ಸಪೋಟಾ ತೋಟ..ಕಾರ್ತಿಕನ ಆಟ...

ಸಪೋಟಾ ತೋಟ..ಕಾರ್ತಿಕನ ಆಟ...

ಬೆಂಗಳೂರಿನ ಪ್ಯಾಲೆಸ್ ಗ್ರೌಂಡ್ ನಲ್ಲಿ ಸಪೋಟಾ ತೋಟವಿದೆ. ಇಂತಹದೊಂದು ಕಲ್ಪನೆನೂ  ಇರಲಿಲ್ಲ. ಮೊನ್ನೆಯಷ್ಟೆ ಅಲ್ಲಿಗೆ ಹೋದಾಗ ತೋಟದ ಆ ಒಂದು ಸೌಂದರ್ಯ ಮನದಲ್ಲಿ ಜಾಗ ಮಾಡಿತು.`ಕಾರ್ತಿಕ್' ಅನ್ನೊ ಹೊಸಬನ ಚಿತ್ರದ ಶೂಟಿಂಗ್ ಇಲ್ಲಿ ನಡೆಯುತಿತ್ತು. ಕಾಡೊಂದರ  ಅನುಭವ ನೀಡುವ ಈ ಸ್ಥಳದಲ್ಲಿ ಮುಂಬೈನ ಚಿತ್ರ ತಂಡ ಆಗಮಿಸಿತ್ತು.ಕೆಲವರನ್ನ ಬಿಟ್ರೆ, ಇಲ್ಲಿಯ ಫಿಲ್ಮ ಟೀಮ್ ಬಹುತೇಕ ಮರಾಠಿ ಚಿತ್ರರಂಗದಲ್ಲಿಯೇ ದುಡಿಯುತ್ತಿದೆ.ವಿಶೇಷವೆಂದರೆ, ದೂರದ ಮಹಾರಾಷ್ಟದಿಂದ ಬಂದವರಿಗೆ  ಉತ್ತಮವಾದ ಕನ್ನಡ ಚಿತ್ರಕೊಡಲೇಬೇಕೆಂದು ಎಲ್ಲರೂ ಇಲ್ಲಿ ಆಸಕ್ತಿಯಿಂದ ಕೆಲಸ ಮಾಡುತ್ತಿದ್ದರು.


ಇದೇನೋ ಸರಿ, ಆದ್ರೆ, ಇಲ್ಲಿ ಇನ್ನು ವಿಶೇಷತೆಗಳಿದ್ದವು. ಚಿತ್ರದ ನಾಯಕ ಕರ್ನಾಟಕದವರು.ಮೂಲ ಹೆಸರು ಪ್ರಜ್ವಲ್ ಶೆಟ್ಟಿ.ಕಾರ್ತಿಕ್ ಶೆಟ್ಟಿ ಈ ನಟನಿಗೆ ಚಿತ್ರರಂಗ ಕೊಟ್ಟ ಹೆಸರು. 'ಯುವಾ' ಚಿತ್ರವೇ ಈ ಕಲಾವಿದನಿಗೆ ಸ್ಯಾಂಡಲ್ ವುಡ್ ಬರಲು ದಾರಿ ಮಾಡಿಕೊಟ್ಟತು. ಇದು ಬರದೆ ಇದ್ದರೆ ಬಹುಶ: ಕಾರ್ತಿಕ್ ಮುಂಬೈನಗರದಲ್ಲಿ ಉಳಿದು ಬಿಡುತ್ತಿದ್ದರು.ತಂದೆ ವಿಜಯ್ ಶೆಟ್ಟಿಯ ಸ್ನೇಹಿತ..ಮಹೇಶ್ ಮಾಂಜ್ರೇಕರ್ ಜೊತೆಗೆ ಸಹಾಯಕ ನಿರ್ದೇಶಕರಾಗಿಯುಳಿಯುತ್ತಿದರೋ ಏನೋ.ಮಂಗಳೂರಿನ ನಂಟು, ಚಿತ್ರರಂಗದಲ್ಲಿ ಮಿಂಚಬೇಕೆಂಬ ಹಂಬಲ. ಎರಡೂ ಪ್ರಜ್ವಲ್ ಶೆಟ್ಟೆಯೆಂಬ ಯುವಕನನ್ನ ಇಲ್ಲಿಗೆ ತಂದಿವೆ...


ಕಾರ್ತಿಕ್ ಅಂತ ಬರಲಿರುವ ಚಿತ್ರದಲ್ಲಿ ನಾಯಕ ಪ್ರಜ್ವಲ್ ಸಮರ ಕಲೆಯನ್ನ ಪ್ರಯೋಗಿಸಿದ್ದಾರೆ. ಪ್ರೀತಿ-ಪ್ರೇಮದ  ಎಳೆ ಇರೋ ಚಿತ್ರದಲ್ಲಿ ಸಾಹಸಕ್ಕೆ  ವಿಶೇಷ ಸ್ಥಾನ-ಮಾನವಿದೆ.ರಿಯಲ್ ಸ್ಟಂಟ್ಸ್ ಗಳ ಸಾಹಸವೂ ಇದೆ.ಹಾಗಾಗಿ, ನಾಯಕ ಪ್ರಜ್ವಲ್ ಡ್ಯೂಪ್ ಇಲ್ಲದೇನೆ ಇಲ್ಲಿ ಹಲವು ಆರ್ಕಷಕ ಸ್ಟಂಟ್ಸ್ ಮಾಡಿದ್ದಾರೆ.ಎದೆವರೆಗೂ ಮೇಲಕ್ಕೆ ಹಾರಿ ಖಳನಾಯಕರನ್ನ ಹೊಡೆದು ಹಾಕುವ ದೃಶ್ಯಗಳನಂತು ಕಾರ್ತಿಕ್ ತುಂಬಾ ಚೆನ್ನಾಗಿ ಮಾಡಿದ್ದಾರೆ.ಜಂಪಿಂಗ್, ಫಯರ್ ಸ್ಟಂಟ್ಸ್ ಗಳಲ್ಲೂ ಇದೇ ಧೈರ್ಯ..


`ಯುವಾ'ಚಿತ್ರದಲ್ಲಿ ಕಾರ್ತಿಕ್ ಒಬ್ಬ ವೃತ್ತಿಪರ ಸಮರ ಕಲಾವಿದನ (ಮಾರ್ಷಲ್ ಆರ್ಟ್)ಪಾತ್ರ ನಿರ್ವಹಿಸಿದ್ದರು.ಅದಕ್ಕೇನೆ ಯುವಾ ಚಿತ್ರದಲ್ಲಿ ರೋಮಾಂಚನಗೊಳ್ಳುವಂತಹ ಫೈಟಿಂಗ್ ಗಳಿದ್ದವು. ಆದ್ರೆ, ಇದೇ ನಟ `ಕಾರ್ತಿಕ್'ಚಿತ್ರಕ್ಕಾಗಿ ವಿಶೇಷ ತರಬೇತಿ ಪಡೆದುಕೊಂಡು ಬಂದಿದ್ದಾರೆ. ಸಿಂಗಪೂರ್ ನಲ್ಲಿ ಬರೊಬ್ಬರಿ 4 ತಿಂಗಳವರೆಗೂ ವಿವಿಧ ಸಮರ ಕಲೆಯ ಅಭ್ಯಾಸ ಮಾಡಿಬಂದಿದ್ದಾರೆ. `ಮಿಕ್ಸ್ಡ್ ಮಾರ್ಷಲ್ ಆರ್ಟ್' ಅಂತ ಕರೆಯಲ್ಪಡುವ ಈ ಕಲೆಯಲ್ಲಿ ಎದುರಾಳಿಯನ್ನ ಬಡೆದು ಹಾಕುವ ಸಾಕಷ್ಟು ಯುದ್ಧ ಕಲೆಯಗಳಿವೆ..


ವಿಶಿಷ್ಟ ತಾಲೀಮಿನ  ಈ ನಾಯಕ  ಎಲ್ಲವನ್ನ  ಅಲ್ಲದೇ ಇದ್ದರೂ ತಕ್ಕಮಟ್ಟಿಗೆ ಕಾರ್ತಿಕ್ ಚಿತ್ರದ ಸಾಹಸಗಳಲ್ಲಿ ಇವುಗಳನ್ನ ಬಳಸಿದ್ದಾರೆ. `ನಂಜುಂಡಿ ಕಲ್ಯಾಣಿ' ಚಿತ್ರಕ್ಕೆ ಸಾಹಸ ಮಾಡುತ್ತಿದ್ದ ಸ್ಟಂಟ್ಸ್ ಮಾಸ್ಟರ್ ನಂಜುಂಡಿ ನಾಗರಾಜ್ ಈ ಚಿತ್ರಕ್ಕೆ ಸಾಹಸ ನಿರ್ದೇಶನ ಮಾಡಿದ್ದಾರೆ. ಹಳೇ ಬೇರು..ಹೊಸ ಚಿಗುರು ಅನ್ನೋ ಥರವೇ ಕಾರ್ತಿಕ್ ನ  ಉತ್ಸಾಹಕ್ಕೆ ಹಿರಿಯ ಸಾಹಸಿಗ ನಾಗರಾಜ್ ಸಾಕಷ್ಟು ಸಂತಸಗೊಂಡಿದ್ದರು. ತಮ್ಮ ಕಲ್ಪನೆಯ ಸಂಯೋಜನೆಯಲ್ಲಿ ಬರುವ ಆ ಎಲ್ಲ ಸಾಹಸಗಳನ್ನ ಕಾರ್ತಿಕ್ ನಿಂದ ಮಾಡಿಸಿದ್ದಾರೆ.


ಸಾಹಸದ ದೃಷ್ಟಿಯಿಂದ ಕಾರ್ತಿಕ್ ಚಿತ್ರ ಹೆಚ್ಚು ಗಮನ ಸೆಳೆಯಬಹುದು. ಕಥೆ ಏನ್ ಆಗ್ತದೆ ಅಂತ ಸದ್ಯಕಂತು ಹೇಳೋದಕ್ಕೆ ಆಗುವುದಿಲ್ಲ.ಸತೀಶ್  ಶೆಟ್ಟಿಯವರ ನಿರ್ದೇಶನಕ್ಕೆ ಕನ್ನಡಿಗರು ಅದೆಷ್ಟು ಪ್ರಶಂಸೆ ವ್ಯಕ್ತಪಡಿಸುತ್ತಾರೋ..ಕನ್ನಡದ ನಟ ಅವಿನಾಶ್, ಸುಧಾ ಬೆಳವಾಡಿ ಕಾರ್ತಿಕ್ ನಲ್ಲಿ ಕಾಣಿಸಿಕೊಳ್ತಾಯಿದ್ದಾರೆ.ಮುಂಬೈ ಬೆಡಗಿ..ಸರ್ಕಸ್ ಚತ್ರದ ಚೆಲುವೆ ಅರ್ಚನಾ ಗುಪ್ತಾ ಇಲ್ಲಿ ಲೀಡ್ ರೋಲ್ ನಲ್ಲಿದ್ದಾರೆ.ಮೊದಲೇ ಹೇಳಿದಂತೆ ಕೊಂಚ ಸ್ಟಂಟ್ಸ್ ಗಳನ್ನೂ ಮಾಡಿದ್ದಾರೆ. ಇವರೆಲ್ಲರ ಸಾಹಸಮಯ ಚಿತ್ರ ತೆರೆಗೆ ಬರಲು ಇನ್ನು ಬಹಳಷ್ಟು ದಿನಗಳು ಬೇಕು..ಈಗಷ್ಟೇ ಚಿತ್ರ ತಂಡ ಶೂಟಿಂಗ್ ಕಂಪ್ಲೀಟ್ ಮಾಡಿದೆ...


ರೇವನ್ ಪಿ.ಜೇವೂರ್

Rating
No votes yet