ನನ್ನ ಮದುವೆ ಮಂಟಪದಲ್ಲಿ ಅಪ್ಪ ಮದುವೆಯಾದ

ನನ್ನ ಮದುವೆ ಮಂಟಪದಲ್ಲಿ ಅಪ್ಪ ಮದುವೆಯಾದ

ನಮ್ಮೂರ ರಾಜೇಗೌಡರು ಎಂದರೆ ದೊಡ್ಡ ಮನೆತನ. ಅವರಿಗೆ ಒಬ್ಬನೇ ಮಗ ಸಿದ್ದೇಗೌಡ. ನಾವೆಲ್ಲಾ ಪಿರುತಿಯಿಂದ ಸಿದ್ದ ಅಂತಿದ್ವಿ. ಮುಂದಿಂದು ಎರಡು ಹಲ್ಲು ಬಿದ್ದೋಗಿತ್ತು. ಇವನ ಬೀಡಿನಾ ಯಾರೂ ಇಸ್ಕಂತಿರಲಿಲ್ಲ. ಯಾಕೇಂದ್ರ ಬೀಡಿ ಹಸಿ ಆಯ್ತಿತ್ತು ಅದಕ್ಕೆಯಾ. ತಾಯಿಯಿಲ್ಲದ ತಬ್ಲಿ. ಮದುವೆ ವಯಸ್ಸಾಗಿತ್ತು.

ಎಲ್ಲಾ ಸ್ರೀಮಂತರು ಮಕ್ಕಳಿಗೂ ಇರೋ ಹಂಗೆ ಇವನಿಗೂ ಸ್ವಲ್ಪ ಹೆಣ್ಣು ಮಕ್ಕಳು ಕಂಡರೆ ಆಟೆಯಾ. ಕೆಲಸಕ್ಕೆ ಬರೋ ಹಣ್ಣು ಐಕ್ಳುಗಳಿಗೆ, ಬಾಗಲಾಗೆ ನಿಂತುಕೊಂಡು ಎಂಗಿದೀಯಾ, ಯಾರು ಕೊಡ್ಸಿದ್ದು ಈ ಡ್ರೆಸ್ಸಾ. ಇನ್ನು ಮದುವೆಯಾದೋರು ಬಂದ್ರೆ. ನಿನ್ನ ಗಂಡ ನಿನ್ನನ್ನ ಸಂದಾಕ್ಕೆ ನೋಡ್ಕತಾವನಾ. ಅನ್ನೋನು.

ಇದನ್ನ ನೋಡಿದ ಅವರಪ್ಪ ಇವನ್ಗೆ ಬೇಗ ಮದುವೆ ಮಾಡ್ಲಿಲ್ಲಾ ಅಂದ್ರೆ ಕೆಟ್ಟ ಕೆರ ಹಿಡದು ಹೋಯ್ತಾನೆ ಅಂದು. ಪಕ್ಕದೂರಿನ ಚೆಲುವಿ ಗಂಗೇಗೌಡನ ಮಗಳು ಚೆನ್ನಿ ಕೂಡ ಲಗ್ನಾ ಫಿಕ್ಸ್ ಮಾಡ್ದಾ. ಚೆನ್ನೀದು ಒಂದು ಕತೆ ಐತೆ, ಅವಳು ನಮ್ಮನ್ನು ನೋಡಿದ್ರೆ ಪಕ್ಕದೋರನ್ನ ನೋಡ್ದಂಗೆ ಕಾಣ್ತತೆ. ಮೆಳ್ಳು ಗಣ್ಣು. ಅಂಗೇ ಒಸಿ ಮೂಗು ದೊಡ್ಡದೇನೇ. ಬಲತೀರೋ ಹಲಸಿನ ಹಣ್ಣು ಇದ್ದಂಗೆ. ಅವಳಿಗೆ  ಊರ್ನಾಗೆ ಮೆಳ್ಳುಗಣ್ಣು ಚೆನ್ನಿ ಅಂತಾನೇ ಕರೆಯೋದು. ಇವಳು ನೋಡೋ ಸ್ಟೈಲ್ ನೋಡ್ಕೊಂಡು ಒಬ್ಬ ಹೈದ ಹಿಂದೆ ಬಿದ್ದಿದ್ದ. ಇಸ್ಯಾ ಗೊತ್ತಾದ್ ಮ್ಯಾಕೆ ಊರೇ ಬಿಟ್ಟಿದ್ದ. ಮೆಳ್ಗಣ್ಣೆಗೆ ಒಂದ್ಸರಿ ನೋಡಿ ಲೆಫ್ಟಿಗೆ ತುಟಿ ತಿರುಗಿಸಿದ್ಲು ಅಂದ್ರೆ ಸ್ಮೈಲ್ ನೋಡೋಕೆ ಎಲ್ಡು ಕಣ್ಣು ಸಾಲ್ದು. ನೋಡ್ಲಾ ಕೋಮಲ್ ನನ್ನ ಮಗನ್ ಮದುವೆ ಎಂಗಿರಬೇಕು ಅಂದ್ರೆ ಮುಂದೆ ಯಾರು ಮಾಡ್ಬಾರದು ಹಿಂದೆ ಯಾರು ಮಾಡಿರಬಾದು ಕನ್ಲಾ. ಆಯ್ತು ಗೌಡ್ರೆ.

ಮದುವೇ ಬಂದೇ ಬಿಡ್ತು. ಮನೆ ಹೊರಗಡೆ ಬಾಳೇಕಂದು ಕಟ್ಟಿದ್ದೇ ಕಟ್ಟಿದ್ದು. ದನ ಕರು ತಿಂತದಲ್ಲಾ ಅಂತಾ ಸುಬ್ಬಂಗೆ ಕೋಲು, ಎರಡು ಕಟ್ಟು ಬೀಡಿ ಕೊಟ್ಟು ಕಾಯಕ್ಕೆ ಹಚ್ಚಿದ್ವಿ. ಅಂಗೇಯಾ ಮಾವಿನಸೊಪ್ಪು ಕಟ್ಟಿದ್ವಿ. ಬಲೇ ಲೈಟಿನ ಸರ. ಮದುವಗೆ ಬಂದ ಐದಾರು ಜನಕ್ಕೆ ಕರೆಂಟ್ ಹಿಂಡ್ಕೊತ್ತಿದ್ದಾಗೆನೇ, ಏ ಆಫ್ ಮಾಡ್ಲಾ. ಮದುವೇ ಹೋಗಿ ಸಾಮೂಇಕ ಸಾವು ಆಯ್ತದೆ ಅಂತ ಗೌಡ ಆಫ್ ಮಾಡ್ಸ್ದ. ಸ್ರೀಮಂತರು ಮನೆ ಹುಡುಗಾ ಅಂದ್ರೆ ಅಂಗೇ ಆಯ್ತದಾ. ಗೌಡ್ರೆ ಮೆರವಣಿಗೆಗೆ ಒಂದು ಕುದುರೆ ತರ್ಸಿದ್ರೆ ಎಂಗೆ. ಹೂಂ ಕನ್ಲಾ ತರ್ಸು.

ನಮ್ಮೂರನ್ಗಾಗೆ ಹಕ್ಕಿಪಿಕ್ಕಿ ಜನಾಂಗದೋರು ಊರ್ ಹೊರಗೆ ಟೆಂಟ್ ಹಾಕಿದ್ರು. ಅವರ್ತಾವೆನೇ ಒಂದು ಕುದುರೆ ಇಸ್ಕಂ ಬಂದ್ವಿ. ನೋಡೋಕ್ಕೆ ಕುಳ್ಳುಗೆ ಇತ್ತಾದರೂ ಸಿದ್ದಂಗೆ ಸಾಕು ಬಿಡ್ಲಾ ಅಂದ್ರು  ಸ್ನೇಹಿತರು. ದಿಬ್ಬಣ ಹೊಂಟ್ತು. ಗಂಡನ್ನು ಒಬ್ಬರೇ ಕೂರ್ಸಿದ್ರೆ  ಹೆಣ್ಣಿನ್ ಕಡೇರು ಬೇಜಾರ್ ಆಯ್ತಾರೆ ಅಂದ್ರು ಇಬ್ಬರನ್ನೂ ಕೂರಿಸಿದ್ವಿ. ಇವರ ಭಾರಕ್ಕೆ ಅಂಗೇ ಕುದುರೆ ಮಕ್ಕಂಡೇ ಬಿಡ್ತು. ಪೂರ್ತಿ ಕೂರ್ ಬೇಡ್ಲಾ. ಅಂಗೇ ಆಕ್ಟಿಂಗ್ ಮಾಡು. ಸರಿ ಎಂದವ್ನೇ ಕುದುರೆ ಮ್ಯಾಕೆ ನಡ್ಕೊಂಡು ಬಂದಾ. ಲೇ ಯಾರೂ ಪಟಾಕಿ ಹಚ್ ಬೇಡ್ರಲಾ, ಕುದುರೆ ಹೆದರುತೈತೆ. ಅಂಗಾದ್ರೂ ಖಸಿಗೆ ಗೌಡ್ರು ಎರಡು ಲಕ್ಸ್ಮೀ ಪಟಾಕಿ ಹಚ್ಚೇ ಬಿಟ್ಟು. ದಿಬ್ಬಣ ಮುಂದೆ ಡ್ಯಾನ್ಸ್ ಮಾಡಬೇಕು ಅಂತಾ ನಮ್ಮೂರ ಐಕ್ಲು, ಮಧ್ಯಾನದಿಂದಾನೇ ರವಷ್ಟು ಟೈಟಾಗಿದ್ವು. ದಿಬ್ಬಣನಾ ಸಿದ್ದೇಸನ ಗುಡಿ ಹೋಗಬೇಕೂಂತ ಇದ್ದೋರು ನಾವು. ಪಟಾಕಿ ಸಬ್ದಕ್ಕೆ ಹೆದರಿದ ಕುದ್ರೆ  ಎದ್ನೋ ಬಿದ್ನೋ ಅಂತಾ ಓಡೋಕೆ ಸುರುವಾಯ್ತು. ಮುಂದೆ ಇದ್ದೋರ್ಗೆ ಡಿಕ್ಕಿ ಹೊಡೆದಿದ್ದೇ ತಡ ಕೆಲ ಹೆಣ್ಣು ಐಕ್ಲು ಚೆಂರಂಡಿಗೆ ಬಿದ್ರೆ. ಮಿಕ್ಕವೂ ರಸ್ತ್ಯಾಗೆ ಮಕ್ಕಂಡ್ವು. ವಾಲಗದೋರ್ಗೆ, ಲೇ ನೀವು ಜೊತೆಗೆ ಹೋಗ್ರಲ್ಲಾ. ಡಾನ್ಸ್ ಮಾಡೋ ಐಕ್ಲು ಅವನಿಂದೆಯೇ ಹೊಂಟೋ ಹೋದ್ವು.

ಕುದುರೆ ಮ್ಯಾಕೆ ಗಂಡು ಎಣ್ಣು. ಹಿಂದೆ ವಾಲಗ್ದೋರು. ಊರ್ನಾಗೆಲ್ಲಾ ಸುಮಾರು 40ಕೀ.ಮೀ ಸ್ಪೀಡ್ನಾಗೆ ಗಂಡು ಎಣ್ಣು ಕುದ್ರೆ ಮ್ಯಾಕೆ ರನ್ನಿಂಗ್ ರೇಸ್ ಮಾಡಿದ್ದೇ ಮಾಡಿದ್ದು. ಊರ್ನಾಗೆ ಇರೋರು ಗೌಡರ ಮಗ ಇಂಗ್ಯಾಕ್ಲಾ ಓಯ್ತಾನೆ ಅಂತಾ. ಲೇ ಸಿದ್ದಾ, ಕುದುರೆ ನಿಂತ್ ಮ್ಯಾಕೆ ಬತ್ತೀನಿ ತಡ್ಯಲಾ. ಎಷ್ಟು ಚೆನ್ನಾಗಿ ಕುದ್ರೆ ಓಡಿಸ್ತ್ಯಲಾ ನೀನು ಅಂತಾ ಹೆಣ್ಣು. ಅಯ್ಯೋ ಲೇ ಈಗ ಚೂರು ಎಚ್ಚು ಕಮ್ಮಿಯಾದ್ರೂ ನಮ್ಮ ಮದುವೆ ಮೆರವಣಿಗೆ ನಡೆಯಕ್ಕಿಲ್ಲಾ, ಸವದ ಮೆರವಣಿಗೆ ಆಯ್ತದೆ ಅಂದಾ ಸಿದ್ದ. ಕಡೆಗೆ ಹೆಣ್ಣು ಕಡೇ ಬೀದ್ಯಾಗೆ ಇರೋ ರಾಮನ ಮ್ಯಾಕೆ ಕಿಸ್ಕಂಡ್ ಬಿಟ್ಲು. ಏಳವ್ವೋ ಅಂತಾ ರಾಮ.   ಇವರಿಬ್ರೂ ಎಲ್ಲವ್ರೆ ಅಂತಾ ನೋಡಿದ್ರೆ ಹಕ್ಕಿ ಪಿಕ್ಕಿ ಟೆಂಟಿಂದ ನಡ್ಕೊಂಡು ಸಿದ್ದ ಒಬ್ಬನೇ ನಡ್ಕಂಡ್ ಬತ್ತಾ ಇದ್ದ. ಯಾಕ್ಲಾ ಸಿದ್ದೇಸ.ಅವಳು ಎಲ್ಲಲಾ. ಕಡೇ ಬೀದ್ಯಾಗೆ ಬಿದ್ಯಾಳೆ. ನಾನು ಇಲ್ಲೇ ಇವ್ನಿ. ಬಡ್ಡೀ ಮಗಂದು ಕುದುರೆಗೆ ಅಭ್ಯಾಸ ಕನ್ಲಾ ಅದಕ್ಕೆ ಸಾವುಕಾರ ಹತ್ರ ಓಯ್ತು.  ಹೌದು, ಈ ಕುದುರೆ ಐಡೀರಿಯಾ ನಮ್ಮಪ್ಪಂಗೆ ಕೊಟ್ಟೋರು ಯಾರ್ಲಾ ಅಂದಾ. ಹೆಣ್ಣು ಮೆಳ್ಗಣ್ಣಾಗೆ ಬತ್ತಾ ಇತ್ತು. ಉಸಾರವ್ವಾ ಚೆರಂಡ್ಯಾಗೇ ಏನಾದ್ರೂ ಕಾಲ್ ಮಡ್ಗಿಬಿಟ್ಟೀಯಾ. ಸರಿ ಸಿದ್ದೇಸನ ಗುಡಿ ತಾವ ಹೋಗೋಣ ನಡಿ ಎಂದೆ.

ಹೋಗ್ತಿದ್ದಂಗೇನೇ ನಮ್ಮೂರಿನ ಎಣ್ಣು ಐಕ್ಲು ಆರತಿ ಮಾಡಿದ್ವು. ಗಂಡು ಹೆಣ್ಣು ದುಡ್ಡು ಹಾಕ್ರಲಾ ಅಂದ್ರು ಗೌಡ್ರು. ಚೆನ್ನಿ ಮೆಳ್ಗಣ್ಣಿನಿಂದ ಆರತಿ ಮಾಡ್ದೋರು ಪಕ್ಕದಾಗೆ ಇದ್ದ ನಮ್ಮ ಗಬ್ಬುನಾಥ ಗೌಡಪ್ಪನ ಜೋಬ್ನಾಗೆ ಕಾಸು ಆಕಿದ್ಲು. ಏನ್ ಹಂದಿ ಸತ್ತ್ ವಾಸ್ನೆ ಬತ್ತದಲ್ಲಾ. ಅದು ನಮ್ಮೂರು ಪೆಸೆಲ್ ನಡೆಯವಾ. ಗೌಡ್ರು ಮನೆ ಮದುವೆ ಅಂತಾ ಊರ್ನೋರೆಲ್ಲಾ ಮದುವೆ ಮನೆಗೆ ಬಂದಿದ್ರು. ಬೆಳಗ್ಗಿಂದಾನೇ ಉಪವಾಸ ಇದ್ವು ಅಂತಾ ಕಾನೋತ್ತೆ ಮುಂಡೇವು. ಬತ್ತಿದಾಗೇನೇ ಹೊಟ್ಟೆ ತುಂಬಾಎಂಡ ಬುಟ್ಕೊಂಡಿದ್ದೇ ಬುಟ್ಕೊಂಡಿದ್ದು. ಸಿದ್ದೇಸನ ಗುಡಿಯಿಂದ ಮನೆಗೆ ದಿಬ್ಬಣ ವಾಪಸ್ಸು ಬಂದ್ರೆ. ನಮ್ಮೂರು ಐಕ್ಲು ಆಗ್ಲೇ ಕುಡಿದಿದ್ದನ್ನ ಮನೆ ಮುಂದೆ ದೋಸೆ ರೂಪದಲ್ಲಿ ಆಕ್ತಾ ಇದ್ವು. ಏನ್ಲಾ ಕೋಮಲ್, ಅಂದ್ರು ಗೌಡ್ರು. ಏ ನಮ್ಮ ಐಕ್ಲು. ಊಟಕ್ಕೆ ಕರೀಲಾ. ಅವೆಲ್ಲಿ ಊಟಕ್ಕೆ ಬತ್ತಾವೆ. ಪ್ಯಾಕೇಟ್ನಾಗೆ ಕಟ್ಟಿ ಕೊಡೋವಾ. ಎಚ್ಚರ ಆದಾಗ ತಿಂತಾವೆ ಅಂದೆ. ಇದೇನ್ ಚುನಾವಣೇ ಏನ್ಲಾ ಅಂದ್ರು ಗೌಡ್ರು. ಮದುವೆಗೆ ಬಂದ ಬಡ್ಡೇ ಐಕ್ಲು ಛತ್ರದಾಗಿನ ಲೋಟಗಳನ್ನೆಲ್ಲಾ ಪೋಟಾಯಿಸ್ಕೊಂಡು ಹೋಗಿದ್ವು. ಗಬ್ಬನಾಥ ಗೌಡಪ್ಪ ಮಾತ್ರ ಒಬ್ಬನೇ ಕೂತು ಉಣ್ತಿದ್ದ. 

ಬೆಳಗ್ಗೆ ತಾಳಿ ಕಟ್ಟಬೇಕು ಛತ್ರದಾಗೆ ಎಲ್ಲಾ ಸೇರರ್ವೆ. ಸಿದ್ದೇಸ ಅಂದೆ. ಬಂದೆ ತಡಿಯಲಾ ಅಂತಾ ಸೊಂಟ ಬಗ್ಗಿಸಿಕೊಂಡು ಬಂದ. ಯಾಕ್ಲಾ, ನಿನ್ನೆ ಬಡ್ಡೀ ಮಗಂದು ಕದ್ರೆ ಎರ್ರಾಬಿರ್ರಿ ಸೋಲೆ ಪಿಚ್ಚರ್ನಂಗೆ ಓಡ್ತಲಾ. ಅದಕ್ಕೆಯಾ ಅಂದ. ಥೂ ಬಡ್ಡೆ ಐದ್ನೆ. ಎಲ್ಲಲಾ ಹೆಣ್ಣು. ಗಂಡುನ್ನ ನೋಡೋ ಬದ್ಲು ಅವ್ನ ಪಕ್ಕದಾಗೆ ಇರೋ ಪೂಜಾರಿಯಪ್ಪನ ನೋಡ್ಕಂಡು ಬಂದ್ಲು. ಬಡ್ಡೀಮಗ ಪೂಜಾರಪ್ಪ ದಕ್ಸಿಣೆ ಕಮ್ಮಿ ಅನ್ನೋ ಸಿಟ್ಟಿಗೆ ಇಬ್ರಿಗೂ ಒಂದೊಂದು ಸೌಟ್ನಾಗೆ ಗೋ ಮೂತ್ರ ಹುಯ್ದ. ಸಕ್ಕರೆ ಕೊಡ್ರಲಾ. ಅಂಗೇ ಹೋಮಕ್ಕೆ ಅಸೀ ಕಟ್ಟಗೆ ಹಾಕಿ ಮದುವೆ ಮನೇನ್ನ ಫ್ಯಾಕಟ್ರಿ ಮಾಡ್ದಂಗೆ ಮಾಡಿದ್ದ. ತಾಳಿ ಕಟ್ಟಿದ್ದು ಆತು. ಇಬ್ರೂ ಕಣ್ಣು ಸಣ್ಣ ಕೆಂಪು ಚೆಂಡಾಗಿತ್ತು. ಅದ್ರಾಗೇ ಲೇ ಕೋಮಲ್, ಸುಭರಾತ್ರಿ ಇವತ್ತೇ ಏನ್ಲಾ ಅಂದ ಸಿದ್ದೇಸ. ಪೂಜಾರಪ್ಪಂಗೆ ಇನ್ನೂ ಸಿಟ್ಟು ಓಗಿರಲಿಲ್ಲ. ಇನ್ನೊಂದು 5 ತಿಂಗಳು ಟೇಂ ಸರಿಯಿಲ್ಲಾ  ಸದ್ಯಕ್ಕೆ ಸುಭರಾತ್ರಿ ಮಾಡಂಗಿಲ್ಲಾ ಅಂದಾ . ಅಂಗಾರೆ ಹೆಣ್ಣು. ಅವರ ಮನ್ಯಾಗೆ ಅವಳು, ನಿಮ್ಮನ್ಯಾಗೆ ಇವನು. ಅಪ್ಪ ಅಂಗಾರೆ 5ತಿಂಗಳು ಬಿಟ್ಟೇ ಮದುವೆ ಆಯ್ತಿದ್ದೆ. ಯಾಕ್ ಏಳು. ಅಲ್ಲೀ ಗಂಟಾ ನಿಂಗಿ ಜೊತೆ ಚಕ್ಕಂದ ಆಡಕ್ಕೇನ್ಲಾ ಅಂತಾ ಗೌಡಪ್ಪ ಬೈಯ್ದ.

ಸ್ವಲ್ಪ ಹೊತ್ತು ಬಿಟ್ಟು ಲೇ ಕೋಮಲ್ ಇದೇ ಮಂಟಪದಾಗೆ ನಾಳೆ ಇನ್ನೊಂದು ಮದುವೆ ಮಾಡಬೋದಾ ಕೇಳ್ಲಾ. ಯಾರಿಗೆ ನಂಗಾ. ಏನ್ ದೊಡ್ಡ ಮನಸ್ಸು ಗೌಡ್ರೆ, ಏ ಥೂ ಯಾಕೇಂದ್ರೆ, ಪಾಪ ಸಿದ್ದೇಸಂಗೆ ಅವ್ವ ಇಲ್ಲಾ ನೋಡು. ಅಂಗೇ ಹುಡುಗಿ ಚಿಕ್ಕಮ್ಮಂಗೆ ಗಂಡ ಇಲ್ಲಾ ಅಂತೆ ಅದಕ್ಕೆ ಒಂದು ಬಾಳು ಕೊಡೋವಾ ಅಂತಾ ಅಂದ. ಅಯ್ಯೋ ನಿನ್ನ  ಮೆನ ಕಾಯೋಗ. ನಿಂಗೆ ಸರಿಯಾಗಿ ನಿಂತ್ಕಳಕೆ ಆಗಕ್ಕಿಲ್ಲಾ ಇನ್ನೊಂದು ಮದುವೆ ನಾ ಗೌಡ. ಮಾರನೆ ದಿನ ಮದುವೇ ಆಗೇ ಓಯ್ತು. ನೋಡ್ಲಾ ಸಿದ್ದೇಸ. ನಿಮ್ಮಪ್ಪ ನಿಂಗೆ ಮೋಸ ಮಾಡಿ ಸುಭರಾತ್ರಿ ಮಾಡ್ಕಂತಾನಂತೆ ಅಂದೆ ಅಷ್ಟೆ. ಸ್ವಲ್ಪ ಹೊತ್ತಿಗೆ ಊರ್ ಹೊರಗೆ ಒಬ್ಬರ ಹಿಂದೆ ಒಬ್ಬರು ದೊಣ್ಣೆ ತಕ್ಕೊಂಡು ಓಡ್ತಾ ಇದ್ರು. ಗುರುವೇ ಸಿದ್ದೇಸ.

Rating
No votes yet

Comments