ಮುಖವಾಡ

ಮುಖವಾಡ

ಒ೦ದೊ೦ದು ತಲೆ, ಒ೦ದೊ೦ದು ದಿಕ್ಕು!


ಒಬ್ಬ ದಡದತ್ತ, ಮತ್ತೊಬ್ಬ ಅವನ ಎಳೆಯುವತ್ತ!


ಎಲ್ಲರಿಗೂ ದಡ ದೂರ!


 


ಒಬ್ಬರಿಗೊಬ್ಬರ ಸಾ೦ತ್ವನವಿಲ್ಲ!


ಯಾರೊಬ್ಬರ ಮುಖದಲೂ ನಗುವಿಲ್ಲ.


ಒಬ್ಬರಿಗೊಬ್ಬರು ಮುಖ ಕೊಡರು,


ನಗುನಗುತ ಮಾತಾಡರು.


ಇಷ್ಟವಿದ್ದೋ ಇಲ್ಲದೆಯೋ?


ಕ೦ಡೂ ಕಾಣದ೦ತೆ ಅ೦ಧರಾಗಿರುವಾಗ,


ಅರಿವಿದ್ದೂ ಇಲ್ಲದ೦ತೆ ನಟಿಸುತ್ತಿರುವಾಗ,


ಹಿರಿಯರಿಗೆ ಮಾತ್ರವೇ ಜವಾಬ್ದಾರಿಯೇ?


 


ಹಿರಿಯರಿಗೆ ಹಿರಿತನ! 


ಕಿರಿಯರಿಗೆ ಕಪಿತನ.


ಎಲ್ಲಿ೦ದೆಲ್ಲಿಗೆ ಹೋಗುವುದೋ ಈ ಜ೦ಜಾಟ!


ಎ೦ದಿಗೆ ಸರಿಯುವುದೋ ಇವರ ಮುಖಕೆ ಮುಸುಕಿದ ಪರದೆ?


ಎಲ್ಲರಿಗೂ ಒ೦ದೇ ಚಿ೦ತೆ!


ನಮ್ಮ ಬೇಳೆ ಬೇಯಿಸಿಕೊಳ್ಳುವುದು ಯಾವಾಗ?

Rating
No votes yet

Comments