ಣ ತುಂಬ ನೀರು ತುಂಬಿಸಿತು. ಸಮಯವಾಗುತ್ತಿತ್ತು. ಇನ್ನು ಅವನ ಭೇಟಿ ಮತ್ತೆಂದೋ . ನಿಟ್ಟುಸಿರು ನಿಡಿದಾಗಿ ಮನ ಬೇಗೆ ತಾಳಲಾರೆ ಎಂದುಕೊಂಡಿತು. ಮನದ ದುಗುಡ ಮತ್ತಷ್ಟುಹೆಚ್ಚಾಗಿ ಕಣ್ಣೀರು ಆಚೆಯೇ ಬಂದು ಬಿಟ್ಟಿತು. ಅವಳ ನುಣುಪು ಕೆನ್ನೆಯ ಸವರುತ್ತಾ ಇನ್ನೇನು ಕೆಳಗೆ ಬೀಳಬೇಕು ಆಗಲೇ ಕೈಗಳೆರೆಡು ಬೊಗಸೆಯೊಡ್ಡಿದವು. ಆದರೆ ಸಮಯ ಮೀರಿತ್ತು. ನೋವಿನ ಹನಿಯ ಅಸಹನೆ ಅದಕ್ಕೆ ಪಾಠ ಕಲಿಸಿತ್ತು . ಆ ಹನಿ ಮಣ್ಣು ಸೇರಿತು . ಹಿಂದೆಯೇ ಬಂದಿತು ನಲಿವಿನ ಕಣ್ಣೀರ ಹನಿ. ಮುತ್ತಾಗಿ ಸೇರಿತು ಇನಿಯನ ಬೊಗಸೆಯೊಳಗೆ.ಇಷ್ಟು ಹೊತ್ತಿನ ತಾಳ್ಮೆ ಸಾರ್ಥಕವಾಗಿತ್ತು
-----------------------------------------------------------------------------------------
ಚೆಲವು ಒಲವು
ಅವಳ ಚೆಲುವು ಅವನ ಒಲವುಗಳು ಸೇರಿ ಸಂಸಾರ ನಡೆಸುತ್ತಿದ್ದವು . ನಾನಿರುವುದಕ್ಕೆ ನೀನಿರುವುದು ಎಂದು ಚೆಲುವು ಬೀಗುತ್ತಿತ್ತು. ಕಾಲ ಹೇಳುತ್ತದೆ ಉತ್ತರ ಎಂದು ಒಲವು ನಗುತ್ತಿತ್ತು. ಕಾಲ ಬಂದೇ ಬಿಟ್ಟಿತು. ಅರವತ್ತರ ಹರೆಯದಲ್ಲಿ ಚೆಲುವು ಆಕೆಯ ಮೊಗದಿಂದ ಕಾಣೆಯಾಗಿತ್ತು. ಒಲವು ಅವನ ಕಣ್ಣಲ್ಲಿ ಇನ್ನೂ ಪ್ರಕಾಶ ಮಾನವಾಗಿ ನಗುತ್ತಿತ್ತು.
----------------------------------------------------------------------------------------------------
ಕಲ್ಲು
ನೀನು ಬಂಜೆ ಬಂಜೆ ಎಂದೆಲ್ಲರೂ ನಿಂದಿಸುತ್ತಿದರು. ಇಷ್ಟು ದಿನವಾದರೂ ಮಕ್ಕಳಿಲ್ಲ ಎಂದೂ ಅವಳ ತಾಯಿಯೂ ಕೊರಗುತ್ತಿದ್ದರು. ಬೇರೆ ಮದುವೆಯಾಗು ಎಂದು ಅತ್ತೆ ಗಂಡನಿಗೆ ಉಪದೇಶಿಸುತ್ತಿದ್ದರು. ಗಂಡ ಮಾತ್ರ ಕೊರಗುವುದಿರಲಿ ಆ ಬಗ್ಗ್ಗೆ ಮಾತಾಡುತ್ತಲೂ ಇರಲಿಲ್ಲ .ಇವರೇನು ಕಲ್ಲೇ ? ಎಂದುಕೊಳ್ಳುತ್ತಿದ್ದಳು. ಕೊನೆಗೂ ಕಲ್ಲು ಕರಗಿತು. ಅವಳಮಡಿಲನ್ನು ತುಂಬಿದಳು ಆ ಕಲ್ಲು ದತ್ತು ಪಡೆದು ತಂದ ಸುಪ್ರಿಯಾ .
----------------------------------------------------------------------------------------
ಗಂಡ ಹೆಂಡತಿ ಮತ್ತು ಗರ್ಲ್ ಫ್ರೆಂಡ್
’ಗಂಡ ಹೆಂಡತಿ ಮತ್ತು ಬಾಯ್ ಫ್ರೆಂಡ್ ’ಸಿನಿಮಾವನ್ನು ತನ್ನ ಗರ್ಲ್ ಪ್ರೆಂಡ್ ಜೊತೆ ನೋಡಿ ಬಂದ ಗಂಡ ತನ್ನ ಹೆಂಡತಿಯ ಗೆಳೆಯರನ್ನೆಲ್ಲಾ ಮನೆಗೆ ಬಾರದಂತೆ ಮಾಡಿದ್ದು ಮಾತ್ರ ವಿಪರ್ಯಾಸ.
Comments
ಉ: ಗಂಡ ಹೆಂಡತಿ ಮತ್ತು ಗರ್ಲ್ ಫ್ರೆಂಡ್ ಮತ್ತು ಒಂದಷ್ಟು ಹನಿಗಳು
In reply to ಉ: ಗಂಡ ಹೆಂಡತಿ ಮತ್ತು ಗರ್ಲ್ ಫ್ರೆಂಡ್ ಮತ್ತು ಒಂದಷ್ಟು ಹನಿಗಳು by asuhegde
ಉ: ಗಂಡ ಹೆಂಡತಿ ಮತ್ತು ಗರ್ಲ್ ಫ್ರೆಂಡ್ ಮತ್ತು ಒಂದಷ್ಟು ಹನಿಗಳು
ಉ: ಗಂಡ ಹೆಂಡತಿ ಮತ್ತು ಗರ್ಲ್ ಫ್ರೆಂಡ್ ಮತ್ತು ಒಂದಷ್ಟು ಹನಿಗಳು
In reply to ಉ: ಗಂಡ ಹೆಂಡತಿ ಮತ್ತು ಗರ್ಲ್ ಫ್ರೆಂಡ್ ಮತ್ತು ಒಂದಷ್ಟು ಹನಿಗಳು by Shrikantkalkoti
ಉ: ಗಂಡ ಹೆಂಡತಿ ಮತ್ತು ಗರ್ಲ್ ಫ್ರೆಂಡ್ ಮತ್ತು ಒಂದಷ್ಟು ಹನಿಗಳು
In reply to ಉ: ಗಂಡ ಹೆಂಡತಿ ಮತ್ತು ಗರ್ಲ್ ಫ್ರೆಂಡ್ ಮತ್ತು ಒಂದಷ್ಟು ಹನಿಗಳು by ksraghavendranavada
ಉ: ಗಂಡ ಹೆಂಡತಿ ಮತ್ತು ಗರ್ಲ್ ಫ್ರೆಂಡ್ ಮತ್ತು ಒಂದಷ್ಟು ಹನಿಗಳು
ಉ: ಗಂಡ ಹೆಂಡತಿ ಮತ್ತು ಗರ್ಲ್ ಫ್ರೆಂಡ್ ಮತ್ತು ಒಂದಷ್ಟು ಹನಿಗಳು
ಉ: ಗಂಡ ಹೆಂಡತಿ ಮತ್ತು ಗರ್ಲ್ ಫ್ರೆಂಡ್ ಮತ್ತು ಒಂದಷ್ಟು ಹನಿಗಳು