ನಾನು ಓದಿದ ಆರ್. ಕೆ. ಲಕ್ಷ್ಮಣ್ ಅವರ ಆತ್ಮಕಥೆ 'Tunnel Of Time '
ಖ್ಯಾತ ವ್ಯಂಗ್ಯಚಿತ್ರಕಾರ ಆರ್. ಕೆ. ಲಕ್ಷ್ಮಣ್ ಅವರ ಆತ್ಮಕಥೆ 'Tunnel Of Time ' ಇತ್ತೀಚಿಗೆ ಓದಿದೆ . ಅವರು ಆರ್. ಕೆ. ನಾರಾಯಣ್ ಅವರ ತಮ್ಮ . ಮೈಸೂರಿನಲ್ಲಿ ಹುಟ್ಟಿ ಬೆಳೆದು ವ್ಯಂಗ್ಯಚಿತ್ರಕಾರನಾಗಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರು ಗಳಿಸಿದವರು. ಬರಹದ ಶೈಲಿ ತುಂಬಾ ಸರಳವಾಗಿದ್ದು ಓದಿಸಿಕೊಂಡು ಹೋಗುತ್ತದೆ . ಬರಿ ಚಿತ್ರಕಲೆಯನ್ನು ಸಾಧಿಸಿದರೆ ಅಲ್ಲ . ಸುತ್ತಲಿನ ಬೆಳವಣಿಗೆಗಳ ಬಗೆಗೆ ಆಸಕ್ತಿ , ತಿಳುವಳಿಕೆ, ಹಾಸ್ಯಮಯ ವಿಡಂಬನಾತ್ಮಕ ಒಳನೋಟವೂ ಬೇಕು . ತಮ್ಮ ಸುದೀರ್ಘ ಕಾಲದ ಅನುಭವವನ್ನು , ತುರ್ತು ಪರಿಸ್ಥಿತಿಯ ಕಾಲದ ವಾತಾವರಣವನ್ನು , ದೇಶವಿದೇಶಗಳ ಹೆಸರಾಂತ ಜನರೊಂದಿಗಿನ ಭೇಟಿಯನ್ನು ಸುಲಲಿತವಾಗಿ ತಿಳಿಸಿದ್ದಾರೆ . ತಮ್ಮ ಸಾಧನೆಯ ಕ್ರೆಡಿಟ್ ಅನ್ನು ಭಾರತದ ರಾಜಕಾರಣಿಗಳು , ಅಧಿಕಾರಶಾಹಿಗಳು ಮುಂತಾದವರಿಗೂ ಕೊಡುತ್ತಾರೆ !! . ಹಿಂದಿನ ಕಾಲದಲ್ಲಿ ರಾಜಕೀಯ ಘಟನೆಗಳಿಗೂ , ಹಗರಣಗಳಿಗೂ ಒಂದು ಬಗೆಯ ಘನತೆ , ರಾಜಕಾರಣಿಗಳಿಗೆ ಸಂಕೋಚ ಇತ್ತು . ಈಗೀಗ ದಿನವೂ ಅವೇ ಬಗೆಯ ಹಗರಣಗಳೇ , ಜನರಿಗೂ ಅಭ್ಯಾಸ ಆಗಿಬಿಟ್ಟಿದೆ , ವ್ಯಂಗ್ಯ ವಿಡಂಬನೆಗೆ ಅವಕಾಶವೇ ಇಲ್ಲ ಎನ್ನುತ್ತಾರೆ ! Mr. Common Man ( ಶ್ರೀಸಾಮಾನ್ಯ ) ನ ಕಲ್ಪನೆಯು ಸಾಕಾರವಾದ ಬಗೆಯನ್ನು ಇಲ್ಲಿ ಓದಬಹುದು .
ರಾಜೀವ್ ಗಾಂಧಿ ಕಾಲದ ಒಂದು ಘಟನೆ ನಿಮ್ಮೊಂದಿಗೆ ಹಂಚಿಕೊಳ್ಳಬೇಕು ಅನ್ನಿಸಿತು. ರಾಜೀವ್ ಸಾಮಾನ್ಯವಾಗಿ ಯಾವುದೇ ಪ್ರಶ್ನೆಗೂ ' ಐ ವಿಲ್ ಲುಕ್ ಇನ್ ಟು ದಿ ಮ್ಯಾಟರ್ ' ಅನ್ನುತ್ತಿದ್ದರಂತೆ . ಒಂದು ಸಲ ಲಕ್ಷ್ಮಣ್ ರಾಜೀವ್ ಅವರನ್ನು ಭೇಟಿಯಾಗುವ ಪ್ರಸಂಗ ಬಂದು ಆಗ ರಾಜೀವ್ ' ನೀವು ನನ್ನನ್ನು ಸ್ವಲ್ಪ ದಪ್ಪ ಚಿತ್ರಿಸುತ್ತಿದ್ದಿರಿ ' ಅಂತ ಆಕ್ಷೇಪಿಸಿದರಂತೆ . ಆಗ ಲಕ್ಷ್ಮಣ್ ' ಐ ವಿಲ್ ಲುಕ್ ಇನ್ ಟು ದಿ ಮ್ಯಾಟರ್ ' ಅಂದು ಬಿಟ್ಟರಂತೆ ! ಸುತ್ತಲಿದ್ದ ಜನ ಕಿಸಕ್ಕೆಂದು ನಕ್ಕುಬಿಟ್ಟರು !!
ಅವರ ಅಣ್ಣ ಆರ್. ಕೆ. ನಾರಾಯಣ್ ಅವರು ಮೈಸೂರಲ್ಲಿ ಹುಟ್ಟಿ ಬೆಳೆದರೂ ಅವರ ಕತೆ ಕಾದಂಬರಿಗಳಲ್ಲಿ ಎಲ್ಲೂ ಕನ್ನಡ ಕಾಣುವುದಿಲ್ಲ . ಅವರ ಬರಹದಲ್ಲಿ ತಮಿಳು ಪಂಚಾಂಗ , ತಮಿಳು ಸಿನಿಮ , ತಮಿಳು magazine ಗಳೇ ಕಂಡು ಬಂದಿವೆ ನನಗೆ . ಆರ್. ಕೆ. ಲಕ್ಷ್ಮಣ್ ರ ಆತ್ಮಚರಿತ್ರೆಯಲ್ಲಿ ಅನೇಕ ಸಲ ಕನ್ನಡ ಪ್ರಾಸಂಗಿಕವಾಗಿ ಬಂದಿದೆ .
ಈ ಪುಸ್ತಕ ಪೆಂಗ್ವಿನ್ ಬೆಳಕಿಗೆ ತಂದಿರುವುದು . ಸಿಕ್ಕರೆ ಓದಿ.
( ಅವರು ಕೆಲವು ಕಾದಂಬರಿಗಳನ್ನೂ ಬರೆದಿದ್ದಾರಂತೆ , ಸಿಕ್ಕರೆ ಖಂಡಿತ ಓದುವೆ. )
Comments
ಉ: ನಾನು ಓದಿದ ಆರ್. ಕೆ. ಲಕ್ಷ್ಮಣ್ ಅವರ ಆತ್ಮಕಥೆ 'Tunnel Of ...