ನನ್ನದಲ್ಲದ ಕವನದಿಂದಾದ ಕಿರಿಕಿರಿ !!

ನನ್ನದಲ್ಲದ ಕವನದಿಂದಾದ ಕಿರಿಕಿರಿ !!

ನನ್ನ  ಹಿಂದಿನ   ಬ್ಲಾಗು  ತೀರ ಅನಗತ್ಯವೇ ಆಗಿತ್ತು  .  ಈ    ಬ್ಲಾಗೂ ಕೂಡ   ಅಗತ್ಯವಿಲ್ಲವೇನೋ ?  ಆದರೆ     ನಾನು ಮೌನಿಯಾಗಿರುವುದು ಕೂಡ  ತಪ್ಪೇನೋ  ಅಂತ    ಈ ಕೆಲವು   ಸಾಲು  ಬರೆಯುತ್ತಿದ್ದೀನಿ.

ನಾನು  ನಾಲ್ಕೈದು ವರ್ಷಗಳಿಂದ  ಸಂಪದದ   ಸಂಪರ್ಕದಲ್ಲಿ      ಇದ್ದೇನೆ  .   ನಾನು     ಓದಿ   ಹಂಚಿಕೊಳ್ಳಬೇಕೆನಿಸಿದ    ಒಳ್ಳೆಯ   ವಿಷಯಗಳನ್ನು ಸಂಗ್ರಹಿಸಿ ಬರೆದದ್ದೇ ಹೆಚ್ಚು   . ಸ್ವಂತಿಕೆಯ    ಬರಹಗಳು   ಬಹಳ ಕಡಿಮೆ.    ಇತ್ತೀಚೆಗೆ     ಹೊಸ   ಬ್ಲಾಗು ಬರಹಗಳನ್ನು      ನಾನು ಬರೆಯದೇ   ಇರುವುದಕ್ಕೆ    ಇದೇ ಕಾರಣ . ಹಳೆಯ ಸ್ಟಾಕ್    ಖಾಲಿ ಆಗಿದೆ. ಹೊಸತೇನೂ ಸಿಕ್ಕಿಲ್ಲ  .  ಓದು  ಕಡಿಮೆ ಆಗಿರುವುದೂ  ಒಂದು ಕಾರಣ .   

ಯಾರಿಗಾದರೂ ಏನಾದರೂ   ಉಪಯೋಗ   ಆಗಲೆಂದು    ಕನ್ನಡ  ಸಾಹಿತ್ಯ.ಕಾಂ  ಗಾಗಿ ಬರಹಗಳನ್ನು ತಿದ್ದಿ ಕೊಡುವುದು ,  ಕನ್ನಡ ಪದಪರೀಕ್ಷಕ  ಕ್ಕಾಗಿ   ಶಬ್ದಗಳನ್ನು ಸೇರಿಸಿರುವುದು , ಲೀನಕ್ಸ್   ಕನ್ನಡ  ಆವೃತ್ತಿಗಾಗಿ    ವಾಕ್ಯಗಳನ್ನು   ಅನುವಾದ  ಮಾಡುವುದು  , ಈಗ  ಒಂದೂವರೆ ವರ್ಷದಿಂದ  ಹರಿದಾಸ ಸಂಪದ ( haridasa.in ) ಗೆ    ಸಾಹಿತ್ಯ   ಸೇರಿಸುವುದನ್ನ   ಮಾಡುತ್ತ   ಇದ್ದೇನೆ .   
ನಾನು   ಸಾಮಾನ್ಯವಾಗಿ   ವಾದವಿವಾದಗಳಲ್ಲಿ   ಪಾಲ್ಗೊಳ್ಳುತ್ತಿಲ್ಲ  . ಇದಕ್ಕೆ       ಇಂಟರ್ನೆಟ್  ಯಾವಾಗಲೂ   ಲಭ್ಯ ಇರದಿರುವುದೂ  ,  ನನಗೆ   ವಾದವಿವಾದಗಳಲ್ಲಿ    ಭಾಗವಹಿಸುವ  ಶಕ್ತಿಯೂ  , ಅದಕ್ಕೆ ಬೇಕಾದ  ಸಹನೆಯೂ  ಇಲ್ಲದಿರುವುದೂ   ಕಾರಣಗಳು .

ಸಂಪದದಲ್ಲಿ   ಬಹುದಿನಗಳಿಂದ ಏನೂ ಬರೆಯದೇ   ಇದ್ದು    ಏನಾದರೂ ಬರೆಯಬೇಕೆಂಬ  ಆತುರವೋ ,  ಇತ್ತೀಚೆಗೆ ಸಂಪದದಲ್ಲಿ ಕಿರುಕವನಗಳ   ಬಂಪರ್  ಫಸಲು  ಕಾರಣವೋ     ಈ ಬ್ಲಾಗ್ ಅನ್ನು ಪೋಸ್ಟ್  ಮಾಡಿಬಿಟ್ಟೆ .   ಈ   ಸಾಲುಗಳು     ನೆನೆದಾಗ   ನನ್ನ   ತುಟಿ ಅರಳಲು    ಕಾರಣವಾಗುತ್ತವೆ .   

ಕಾಗೆಗಳು    ಕಿರಿಚುತಿವೆ ಕಾ ಕಾ  ಎಂದು  ,
ಕೇಳದಿರು  ನನ್ನ  ನೀ ಏಕೆಂದು  

 ಇದು    -  ಕವಿಗಳ   ಬಗ್ಗೆ   ವಿಡಂಬನೆಯ  ಮಾತು .

ಇನ್ನೊಂದು     -  ಕವನ ಬರೆಯಲೇ  ಬೇಕೆಂದು    ಕೂತು   ,  ಬರೆಯಲಾಗದಿರುವಿಕೆಯ    ಬಗೆಗೆ   ಅವನ  ಸಹಜ ಉದ್ಗಾರದ  ಮಾತು , ಇಲ್ಲಿ ಪ್ರಾಸವೂ   ಇದೆ ,  ಸಾಮಾನ್ಯವಾಗಿ    ಉತ್ತರ  ಕರ್ನಾಟಕದ  ಜನರು ಉದ್ಗಾರವೂ   ಇದೆ .  ಅಲ್ಲಿ    ಯಾವ ಕೀಳು   ಅರ್ಥವೂ   ಉದ್ದೇಶವೂ  ಇಲ್ಲ .   ಇಂಗ್ಲೀಷಿನಲ್ಲಿ     ನಾಲ್ಕಕ್ಷರದ  ಅನೇಕ ಉದ್ಗಾರಗಳನ್ನು   ಮಾಡೋದಿಲ್ಲವೇ    ಹಾಗೆ.  ಹಾಗೆಂದು   
     ಉತ್ತರ   ಕರ್ನಾಟಕದ  ಎಲ್ಲರೂ  ಈ  ಶಬ್ದಗಳನ್ನು  ಬಳಸುತ್ತಾರೆಂದು ತಿಳಿಯುವುದಾಗಲೀ    ಹಳಿಯುವುದಾಗಲೀ  ಮಾಡಬೇಕಿಲ್ಲ  . ನಾನೇ    ಈ    ಶಬ್ದವನ್ನು   ಎಂದಿಗೂ   ಬಳಸಿಲ್ಲ  ; ಬಳಸುವುದಿಲ್ಲ .    ( ಅಂದ ಹಾಗೆ ಈ ಸಮಯಕ್ಕೆ   ನನ್ನೊಬ್ಬ ಗೆಳೆಯನ   ನೆನಪಾಗುತ್ತದೆ - ಅವನ ಬಾಯಲ್ಲಿ ಬರಬಹುದಾದ ಅತೀ  ಕೆಟ್ಟ   ಬೈಗುಳವೆಂದರೆ  - ಅವಿವೇಕಿ !  )  


ಅದೇಕೋ     ಈ ಎರಡೂ  ಸಾಲುಗಳನ್ನು   ಹಾಕಿಬಿಟ್ಟೆ .   ಆಮೇಲೆ   ತೆಗೆದೂ ಬಿಟ್ಟೆ .   ಪ್ರತಿಕ್ರಿಯೆಗಳೂ  , ಮರುಪ್ರತಿಕ್ರಿಯೆಗಳೂ   , ಚರ್ಚೆಯೂ  , ಒಂದಿಷ್ಟು ಕಹಿಯೂ  ಉಂಟಾಯಿತು .  ಸರಿ ತಪ್ಪು ಏನೇ ಇರಲಿ ,  ಕಹಿ  ವಾತಾವರಣಕ್ಕೆ  ಕಾರಣನಾದುದಕ್ಕೆ    ವಿಷಾದವಿದೆ.   ಕ್ಷಮೆ ಇರಲಿ .
 ಆದರೆ  ಕೆಲವು ಒಳ್ಳೆಯ ವಿಚಾರಗಳೂ    ಅಲ್ಲಿ   ಬಂದವು .
ನನ್ನ  ಬಗೆಗೆ  ಅಭಿಮಾನವನ್ನು   ತೋರಿದವರಿಗೂ    'ನನ್ನಿಂದ'  ಇಂತಹ   ಬರಹಗಳನ್ನು    ನಿರೀಕ್ಷಿಸಿರದವರಿಗೂ   ಶುಭ ಹಾರೈಕೆಗಳು    .  
ಇನ್ನು        ಆ   ಬಗ್ಗೆ  ಚರ್ಚೆ   ಮುಗಿಯಲಿ.  



Rating
No votes yet

Comments