ಅನ್ನದ ಋ ಋಊ

ಅನ್ನದ ಋ ಋಊ

ಬರಹ

ತಿನ್ನುವುದು ಸ್ವಾಭಾವಿಕ; ಉಣಲು ಪುಣ್ಯ ಬೇಕು

ಒಂದು ಜೀವ ಒಂದು ಅಗುಳು

ಹಸಾದದ ಮುಗುಳು

  


ಆ ಮಹಾದಾಸೋಹದ ಕಡೆ ಪಂಕ್ತಿಯ


ಕೊನೆಯವನಾಗಿ ಬೊಗಸೆಯೋಡ್ಡಿದ ನನಗೇ


ಖಾಲಿ ಬಟ್ಟಲ ಸವಾಲು!


ಹುಲ್ಲು ಮೇಯಿಸಲಾರೆ ಎಂದವನ ಶಪಿಸಿದೆ,


ಥೂ, ಹಾಳಾದವನೇ! ನೀನೇ ತಿಂದು ತೇಗಿದ್ಯಾ?


 


ಇಲ್ಲೊಬ್ಬ ಹುಡುಗ ರಾಮಾಯಣದ ಗೋಡೆ ಹಾರಿ


ನೋಡಬಯಸುವ ಮಹಾಭಾರತ


ಬೇಗ ಕೃಷ್ಣ ಸಂಧಾನವಾಗಬೇಕು


ತುರ್ತಿನ ಈ ಸ್ಥಿತಿಯಲಿ ತುತ್ತಿನ ಮರ್ಮ


ಅರಿಯಬೇಕು ಒಂದಗುಳಿಗೆ ತೃಪ್ತನಾಗುವ  ಭಾವ


 


‘ಅ’ ಎಂದರೆ ಅನ್ನ ಎಂದೋದಿಸುವರು ಶಾಲೆ ಮಾಸ್ತರರು


‘ಆ’ ಎನಲು ಬಾಯ್ದೆರೆವ ಹುಡುಗರು


 


ಅರೆ! ಈ ಇರುಳಲೂ ಅಕ್ಕಿ ಆರಿಸುವ ದಂಪತಿ


ಬೀದಿಗಳಲಿ; ಲೋಕ‘ಕಲ್ಯಾಣ’ದ ಹಾದಿಯಲಿ


ಅದೇ ಮಾರಯ್ಯರ ಒಕ್ಕಲು ಈಗಲೂ ಆಯುತ್ತವೆ, ಅವವೇ ತಿನ್ನುತ್ತವೆ


ಸ್ವಾಮೀ ದಾಸರೇ, ಜೋಯಿಸರೆ, ಜೋಗಯ್ಯರೆ


ಕೊಡಿ ಜಂಗಮನ, ಜಂಗಮ ಬ್ರಹ್ಮನ


ಕಾದಿರುವಳು ಅನ್ನಪೂರ್ಣ


ಕೊಡಲು ಅರ್ಥಪೂರ್ಣ!


 


ಅಕ್ಕಿಗೂ ಮೊದಲು


ಅಥವ ಬೇರೆ


ಅನ್ನ ಇದ್ದಿರಬಹುದು. ತರ್ಕಕೂ ದೊಡ್ಡದು ಕಾಯಕ


 


ನಡೆಸಲು ಋಣದ ಮಣಿ ಹಾರ

ರುಜುತ್ವದ ಅನ್ನ ಆಧಾರ