’ನಿಜದ ಸೋಲೆಂಬ’ ಕಲ್ಪನೆಯ ಗೆಲುವೇ ದಂತಕಥೆ!
(೧೩೧) ದಂತಕಥೆಗಳು ಪ್ರಕ್ಷುಬ್ಧತೆ, ನೋವು ಮತ್ತು ಹಿಂಸೆಯನ್ನು ಉದ್ದೇಶಿಸುತ್ತವೆ. ಜನರು ಅದನ್ನು ಮರೆಯುವಂತೆ ಮಾಡುವ ಮೂಲಕ ಉದ್ದೇಶಿಸಲಾಗುತ್ತದೆ ಅವುಗಳನ್ನು! ವಿಶೇಷವೆಂದರೆ ಆ ದಂತಕಥೆಗಳೊಳಗಿನ ಪಾತ್ರಧಾರಿಗಳು ಮಾತ್ರ ಇವೆಲ್ಲವನ್ನೂ ಅನುಭವಿಸಬೇಕಾಗಿ ಬರುತ್ತವಷ್ಟೇ!
(೧೩೨) ನಿಜದಲ್ಲಿ ಏನನ್ನು ಕಳೆದುಕೊಂಡಿದ್ದೇವೆಯೋ ಅದನ್ನು ಕಲ್ಪನೆಯಲ್ಲಿ ಪುನರ್-ಸಂಪಾದಿಸಿಕೊಳ್ಳಬಹುದು!
(೧೩೩) ದೇವನೇ ಸರಿಯಾದ ಅಡುಗೆಭಟ್ಟನೆಂದು ಅರಿತವರು ಇತರ ಪ್ರಾಣಿಗಳು. ಹಾಗೆ ತಯಾರಾದ ಊಟಕ್ಕೂ ಅಡುಗೆಯ ಮೂಲಕ ಮಸಾಲೆ ಸೇರಿಸಿ ಹೊಟ್ಟೆ ಕೆಡಿಸಿಕೊಂಡ ಒಂದೇ ಪ್ರಾಣಿ--ಮಾನವ!
(೧೩೪) ಸಣ್ಣದೊಂದು ತಪ್ಪು ಅಳತೆಮೀರಿ ಬೆಳೆವುದನ್ನು ಕೊಲೆ ಎನ್ನಬಹುದು. ದೇಹವೊಂದನ್ನು ಭೌತಿಕವಾಗಿ ಇಲ್ಲವಾಗಿಸುವ ಮೂಲಕ ಸಮಸ್ಯೆಯೊಂದನ್ನು ಕೊನೆಗಾಣಿಸಬಹುದೆಂಬ ಚಿಂತನೆಯ ಸಪಲ ಕ್ರಿಯೆಯೇ ಕೊಲೆ. ಚಿಂತನೆಯೊಂದರೆ ಕೊಲೆಯನ್ನು ಹಿಂಸೆ ಎಂದು ಸಾಮಾನ್ಯವಾಗಿ ಪರಿಗಣಿಸಲಾಗುವುದಿಲ್ಲ!
(೧೩೫) ನಾವು ಮಾಡಲಾರದ್ದನ್ನು ಮತ್ತೊಬ್ಬರು ಮಾಡಿ ತೋರಿಸಿದರೆ ಅವರಿಗೆ ದೊರಕುವ ಕೊಡುಗೆ ’ಹೊಗಳಿಕೆ’. ಬೇರೆಯವರು ಮಾಡಬಾರದ್ದನು ನಾವು ಮಾಡಿಬಿಟ್ಟು ಯಾರ ಕೈಗೂ ಸಿಕ್ಕಿಹಾಕಿಕೊಳ್ಳದಿದ್ದರೆ ನಮ್ಮಲ್ಲಿ ಉಂಟಾಗಬಹುದಾದ ಭಾವವೇ ’ಪಶ್ಚಾತ್ತಾಪ’. ನಾವು ಮಾಡಬಾರದೆಂದುಕೊಂಡದ್ದನ್ನು ಮತ್ತೊಬ್ಬರು ಮಾಡಲಾಗದೆ ಬಿಟ್ಟರೆ ಅವರ ಬಗ್ಗೆ ನಮ್ಮಲ್ಲಿ ಉದ್ಭವಿಸುವುದೇ ’ಸ್ನೇಹ’. ನಮಗೆ ಅವಕಾಶವಿದ್ದಾಗಲೂ ತಪ್ಪು ಮಾಡದೆ ಉಳಿದಲ್ಲಿ ಬೇರೆಯವರ ಪ್ರಕಾರ ನಾವು ’ಒಳ್ಳೆಯವರು’. ನಿಜದಲ್ಲಿ ಅದು ನೈತಿಕತೆಯೆಂಬ ನಮ್ಮ ಗುಣದೋಷದಿಂದ ಉದ್ಭವಿಸಿದ ಬಲಹೀನತೆ!
Comments
ಉ: ’ನಿಜದ ಸೋಲೆಂಬ’ ಕಲ್ಪನೆಯ ಗೆಲುವೇ ದಂತಕಥೆ!
In reply to ಉ: ’ನಿಜದ ಸೋಲೆಂಬ’ ಕಲ್ಪನೆಯ ಗೆಲುವೇ ದಂತಕಥೆ! by ಭಾಗ್ವತ
ಉ: ’ನಿಜದ ಸೋಲೆಂಬ’ ಕಲ್ಪನೆಯ ಗೆಲುವೇ ದಂತಕಥೆ!
ನಿಜದಲ್ಲಿ ಅದು ನೈತಿಕತೆಯೆಂಬ ನಮ್ಮ ಗುಣದೋಷದಿಂದ.........
In reply to ನಿಜದಲ್ಲಿ ಅದು ನೈತಿಕತೆಯೆಂಬ ನಮ್ಮ ಗುಣದೋಷದಿಂದ......... by shaamala
ಉ: ನಿಜದಲ್ಲಿ ಅದು ನೈತಿಕತೆಯೆಂಬ ನಮ್ಮ ಗುಣದೋಷದಿಂದ.........
ಉ: ’ನಿಜದ ಸೋಲೆಂಬ’ ಕಲ್ಪನೆಯ ಗೆಲುವೇ ದಂತಕಥೆ!
In reply to ಉ: ’ನಿಜದ ಸೋಲೆಂಬ’ ಕಲ್ಪನೆಯ ಗೆಲುವೇ ದಂತಕಥೆ! by malathi shimoga
ಉ: ’ನಿಜದ ಸೋಲೆಂಬ’ ಕಲ್ಪನೆಯ ಗೆಲುವೇ ದಂತಕಥೆ!
ಉ: ’ನಿಜದ ಸೋಲೆಂಬ’ ಕಲ್ಪನೆಯ ಗೆಲುವೇ ದಂತಕಥೆ!