ನಮ್ಮೂರ ಪೆಸೆಲ್ ಬಸ್.....
ನಮ್ಮೂರಿಂದ ಬೆಂಗ್ಳೂರಿಗೆ ಇರೋದೆಲ್ಲಾ ಉದಯರಂಗ ಪ್ರೈವೇಟ್ ಬಸ್. ಅದ್ರಾಗೂ ಇಸ್ಮಾಯಿಲ್ ಡ್ರೇವರ್ ಆಗಿರೋ ಬಸ್ ಅಂದ್ರೆ ರವಷ್ಟು ಪೇಮಸ್. ಎಲ್ಲಾರೂ ಒಂದೂವರೆಗಂಟೆಗೆ ಬೆಂಗ್ಳೂರಿಗೆ ಹೋದ್ರೆ, ಈ ಬಡ್ಡೆ ಐದ ಮುಕ್ಕಾಲು ಗಂಟೆಗೇ ಓಯ್ತಾನೆ. ಅದ್ರಾಗೂ ಹೊಟ್ಟೆಗೊಂದಿಷ್ಟು ಪಾನಕ ಬಿತ್ತು ಅಂದ್ರೆ, ಇನ್ನೂ ಪಾಸ್ಟ್. ಅವತ್ತೊಂದಿನ ಬೆಳಗ್ಗೆನೇ ಬೆಂಗ್ಳೂರಿಗೆ ಓಗಬೇಕು ಅಂತಾ ನಿಂತಿದ್ದೆ. ಬಂತು ಇಸ್ಮಾಯಿಲ್ ಬಸ್. ಏನ್ಲಾ ಇಸ್ಮಾಯಿಲ್ ನೀನೇ ಏನ್ಲಾ ಡ್ರೇವರ್, ಹೋ ಭಯ್ಯಾ. ನಿನ್ನ್ ನೋಡಿ ಬಾಳ ದಿನಾಗೆ ಆಗಿತ್ತು. ಆವ್ ಭಯ್ಯಾ ಬಾಜೂ ಮೇ ಬೈಟ್. ಬಾನೆಟ್ ಮ್ಯಾಕೆ ಕೂರ್ಸದ. ಪೈಲ್ಸ್ ಬೇರೆ ಐತಾ. ಬಾನೆಟ್ ಈಟ್ ಸುಖವಾಗಿತ್ತು. ಕೂತ್ಕಂತಿದ್ದಾಗೇನೇ ಗುರುವೇ ಸಿದ್ದೇಸ. ಅಣ್ಣಾ ನಮ್ಮನೇ ದೇವರು ಅಲ್ಲಾ ಮತ್ತು ತಿಪ್ಪೇ ರುದ್ರೇಸ ಅಂದಾ. ಸರಿ ಮುಂದು ನೋಡ್ಕೊಂಡು ಓಡ್ಸಲಾ. ಎಲ್ಲಾದ್ರೂ ಕಿಸ್ಕಂಡ್ ಬಿಟ್ಟಿಯಾ.
ಬಸ್ಸಿಂದು ಇಂಜಿನ್ಗಿಂತ ಬಾಡಿದೇ ರವಷ್ಟು ಸೌಂಡ್. ಹಾರ್ನೇ ಬೇಡ. ಅದರಾಗೆ ಬಡಕೋತಿದ್ದಾ. ಗುಟ್ಕಾ ಹಾಕ್ಕೊಂಡು ಮಾತಡಿದ್ದೆಲ್ಲಾ ಬಸ್ಸಿನ್ ಕತೆಯೇ. ಮಧ್ಯ ಮಧ್ಯ ಗುಟ್ಕಾ ಉಗಿಯೋನು. ಲೇ ಯಾವನ್ಲೇ ಅದು ಉಗಿತಿರೋದು, ಬಿಳಿ ಸಲ್ಟೆಲ್ಲಾ ಕೆಂಪಾಗೈತೆ ಅಂತಾ ಗಬ್ಬುನಾಥ ಗೌಡಪ್ಪ. ದಿನಾ ಇದ್ದುದ್ದೇ ಅಂಗೇ ಉಗೀತಾನೆ ಇದ್ದ. ಲೇ ಗುಟ್ಕಾ ತಿನ್ಬೇಡ್ಲಾ ಎದ್ಯಾಗೆ ಗೂಡು ಕಟ್ತತೆ ಸಿಗರೇಟು ಸೇದ್ಲಾ. ಸಿಗರೇಟ್ ಏನು ಬಿಲ್ಡಿಂಗ್ ಕಟ್ತತಾ ಭಯ್ಯಾ ಅಂದ. ಇವನ ಬಸ್ ಬರಬೇಕಾದ್ರೆ ಎಲ್ಲರೂ ಎಂಗೆ ದೂರು ಹೋಗ್ತಾರೋ ಇವನ ಗುಟ್ಕಾ ಹಾಕದ ಅಂದ್ರೂ ಅದೇಯಾ. ಬಾಯ್ನಾಗೆ ಇರೋ ಗುಟ್ಕಾ ಎಲ್ಲಾ ಎದುರುಗಡೆ ಇರೋ ಮುಖದಮ್ಯಾಗೆ . ಯಾರು ಇರ್ಲಿ ಬಿಡ್ಲಿ ಉಗಿಯೋದೆಯಾ.
ಹಿಂಗೆ ಹೋಗೋ ಬೇಕಾದ್ರೆ ಸೈಡ್ನಾಗೆ ಇದ್ದ ಪೋಲೀಸಪ್ಪನ ಮ್ಯಾಕೆ ಉಗುದು ದಂಡ ಕಟ್ಟಿದ್ದ ಅಂಗೇ ಸ್ಯಾನೇ ಒದೆನೂ ತಿಂದಿದ್ದ. ಕನಿಷ್ಠ ಅಂದ್ರೂ ತಿಂಗ್ಳಾಗೆ ಒಂದು ಆಕ್ಸಿಡೆಂಟ್ ಆದ್ರೂ ಇರ್ತಾತೆ. ಯಾವುದೂ ವೆಹಿಕಲ್ ಸಿಗಲಿಲ್ಲಾ ಅಂದ್ರೆ ಕೊನೆಗೇ ಇವ್ನೇ ಹುಡ್ಕೊಂಡು ಹೋಗಿ ಮರಕ್ಕಾದರೂ ಡಿಕ್ಕಿ ಹೊಡೆರ್ದಿತಾನೆ. ದೇಸಕ್ಕೆ ಇವ್ನಿಂದ ಸ್ಯಾನೆ ಉಪಕಾರ. ಜನಸಂಖ್ಯಾ ನಿಯಂತ್ರಣ. ಕನಿಸ್ಠ ಎಂದ್ರೂ ತಿಂಗ್ಳಾಗೆ ಒಂದು 30ಜನನ್ನ ಮ್ಯಾಕೆ ಕಳ್ಸಿರ್ತಾನೆ. ಇನ್ಸೂರೆನ್ಸ್ ಮಾಡ್ಸಿ ಬಸ್ ಹತ್ಬೇಕು. ಕಡೇ ಪಕ್ಸ ಸತ್ತರೋ ಮನೆಗಾದ್ರೂ ಕಾಸು ಬರ್ತದೆ. ಅಂಗಾಗಿ ಇಸ್ಮಾಯಲ್ಗೆ ಅಳೇ ಬಸ್.
ಇವನ ಬಸ್ ಬರ್ತಿದ್ದಾಗೇನೇ ಪುಟ್ ಪಾತ್ನಾಗೆ ಇದ್ದ ಜನ ಮನೆ ಮುಂದಿನ ಜಗುಲಿಗೆ ಓಡಿ ಓಗೋರು. ಬಡ್ಡೆ ಐದ ಎಲ್ಲಿ ಮೈಮ್ಯಾಕೆ ಹತ್ತಿಸ್ತಾನೋ ಅಂತಾ. ಇವನನ್ನ ನೋಡ್ತಿದ್ದಾಗೆ, "ಬೇಟಾ ಸೋಜಾ, ವರ್ನಾ ಗಬ್ಬರ್ ಆಯೇಗಾ" ಸೋಲೆ ಪಿಚ್ಚರ್ನ ಡಯಲಾಗ್. ಸೈಡ್ಗೆ ಹೋಗು ಇಸ್ಮಾಯಿಲ್ ಬತ್ತಾವ್ನೆ. ಬೆಂಗ್ಳೂರು ಬರದಾಗೆ ಅವನ ಜೀವನದ ಬಸ್ ಸಾಧನೆ ನನ್ ಮುಂದೆ ಇಟ್ಟಿದ್ದ , ಬಸ್ಸಿಂದ ಇಳಿದ್ರು ಮೈ ಅಲಗಾಡೋದು ನಿಂರ್ತಿಲಿಲ್ಲ. ಬರ್ತಿನ್ಲಾ.... . ಮುಂದಿನ ದಪಾನು ನಮ್ ಬಸ್ನಾಗೆ ಬಾರನಾ ಅಂದ. ಜೀವ ಅನ್ನೋದು ಇದ್ದರೆ ಬತ್ತೀನಿ ಕನ್ಲಾ.
ನನ್ನ ಹೆಂಡರು ತಂಗಿ ಉಬ್ಬು ಹಲ್ಲು ಸುಬ್ಬಿಗೆ ಒಬ್ಬ ಹಾಸನದ ಗಂಡು ಸಿಕ್ಕಿದ್ದ. ಎಲ್ರೂ ಓಗೋಕೆ ಅಂತಾ, ಹಳ್ಳಿಯಿಂದ ಬಸ್ ಮಾಡಿದ್ರು. ಮನೆ ಮುಂದೆ ಬಸ್ ಬಂತು ನೋತ್ತೀನಿ.ಇಸ್ಮಾಯಿಲ್. ನೀ ಎನ್ಲಾ ಡ್ರೇವರ್. ಹೂಂ ಭಯ್ಯಾ, ಸರಿ ಬಿಡು ನಾವು ಲಗ್ನಕ್ಕೆ ಓದಾಂಗೆ. ಸೇಫ್ಟಿ ಡೋರ್ ಎಲ್ಲಲಾ ಐತೆ. ಅದ್ಯಾಕಣ್ಣಾ, ಕಿಟಿಕಿಯಾಗೆ ಹಾರ್ಕೋಬೋದು. ಅದ್ ಏನು ಅಪಸಕುನ ಅಂಥಾ ನುಡಿತೀಯಾ, ನನ್ನ ಹೆಂಡರು. ಬಸ್ನೊಳಗೆ ಎಲ್ಲಾ ಹತ್ತಿದ್ವಿ. ಇಸ್ಮಾಯಿಲ್ ಮೊಬೈಲ್ನಾಗೆ ಹಾಡಕ್ಕೊಂಡು, ಜೊತೆಗೆ ಗುಟ್ಕಾ ಹಾಕ್ಕೊಂಡು ಹೊಂಟಾ. ಯಾರು ಮಾತಾಡಿದ್ದು ಕೇಳ್ತಾ ಇರ್ಲಿಲ್ಲ. ಬರೀ ಬಸ್ನ ಬಾಡಿ ಸೌಂಡ್, ಗಡ ಗಡ ಗಡ ಅಂತಾ. ಅದ್ರಾಗೆ ನನ್ನ ಹೆಂಡರು ಸ್ಯಾನೆ ಮಾತಡಿದ್ದೇ ಮಾತಾಡಿದ್ದು. ಸುಬ್ಬಿ ಮಾತ್ರ ಉಬ್ಬು ಹಲ್ಲು ಬಿಡ್ಕೊಂಡು ಮುಂದಿನ ಸೀಟ್ನಾಗೆ ರೋಡ್ ನೋಡ್ತಾ ಕುಂತಿದ್ಲು. ಮಧ್ಯ ಮಧ್ಯ ಬಸ್ ನಿಲ್ಸಿ ಕೆಲವೊಬ್ಬರು ಚೊಂಬು ಹಿಡ್ಕೊಂಡು ಗದ್ದೆ ತಾವ ಹೋಗೋರು. ಬೆಳಗ್ಗೆ ಅದೇನು ಹಳ್ಸಿದ್ದು ತಿಂದಿದ್ವು ಏನೋ.
ಪಕ್ಕದಾಗೆ ಹಳ್ಳಿ ಹೆಣ್ಣು ಮಕ್ಕಳು ಕುಂತಾವೆ ಅಂತಾ ಇಸ್ಮಾಯಿಲ್ದು ಸ್ಯಾನೆ ಸ್ಟೈಲು. ಒಂದೇ ಕೈನಾಗೆ ಸ್ಟೇರಿಂಗ್ ಹಿಡ್ಕೊಂಡು ಓಡ್ಸೋನು. ಅದ್ರಾಗೆ ತಲೆ ಬಾಚ್ಕಳೋನು. ರಸ್ತೆಲ್ಲಿ ಓಗೋರಿಗೆಲ್ಲಾ ಕಾಮಡಿ ಮಾಡೋನು. ಸರಿ ಬಿಡು ಇವತ್ತು ಎಲ್ಲರಿಗೂ ಐತೆ ಗ್ರಹಚಾರ ಅಂದ್ಕೊತಿದ್ದ ಹಾಗೇನೇ. ಇಸ್ಮಾಯಿಲ್ ನಗ್ತಾ, ನಗ್ತಾ ಸ್ಟೇರಿಂಗ್ನ ಎಡಗಡೆಗೆ ಪೂರ್ತಿ ತಿರುಗಿಸಿ ಅಲ್ಲೇ ಇದ್ದ ದಿಬ್ಬಾ ಹಾರಿಸಿದ್ದ. ರಸ್ತ್ಯಾಗೆ ಓಗ್ತಿದ್ದ ಬಸ್ ಇದ್ದಕ್ಕಿದ್ಗಂಗೆ ಗದ್ದ್ಯಾಗೆ ಒಂಟಿತ್ತು. ಏನ್ಲಾ . ಏ ನೀ ಹೆದರಕ ಬೇಡ ಭಯ್ಯಾ ನಮ್ದೂಕೆ ಇದೆಲ್ಲಾ ಮಾಮೂಲಿ. ಅಂದವೇ ಬಲಕ್ಕೆ ತಿರುಗಿಸಿದ ನೋಡಿ ಅಂಗೇ ಬಸ್ ದಬ್ಬಾಕಂತು. ಒಬ್ಬರೂ ಮೇಲೆ ಒಬ್ಬರು ದಬಾ ದಬಾ ಅಂತಾ ಬಿದ್ದಿದ್ದೆ. ಇಸ್ಮಾಯಲ್ ಮಾತ್ರ ಆಗ್ಲೇ ಹಾರ್ಕೊಂಡು ದೂರದಾಗೆ ಹೊಂಟಿದ್ದ. ಬಾರ್ಲಾ ನಮ್ಮನ್ನ ಎತ್ತಬಾರ್ಲಾ ಅಂದೆ. ಕೇಳಿದ್ರು ಕೇಳ್ಸಿದಿದ್ದಂಗೆ ಹೊಂಟೇ ಹೋದ. ಮಗನೇ ಉರ್ನಾಗೆ ಸಿಗು, ನಿನಗೆ ಐತೆ.
ದೊಗಲೆ ಚೆಡ್ಡಿ ಹಾಕಿದ್ದ ನಮ್ಮ ಮಾವ ಎಲ್ಲಿ ಅಂತಾ ನೋಡ್ತೀನಿ ಎರಡು ಕಾಲನ್ನು ಸ್ಟೇರಿಂಗ್ ಮ್ಯಾಕೆ ಹಾಕಿ, ಕಿಸ್ಕೊಂಡು ಬಿಟ್ಟಾವ್ರೆ. ನನ್ನ ಹೆಂಡರು ತಲೆ ಮುಂದಿನ ಸೀಟ್ ಬಾರ್ನಾಗೆ ಸಿಕ್ಕಾಕಂಡಿದೆ. ಅತ್ತೆ ಕಾಯಿ ಚೀಲದ ಮಧ್ಯದಾಗೆ, ಸುಬ್ಬೀ ಅಂದೆ. ಬಾಮಾ ನಾ ಇಲ್ಲಿ ಇದೀನಿ ಅಂದ್ಲು. ನೋಡಿದ್ರೆ ಮುಂದುಗಡೆ ಗ್ಲಾಸಿಂದ ಅಂಗೇ ಹೊರಗೆ ಓಗವ್ಳೆ. ನಿನ್ನ ಉಬ್ಬು ಹಲ್ಲಿಗೆ ಏನ್ ಆಯ್ತೇ. ಬಾಮ ಬಿದ್ದಾಗ ಗದ್ದೆಯಲ್ಲಿದ್ದ ಕಲ್ಲಿಗೆ ಡಿಕ್ಕಿ ಹೊಡೆದು 4ಹಲ್ಲು ಮುರಿದು ಹೋಯ್ತು. ಅಂದ್ಲೂ, ಬಾಯೆಲ್ಲಾ ರಕ್ತ. ನಿನ್ನ ಗಂಡ ಬದುಕಿದ ಬಿಡೂ ಅಂದೆ. ಪಕ್ಕದಮನೆ ನಿಂಗವ್ವನ ಮೇಲೆ ಗಿರಜಮ್ಮ,ಸರೋಜಮ್ಮ, ಏ ಏಳ್ರೇ, ನನ್ನ ಸೊಂಟಾ ಓಯ್ತು. ಆ ಕಡೆ ಈ ಕಡೆ ನೋಡಿ ನಿಂಗವ್ವನ ಸೊಂಟ ಹಿಡಿದು ಮ್ಯಾಕೆ ಎತ್ತಿದೆ. ಎಲ್ಲಲಾ ಡ್ರೇವರ್, ಯಾಕವ್ವಾ, ಅವನ ಮೊಕ್ಕೆ ಆಮ್ಲೇಟ್ ಉಯ್ಯಾ. ಮದುವೆ ಮನೆಗೆ ಓಗೋರನ್ನ ಮಸಾನಕ್ಕೆ ಕಳ್ಸ್ ಬಿಡ್ತಿದ್ನಲ್ಲಾ. ಸೋಮಣ್ಣ ಎಲ್ಲಲಾ. ನಂಜಿ ಮೇಲೆ ಬಿದ್ ಬಿಟ್ಟಾವ್ನೆ. ಎಲ್ರನ್ನೂ ಎತ್ತಿದ್ ಮ್ಯಾಕೆ ನನ್ನನ್ನ ಎತ್ತಲಾ. ಬಡ್ಡೆ ಐದನೆ ಮೊದಲು ನಿನ್ನನ್ನೇ ಅಂತಾ ಎತ್ತಿ ಹೊರ ಹಾಕ್ದೆ. ಅದೇನ್ ಸಾಪ ಹಾಕ್ಕೊಂಡ್ನೊ.
ರಾಜಣ್ಣ ನೋಡಿದ್ರೆ ಲಗ್ಗೇಜ್ ಇಡೋ ಜಾಗದಾಗೆ ಕಿಸ್ಕೊಂಡು ಬಿಟ್ಟಾವ್ನೆ. ಬ್ಯಾಗೆ ಎಳ್ದೆಂಗೆ ಎಳೆದು ಹೊರ ಹಾಕ್ದೆ. ಲೇ ರಂಗ, ಅಣ್ಣಾ ಇಲ್ಲಿ. ಹುಡುಕಿದರೆ ಬಡ್ಡೇ ಐದ ಮೇಲ್ಗಡೆ ಬಾರ್ಗೆ ತಗಲಾಕ್ಕೊಂಡವ್ನೆ. ಸಣ್ಣ ಪುಟ್ಟ ಮಕ್ಳೆಲ್ಲಾ ಉಲ್ಟಾ. ಶಿರಸಾಸನ. ರಕ್ತ ಬಂದವರಿಗೆಲ್ಲಾ ಅರಿಸಿನ ಹಚ್ಚಿ ಪ್ರಥಮ ಚಿಕಿತ್ಸೆ. ಕ್ಲೀನರ್ ಎಲ್ಲಿ ಅಂತಾ ಹುಡುಕ್ತಾ ಇದ್ರೆ. ಹೊಡಿತಾರೆ ಅಂತಾ ಬಡ್ಡೆ ಐದ ಗದ್ದೇಲಿ ಕೆಲ್ಸ ಮಾಡೋರು ಜೊತೆ ತಲೆ ಮ್ಯಾಕೆ ಗೋಣಿ ಚೀಲ ಹಾಕ್ಕೊಂಡು ಸೇರ್ಕಂಡ್ ಬಿಟ್ಟಾವ್ನೆ. ಎಲ್ರೂ ಒಂದೊಂದು ಆಸನ. ಅಂತೂ ಇಂತೂ ಎಲ್ಲರನ್ನೂ ಹೊರಹಾಕಿದ್ದು ಆಯಿತು.
ಮನೆಯಿಂದ ವೈನಾಗೆ ಒಂಟೋರು, ಗದ್ದೆಲ್ಲಿ ಬಿದ್ದು ಎಲ್ರೂ ಮಣ್ಣಿನ ಮಕ್ಕಳು.ಗಾರೆ ಕೆಲ್ಸದೋರು ತರಾ ಆಗಿದ್ವಿ. ನನ್ನ ಹೆಂಡರು ತಲೆ ಉತ್ತರಕ್ಕೆ ತಿರುಗಿತ್ತು. ನಿನಗೇನೂ ಆಗಿಲ್ವಾ. ಆಗೈತೆ ಏಳಕ್ಕೆ ಆಗಕ್ಕಿಲ್ಲಾ ಅಂದೆ. ಅಂತೂ ಇಂತೂ ಮದುವೆ ಮನೆ ತಲುಪಿದ್ವಿ. ಸುಬ್ಬಿನಾ ನೋಡ್ತಿದ್ದಾಗೇನೇ ಗಂಡು ಫುಲ್ ಖುಸ್ ಆಗಿದ್ದ. ಯಾಕ್ಲಾ, ಬದುಕಿದೆಯಾ ಬಡ ಜೀವವೇ ಅಂದ. ಸಾ ಡ್ರೇವರ್ ಎಲ್ಲಿ. ಯಾಕೆ, ಅವ್ನಗೊಂದು ಥ್ಯಾಂಕ್ಸ್ ಏಳಬೇಕು, ಯಾಕಲಾ. ಸುಬ್ಬಿ ಉಬ್ಬು ಹಲ್ಲನ್ನು ಬೀಳಸಿ ನನಗೆ ಸ್ಯಾನೆ ಸಹಾಯ ಮಾಡಾವ್ನೆ. ಅಂಗೇ ಬಕ್ಸೀಸು ಕೊಡಬೇಕು ಅಂದಾ. ಆಹಾ, ನಿಂದು ಡ್ರೇವರ್ದು ಮ್ಯಾಚ್ ಪಿಕ್ಸಿಂಗಾ ಏನ್ಲಾ. ಮಾತ್ತೀನಿ ತಾಳು, ಸುಬ್ಬಿಗೆ ಹಲ್ಲು ಉಬ್ಬು ಇದ್ದುದರಿಂದ ವರದಕ್ಸಿಣೆ ಕೊಡ್ತೀವಿ ಅಂದಿದ್ವಿ. ಈಗ ಅದು ಕ್ಯಾನ್ಸಲ್ ಅಂತಿದ್ದಾಗೆನೇ ವರ ಅಂಗೇ ಚೇರ್ ಮ್ಯಾಕೆ ಕುಂತಿದ್ದ. ಸುಬ್ಬಿ ಮಾತ್ರ ಬಾಮಾ,ಬಾಮಾ ಚಕ್ಕಲಿ ತಿನ್ನಕ್ಕೆ ಆಗಲ್ಲಾ ಅಂತಿದ್ಲು. ಪುಟ್ಟಿ ಯೋಸ್ನೇ ಮಾಡ್ಬೇಡಮ್ಮಾ ಮಿಕ್ಸಿಗೆ ಹಾಕಿ ಪುಡಿ ಮಾಡ್ಸಿಕೊತ್ತೀನಿ.
Comments
ಉ: ನಮ್ಮೂರ ಪೆಸೆಲ್ ಬಸ್.....
In reply to ಉ: ನಮ್ಮೂರ ಪೆಸೆಲ್ ಬಸ್..... by malathi shimoga
ಉ: ನಮ್ಮೂರ ಪೆಸೆಲ್ ಬಸ್.....
In reply to ಉ: ನಮ್ಮೂರ ಪೆಸೆಲ್ ಬಸ್..... by komal kumar1231
ಉ: ನಮ್ಮೂರ ಪೆಸೆಲ್ ಬಸ್.....
In reply to ಉ: ನಮ್ಮೂರ ಪೆಸೆಲ್ ಬಸ್..... by malathi shimoga
ಉ: ನಮ್ಮೂರ ಪೆಸೆಲ್ ಬಸ್.....
In reply to ಉ: ನಮ್ಮೂರ ಪೆಸೆಲ್ ಬಸ್..... by shanbhag7
ಉ: ನಮ್ಮೂರ ಪೆಸೆಲ್ ಬಸ್.....
ಉ: ನಮ್ಮೂರ ಪೆಸೆಲ್ ಬಸ್.....
ಉ: ನಮ್ಮೂರ ಪೆಸೆಲ್ ಬಸ್.....
In reply to ಉ: ನಮ್ಮೂರ ಪೆಸೆಲ್ ಬಸ್..... by suresh nadig
ಉ: ನಮ್ಮೂರ ಪೆಸೆಲ್ ಬಸ್.....
ಉ: ನಮ್ಮೂರ ಪೆಸೆಲ್ ಬಸ್.....
In reply to ಉ: ನಮ್ಮೂರ ಪೆಸೆಲ್ ಬಸ್..... by thewiseant
ಉ: ನಮ್ಮೂರ ಪೆಸೆಲ್ ಬಸ್.....
ಉ: ನಮ್ಮೂರ ಪೆಸೆಲ್ ಬಸ್.....
In reply to ಉ: ನಮ್ಮೂರ ಪೆಸೆಲ್ ಬಸ್..... by santhosh_87
ಉ: ನಮ್ಮೂರ ಪೆಸೆಲ್ ಬಸ್.....
ಉ: ನಮ್ಮೂರ ಪೆಸೆಲ್ ಬಸ್.....
In reply to ಉ: ನಮ್ಮೂರ ಪೆಸೆಲ್ ಬಸ್..... by gopaljsr
ಉ: ನಮ್ಮೂರ ಪೆಸೆಲ್ ಬಸ್.....
ಉ: ನಮ್ಮೂರ ಪೆಸೆಲ್ ಬಸ್.....
In reply to ಉ: ನಮ್ಮೂರ ಪೆಸೆಲ್ ಬಸ್..... by Narayana
ಉ: ನಮ್ಮೂರ ಪೆಸೆಲ್ ಬಸ್.....
ಬೋ ಸಂದಾಕೈತೆ
In reply to ಬೋ ಸಂದಾಕೈತೆ by pachhu2002
ಉ: ಬೋ ಸಂದಾಕೈತೆ