ನಾನು ಓದಿದ ಇನ್ನೊಂದು ಇಂಗ್ಲಿಶ್ ಕಾದಂಬರಿ Nectar in a Sieve
ಕಮಲಾ ಮಾರ್ಕಂಡೇಯ ಅವರ ಕಾದಂಬರಿ Nectar in a Sieve ಅನ್ನು ಇತ್ತೀಚಿಗೆ ಓದಿದೆ .
( ಇಂಗ್ಲಿಶ್ ಪುಸ್ತಕ ಓದುತ್ತ ಇದ್ದೀನಿ ಅಂದರೆ ಕನ್ನಡದಲ್ಲಿ ಎಲ್ಲ ಓದಿದ್ದೀನಿ ಅಂತ ಅಲ್ಲ . ಕನ್ನಡದಲ್ಲಿ ಕಾರಂತ , ತರಾಸು , ಭೈರಪ್ಪ ಇವರುಗಳನ್ನೇ ಓದದೆ ಬಾಕಿ ಉಳಿಸಿಕೊಂಡಿದ್ದೀನಿ. ಸದ್ಯ ಇಲ್ಲಿ ಕನ್ನಡ ಪುಸ್ತಕಗಳು ಇಲ್ಲ ; ಸ್ವಲ್ಪ ಸಮಯ ಸಿಕ್ಕಿದೆ ; ಹೀಗಾಗಿ ಇಂಗ್ಲಿಷಿಗೆ ಕೈ ಹಾಕಿದ್ದೀನಿ ಅಷ್ಟೇ )
ಕಚೇರಿಯ ಲೈಬ್ರರಿಯಿಂದ ಓದಲು ಸುಲಭ ಆಗಿರುವ , ಭಾರತೀಯ ಇಂಗ್ಲಿಶ್ ಬರಹಗಾರರ ಪುಸ್ತಕಗಳಿಂದ ಶುರು ಮಾಡಿದ್ದೀನಿ , ಇಂಗ್ಲಿಶ್ ಓದಲು ಹೆಚ್ಚು ಸಮಯ ಬೇಕು , ಅದಕ್ಕೆ ಸುಲಭವಾಗಿ ಕಂಡ ಈ ಪುಸ್ತಕ ತೆಗೆದುಕೊಂಡೆ )
ಬಡತನದ ಒಂದು ಸಂಸಾರದ ಚಿತ್ರಣ ಇದೆ, ಒಂದರ ಹಿಂದೊಂದು ಕಷ್ಟಗಳಿಗೆ ತಮ್ಮನ್ನು ಒಡ್ಡಿಕೊಂಡ ಪಾತ್ರಗಳು ಆಶ್ಚರ್ಯವೆಂದರೆ ಯಾರನ್ನೂ ದೂರುವದಿಲ್ಲ . ಕಾದಂಬರಿಯಲ್ಲಿ ಯಾರು ವಿಲನ್ ಅಲ್ಲ ! ವಿಧಿಯಾಗಲೀ , ದೇವರನ್ನಾಗಲೀ ತಮ್ಮ ಸ್ಥಿತಿಗೆ ಕಾರಣ ಎನ್ನುವುದಿಲ್ಲ . ಶೋಷಣೆ , ಶೋಷಿತರು ಎಂದು ಬರಹಗಾತಿ ಬೊಬ್ಬೆ ಹೊಡೆಯುವುದಿಲ್ಲ . ಇಳಿಥರ ( ಅವನತಿಯ ಗತಿ ) ಕ್ಕೆ ಹೊಂದಿಕೊಂಡು ಹೋಗುವುದು ಮನವನ್ನು ತಟ್ಟುತ್ತದೆ .
ಈಗ ತಾನೆ ನೋಡುತ್ತಾ ಇದ್ದೀನಿ . ಈ ಬರಗತಿ ಯಾರು ಅಂತ , ಭಾರತೀಯ ಇಂಗ್ಲಿಶ್ ಬರಹಗಾರರಲ್ಲಿ ಮೊದಲಿಗರಲ್ಲಿ ಒಬ್ಬರಂತೆ . ಇದು ಅವರ ಮೊದಲ ಕಾದಂಬರಿ ಅಂತೆ . ಜಗತ್ತಿನಾದ್ಯಂತ ಬಹಳ ಪ್ರತಿಗಳು ಮಾರಾಟವಾಗಿವೆ . ಇವರು ಮೈಸೂರಿನವರಂತೆ .