ಪೆಸೆಲ್ ನಾಟಕ - ರಾಮಾಣ್ಯ
ಈ ಬಾರಿ ಸಂಕ್ರಾಂತಿಗೆ ಒಂದು ನಾಟಕ ಆಡವಾ. ಶ್ರೀ ಕೃಷ್ಣ ಸಂಧಾನ, ಬೇಡ, ಮಹಾಭಾರತ, ಬೇಡ, ರಾಮಾಣ್ಯ, ಸರಿ. ನೋಡ್ರಲಾ ಮೇಸ್ಟ್ರುನ ಕರ್ಕಂಡ್ ಬಂದು ಪಸಂದಾಗೆ ಪ್ರಾಕ್ಟೀಸ್ ಮಾಡಿ. ಊರ್ನಾಗೆಲ್ಲಾ ವಲ್ಡ್ ಪೇಮಸ್ ಆಗಬೇಕು. ಅಂಗೆ ನಾಟಕ ಮಾಡವಾ. ಏ ರಾಮ ಯಾರಲಾ, ನಮ್ಮ ಸಂಕ್ರು, ಲಕ್ಸಮಣ್ಯ ರಾಜಪ್ಪ, ಆಂಜನೇಯ ಅದೇ ನಮ್ಮ ಕೋಮಲ್ ಮತ್ತೆ ಸೀತೆ ಗಬ್ಬುನಾಥ ಗೌಡ್ರ ಮೊದಲನೆ ಹೆಂಡರು ಪದ್ಮ. ಹಿಂಗೆ ಎಲ್ಲಾ ಪಾತ್ರಧಾರಿಗಳ ಆಯ್ಕೆ ಆಯ್ತು. ಒಂದು ತಿಂಗಳೂ ಮೇಸ್ಟ್ರು ಪ್ರಾಕ್ಟೀಸ್ ಮಾಡ್ಸಿದ್ದೂ ಆತು. ಊರ್ನಾಗೆ, ಪಕ್ಕದ ಹಳ್ಯಾಗೆ ಆಟೋದಾಗೆ ಅನೌಂನ್ಸ್ ಮಾಡ್ಸಿದ್ದು ಆತು.
ನಾಟಕಕ್ಕೆ ಅಂತಾ ಷಾಮಿಯಾನ,ಮೈಕ್ ಸೆಟ್, ಡ್ರೆಸ್, ಸ್ಕ್ರೀನ್ ಎಲ್ಲಾ ಬಾಡಿಗೆಗೆ ತಂದು ಸಂಕ್ರಾಂತಿ ದಿನ ನಾಟಕ ಸುರುವಾಗೇ ಬಿಡ್ತು. ಮುಂದಿನ ಸಾಲ್ನಾಗೆ ಊರ ಅಧ್ಯಕ್ಸ ಗಬ್ಬುನಾಥ ಗೌಡ, ಅವನ ಎರಡನೇ ಹೆಂಡರು ಸಾಕಮ್ಮ, ನಮ್ಮವ್ವ ಎಲ್ಲಾ ಕುಂತಿದ್ರು. ನಮ್ಮೂರು ಐಕ್ಲು ಸಂಜೆಯಿಂದನೇ ನಾಟಕ ನಡೆಯೋತಾವ ಸೇರಿದ್ರು. ಪಾನ ಪ್ರಿಯರು ರಾತ್ರಿ ಮತ್ತೆ ಸಿಗಕ್ಕಿಲ್ಲಾ ಅಂತಾ ಎರಡೆರಡು ಪ್ಯಾಕೆಟ್ ಎಕ್ಸಟ್ರಾ ತಂದು ಮಡಿಕ್ಕಂಡಿದ್ವು. ನಾನೂ ರಾತ್ರಿ ಬೀಡಿ ಸಿಗಕ್ಕಿಲ್ಲಾ ಅಂತಾ ಮಧ್ಯಾಹ್ನವೇ ತಂದು ಮಡಿಕ್ಕಂಡಿದ್ದೆ.
ನಾಟಕ ಸುರು, ಸುಕ್ಲಾಂ ಬರದರಂ, ಮುಗೀತು ರಾಮ ಸೀತೆ ಎಂಟ್ರಿ (ಕಾಡಿಗೆ ಓಗೋ ಸೀನು),ರಾಮನಿಗೆ ಮೈತುಂಬಾ ನೀಲಿ ಪೇಂಟ್. ಸಂಜೆ ಟೇಂ ಆಗಕ್ಕಿಲ್ಲಾ ಅಂತಾ ಮಧ್ಯಾಹ್ನನೇ ಬಳದಿದ್ವಿ. ಅವನ ಮೈ ಎರಡು ಲೀಟರ್ ಪೇಂಟ್ ಕುಡಿದಿತ್ತು. ಮಗಾ ಅಂಗೇ ಮರದ ಬಿಲ್ ಇಡ್ಕೊಂಡು ಊರ್ನಾಗೆ ಒಡಾಡೋನು. ಇವನೇ ಕಲಾ ರಾಮ.ಅನ್ನೋವು ನಮ್ಮ ಐಕ್ಲು , ಭರತನ ಎಂಟ್ರಿ. ಅಣ್ಣಾ ನೀ ನಮ್ಮನ್ನೆಲ್ಲಾ ಬಿಟ್ಟು ಹೋಗ್ ಬೇಡ್ಲಾ ಅಂದ. ಬೇಕಾದ್ರೆ ನೀ ಹೋಗು. ಸೀತೆನ ಇಲ್ಲೇ ಬಿಡು. ಯಾಕ್ಲಾ ಎಂಗೈತೆ ಮೈಗೆ. ನಿನ್ನ ಬದಲಿಗೆ ನಿನ್ನ ಚಪ್ಪಲಿಯನ್ನಾದರೂ ಕೊಡು ಇಟ್ಟು ಪೂಜಿಸುತ್ತೇನೆ. ಅಂತಿದ್ದಂಗೆನೇ ರಾಮ ಚಪ್ಪಲಿನ ರೊಯ್ ಅಂತ ಭರತನ ಮೇಲೆ ಎಸ್ದೇ ಬಿಟ್ಟ. ಯಾಕಲಾ, ಲಕ್ಸಮಣ್ಯ ಅವಾಗಿಂದ ನನ್ನ ಚಪ್ಪಲಿ ತುಳೀತಿದ್ದಾ ಕನ್ಲಾ. ಎಲ್ಡ್ ಸತಿ ಬೀಳ್ತಿದ್ದೆ. ನೀ ಕೇಳಿದ್ದು ಒಳ್ಳೇದ್ ಆಯ್ತಲಾ. ಏನ್ಲಾ ಸಗಣಿ ವಾಸ್ನೆ. ಹೂಂ ಕನ್ಲಾ ಬತ್ತಾ ಸಗಣಿ ತುಳಿದಿದ್ದೆ. ಏ ಥೂ. ಅಂತಾ ಚಪ್ಪಲಿನ ತಲೆ ಮೇಲೆ ಇಟ್ಟಕಳ್ಳೋ ಬೇಡವೋ ಅಂತಾ ಯೋಚಿಸ್ತಿದ್ದ. ತಲೆಮ್ಯಾಕೆ ಮಡಗಲಾ, ಮೇಸ್ಟ್ರು. ರಾಮ ಕಾಡು ಅಂತಾ ಸ್ಟೇಜ್ನಾಗೆ ಅಂಗೇ ಮೂರು ರವಂಡ್ ಹಾಕ್ದ. ನೀ ಹೋಗಲಾ, ಮೇಸ್ಟ್ರೆ ಪದ. ಹೇಳ್ ಸಾಯಿ.
ವಿಧಿ ವಿಲಾಸ, ಏಕೀ ವನವಾಸ, ಅಷ್ಟೊತ್ತಿಗೆ ಲಕ್ಸಮಣ್ಯ, ಸಾಕು ಹೋಗಲಾ, ನೆಕ್ಸ್ಟ್ ಸೀನಾಗೆ ಏಳುವಂತೆ. ಅಸೋಕವನದಾಗೆ ಸೀತೆ, ಕೂತು ಬಾಳ ಹೊತ್ತಾಗಿತ್ತು. ಬಲೇ ಸೊಳ್ಳೆ. ಹೊಡ್ಕೊಂತಾ ಕುಂತಿದ್ಲು. ಏ ಆಂಜನೇಯನ್ನ ಕಳಿಸ್ರೋ. ಸೀನ್ ಲೇಟು ಅಂತಾ ಹಿಂದಗಡೆ ಸ್ಟೇಜ್ನಾಗೆ ಬೀಡಿ ಹೊಡಿತಾ ಕುಂತಿದ್ದೆ. ಮೇಸ್ಟ್ರು ವಾಯ್ಸ್ ಬತ್ತಿದ್ದಾಗೇನೇ ಅಂಗೇ ಎಂಟ್ರಿ. ಲೇ ಬೀಡಿ ಹೊಗೆ ಬಿಟ್ಟು ಹೋಗ್ಲಾ. ಹೋಗಿ ಅಂಗೇ ಸೀತೆ ಮುಂದೆ ನಿಂತೆ. ಪದ್ಮ, ಲೇ ನಿನ್ನ ಮೂತಿ ಎಲ್ಲೋ ಅಂದ್ಲು. ಆಆಆಆಆಆ, ಬೀಡಿ ಹೊಗೆ ಅಂಗೇ ಆಚೆ. ನೋಡ್ಲಾ ಆಂಜನೇಯನತಾವ ಹೊಗೆ ಆಕವ್ರೆ. ಸೈಡಿಂದ ರಾಮ ಮೂತಿ ಒಗೆದ.
ಮೂತಿನ ಹಾಕಬೇಕು ಅಂದರೆ ಸ್ಯಾನೇ ಸಿಟ್ಟು. ಅದನ್ನು ಹಾಕಿ, ಹಾಕಿ ಬಾಯೆಲ್ಲಾ ನೋವು, ಅಂಗೇ ಉಸಿರು ಕಟ್ತದೆ,ಯಾವನು ಹಾಕಿದ್ನೋ ಏನೋ ಕೆಟ್ಟ ವಾಸ್ನೆ ಬೇರೆ. ವಿಧಿಯಿಲ್ಲಾ ಹಾಕ್ಕೊಂಡೆ. ಅದ್ರಾಗಿಂದ ಮಾತಾಡಿದ್ರೇ ಕೇಳಕ್ಕಿಲ್ಲಾ ಅಂತಾ. ಒಸಿ ಮೇಲೆತ್ತಿ. ಸೀತಾ ಮಾತೆ. ನಿಮ್ಮನ್ನು ನೋಡಿ ಕೊಂಡು ಬರಲು ರಾಮ ಕಳ್ಸಾವ್ನೆ ಏನಾದ್ರೂ ಏಳ್ ಬೇಕಾ. ಬೇಡ ಬುಡ್ಲಾ ಅವನು ಎಂಗಿದ್ರು ಸಂಜೆ ಮನೆತಾವ ಬತ್ತಾನೆ. ಅಯ್ಯೋ ನಿನ್ನ ಮನೆ ಕಾಯ್ವೋಗ. ಲೇ ನಿಂಗೂ ಅವನಿಗೂ ಯಾವಾಗೇ ಲಿಂಕು. ತಡಿ ಗೌಡ್ರಿಗೆ ಏಳ್ತೀನಿ. ಅಂಗೆಲ್ಲಾ ಮಾಡ್ಬಿಟ್ಟೀಯಾ. ಏನು ಬೇಡ. ಅನುಮ. ನಾನು ಸಂದಾಕ್ಕಿದ್ದೀನಿ ಅಂತಾ ಏಳ್ಬಿಡು. ಸರಿ ಅಕ್ಕಾ. ಅಷ್ಟೊತ್ತಿಗೆ ರಾವಣ ಸೀನು, ಹತ್ತು ತಲೆನಾ ರಟ್ಟಿಂದ ಮಾಡ್ಸಂಕಡ್ ಬಾ ಅಂದ್ರೆ, ನಮ್ಮೂರು ಸುಬ್ಬ, ತಗಡಿಗೆ ವೆಲ್ಡಿಂಗ್ ಮಾಡ್ಸಂಕಂಡ್ ಬಂದಿದ್ದ. ಭಲೇ ಭಾರ. ರಾವಣ ಎಂಟ್ರಿ. ಅವನು ತಲೆ ತಿರುಗಸಿದ ಅಂದ್ರೆ ಒಂದ್ ಸೈಡಿನ ತಲೆ ನಲಕ್ಕೆ ಮುಟ್ಟೋದು. ಏನ್ ಹೆಣ ಬಾರ್ಲಾ ಇದು. ಮಗಾ ಸುಬ್ಬ ಸಿಗಲಿ ಅಂತಾ ಹಲ್ಲು ಕಡಿಯೋನು.
ಅನುಮನನ್ನು ಎಳೆ ತನ್ನಿ. ಅವನ ಬಾಲಕ್ಕೆ ಹಚ್ರಲ್ಲಾ ಬೆಂಕಿ. ಮಹಾಪ್ರಭು ಬೆಂಕಿ ಹತ್ತುತ್ತಾ ಇಲ್ಲ. ಲೇ ಎಲ್ಲಿ ಹೋಗಿದ್ಯೋ, ಬಾಲ ಹಸಿ ಐತಂತೆ. ಲೇ ಸೀಮೆ ಎಣ್ಣೆ ಸುರಿದ್ರು ಹಚ್ರೋ......, (ತಲೆ ಭಾರ ತಡೆಯಲಾರದೆ), ಬೆಂಕಿ ಹತ್ತಿತು, ಅಂಗೇ ಸ್ಟೇಜ್ನಾಗೆಲ್ಲಾ ಒಂದು ರವಂಡ್, ಮೇಸ್ಟ್ರು ಉಸಾರ್ ಕನ್ಲಾ, ಷಾಮಿಯಾನಕ್ಕೆ ಬೆಂಕಿ ಹಚ್ಚೀಸ್ ಬಿಟ್ಟಿಯಾ. ಸಾಯೋಗಂಟ ಸಾಮಿಯಾನದ ಅಂಗಡ್ಯಾಗೆ ದುಡಿಬೇಕಾಗುತ್ತೆ. ರವಂಡ್ ಹಾಕಿ ಸೈಡ್ಗೆ ಬಂದ್ ನಿಂತೆ. ಬಾಲಾನ ಬಕ್ಕೀಟ್ನಾಗೆ ಅದ್ದು ಆರ್ಸಿದ್ರು. ಕಡೇ ಡೈಲಾಗ್ ರಾವಣಂಗೆ ಅವಾಜ್ ಹಾಕಿ ಹೋಗೋದು.
ಇನ್ನೂ ಡೈಲಾಗ್ ಹೇಳೇ ಇಲ್ಲ. ಯಾವನೋ ಬಡ್ಡೆ ಐದ. ನೆಕ್ಸ್ಟ್ ಸೀನ್ ಅಂತಿದ್ದಾಗೆನೇ. ಸ್ಕ್ರೀನ್ ಬಿಟ್ಟು ಬಿಡೋದಾ. ಬಲವಾದ ಬೊಂಬು ಹಾಕಿದ್ರು. ಬಂದು ತಲೆ ಮ್ಯಾಕೆ ಬೀಳ್ತಿದ್ದಂಗೆನೇ ಡೈಲಾಗ್ ಎಲ್ಲಾ ಮತ್ತೇ ಹೊಯ್ತು. ತಲ್ಯಾಗೆ ರಕ್ತ. ರಾವಣ ಡೈಲಾಗ್ ಏಳ್ಲಾ. ತಲೆ ಭಾರ ಆಯ್ತಾ ಐತೆ. ಅಯ್ಯೋ ಲೇ. ಯಾವನ್ಲಾ ಸ್ಕ್ರೀನ್ ಬಿಟ್ಟಿದ್ದು, ಬಡ್ಡೆ ಐದ್ನೆ ಕೆರೆತಾವ ಸಿಕ್ಕು ನಿಂಗೆ ಐತೆ. ಏನ್ಲಾ ಡೈಲಾಗ್. ಲೇ ಸೀತೆನಾ ನೀ ಎಲ್ಲಿಗಾದ್ರೂ ಕರ್ಕಂಡು ಹೋಗಲಾ, ನಾ ಇದೀನಿ.
ರಾಮ ಏನಾದ್ರೂ ಅಡ್ಡ ಬಂದ್ರೆ ಏಳು. ಅವನ ಬುಲ್ಡೆಗೆ ಬಿಸ್ನೀರು ಕಾಯ್ಸಿತೀನಿ. ಅಂತಿದ್ದಾಗೆನೇ ರಾಮ, ಯಾರಿಗಲಾ ನೀ ಅಂದಿದ್ದು. ಹಿಂಗೆ ಒಬ್ಬರಿಗೊಬ್ಬರಿಗೆ ಲಿಂಕ್ ಆಗಿ. ಪೂರ್ತಿ ರಾಮಾಣ್ಯನೇ ಸ್ಟೇಜ್ನಾಗೆ ಇತ್ತು. ಲೇ ಒಳಗೆ ಹೋಗ್ರಲಾ ಮೇಸ್ಟ್ರು ಬಯ್ತದೆ. ಲೇ ಮೇಸ್ಟ್ರು ಆಗಲೇ ಹಿಂದಿಂದ ಓಡು ಹೋದ್ರಲಾ ಅಂದ್ರು. ಎದುರುಗಡೆ ನೋಡ್ತೀನಿ. ಗಬ್ಬುನಾಥ ಗೌಡಪ್ಪನ ಬಿಟ್ಟು ಯಾರೂ ಇಲ್ಲ. ಗೌಡ್ರೆ ನೀವು ಹೋಗ್ಲಿಲ್ವಾ. ಲೇ ನೀವು ಬಲೇ ಚಂಗುಲಿ ನನ್ಮಕ್ಕಳು ಅಂತಾ ಗೊತ್ತಿತ್ತು. ಅದಕ್ಕೇ ನನ್ನ ಹೆಂಡ್ತಿನಾ ಕಾಯ್ತಾ ಇವ್ನಿ ಕನ್ರಲಾ. ನೀ ಏನಾದ್ರೂ ಮಾಡ್ಕ ಗೌಡಪ್ಪಾ ಅಂದು, ನಾನು,ರಾವಣ ಸೈಡ್ ಹೋಗಿ ಬೀಡಿ ಹಚ್ಕೊಂಡು ಅಂಗೇ ಧಮ್ ಎಳೀತಾ ಕೂತಿದ್ವಿ. ಸ್ಟೇಜ್ನಾಗೆ ಇದ್ದದೆಲ್ಲಾ ಒಂದೊಂದಾಗೆ ಕಳೆಗೆ ಬರೋದು. ನಡೀಲಾ ಹೋಗುವಾ. ಗಲಾಟೆ ಮುಗಿದ್ ಮ್ಯಾಕ್ ಅವ್ರೇ ಮನೀ ಕಡೆ ಬತ್ತಾರೆ. ಇದು ನಮ್ಮ ನಾಟಕದ ಕಥೆ.
Comments
ಉ: ಪೆಸೆಲ್ ನಾಟಕ - ರಾಮಾಣ್ಯ
In reply to ಉ: ಪೆಸೆಲ್ ನಾಟಕ - ರಾಮಾಣ್ಯ by vsangur
ಉ: ಪೆಸೆಲ್ ನಾಟಕ - ರಾಮಾಣ್ಯ
ಉ: ಪೆಸೆಲ್ ನಾಟಕ - ರಾಮಾಣ್ಯ
In reply to ಉ: ಪೆಸೆಲ್ ನಾಟಕ - ರಾಮಾಣ್ಯ by suresh nadig
ಉ: ಪೆಸೆಲ್ ನಾಟಕ - ರಾಮಾಣ್ಯ
ಉ: ಪೆಸೆಲ್ ನಾಟಕ - ರಾಮಾಣ್ಯ
In reply to ಉ: ಪೆಸೆಲ್ ನಾಟಕ - ರಾಮಾಣ್ಯ by sudhichadaga
ಉ: ಪೆಸೆಲ್ ನಾಟಕ - ರಾಮಾಣ್ಯ
ಉ: ಪೆಸೆಲ್ ನಾಟಕ - ರಾಮಾಣ್ಯ
In reply to ಉ: ಪೆಸೆಲ್ ನಾಟಕ - ರಾಮಾಣ್ಯ by ksraghavendranavada
ಉ: ಪೆಸೆಲ್ ನಾಟಕ - ರಾಮಾಣ್ಯ
ಉ: ಪೆಸೆಲ್ ನಾಟಕ - ರಾಮಾಣ್ಯ
In reply to ಉ: ಪೆಸೆಲ್ ನಾಟಕ - ರಾಮಾಣ್ಯ by shivaram_shastri
ಉ: ಪೆಸೆಲ್ ನಾಟಕ - ರಾಮಾಣ್ಯ
ಉ: ಪೆಸೆಲ್ ನಾಟಕ - ರಾಮಾಣ್ಯ
In reply to ಉ: ಪೆಸೆಲ್ ನಾಟಕ - ರಾಮಾಣ್ಯ by shreekant.mishrikoti
ಉ: ಪೆಸೆಲ್ ನಾಟಕ - ರಾಮಾಣ್ಯ
ಉ: ಪೆಸೆಲ್ ನಾಟಕ - ರಾಮಾಣ್ಯ
In reply to ಉ: ಪೆಸೆಲ್ ನಾಟಕ - ರಾಮಾಣ್ಯ by malathi shimoga
ಉ: ಪೆಸೆಲ್ ನಾಟಕ - ರಾಮಾಣ್ಯ
ಉ: ಪೆಸೆಲ್ ನಾಟಕ - ರಾಮಾಣ್ಯ
In reply to ಉ: ಪೆಸೆಲ್ ನಾಟಕ - ರಾಮಾಣ್ಯ by anil.ramesh
ಉ: ಪೆಸೆಲ್ ನಾಟಕ - ರಾಮಾಣ್ಯ
ಉ: ಪೆಸೆಲ್ ನಾಟಕ - ರಾಮಾಣ್ಯ
ಉ: ಪೆಸೆಲ್ ನಾಟಕ - ರಾಮಾಣ್ಯ
In reply to ಉ: ಪೆಸೆಲ್ ನಾಟಕ - ರಾಮಾಣ್ಯ by gopinatha
ಉ: ಪೆಸೆಲ್ ನಾಟಕ - ರಾಮಾಣ್ಯ