ಮುದ್ದಿನ ಚಂದಿರ. (ಮಕ್ಕಳ ಕವನ)
ನನ್ನಯ ಮುದ್ದಿನ
ಚಂದಿರನು
ಬೆಳ್ಳಿಯ ಬಣ್ಣದ
ಸುಂದರನು.
ಚಿಣ್ಣರಿಗಿವನೆ
ಚೆನ್ನಿಗನು
ರಾತ್ರಿಯ ಲೋಕದ
ದೊರೆಯಿವನು.
ನೋಡಲು ತುಂಬ
ಚಿಕ್ಕವನು
ಹಿಡಿಯಲು ದಕ್ಕದ
ಮುತ್ತವನು.
ತಣ್ಣಗೆ ಕೊರೆಯುವ
ಚಳಿಯವನು
ನನ್ನಯ ಜೊತೆಗೆ
ಬರುವವನು.
ನನ್ನಯ ಅಜ್ಜನ
ಗುರು ಇವನು
ನಮ್ಮಯ ಅಜ್ಜಿಯ
ದೇವನವನು.
ನನ್ನಯ ಪಾಠದಿ
ಪದ್ಯ ಇವನು
ನಮ್ಮಯ ಗೆಳೆಯರ
ಸ್ನೇಹಿತನು.
ನೋಡಲು ತುಂಬಾ
ಸುಂದರನು
ನನ್ನಯ ಮುದ್ದಿನ
ಚಂದಿರನು.
ವಸಂತ್
Rating