ಹರೆಯ

ಹರೆಯ

ಬರಹ

ಹರೆಯ ಬಂತು.... ಹರೆಯ
ಅರಿವಿಗೆ ಬಾರದೆ ಗೆಳೆಯ

ಹೂ ಅರಳಿದ ಮನಸು
ಕ಼ಣ ಕ಼ಣ ಹೊಸಬಗೆ ಕನಸು
ತುಂಬಿದೆ ಬದುಕಲಿ ಸೊಗಸು
ನನಗೀಗ ಹರೆಯದ ವಯಸು

ಗಗನ ಗಣಿಸುವ, ಕಡಲ ಕಡೆಯುವ
ಅಸಾಧ್ಯ ಸಾಧಿಸುವ ತವಕ
ಕೂಡಿ ಕೂಡಾಡಿ, ಪ್ರೀತಿ ಹರಿದಾಡಿ
ಒಲ್ಮೆ ಮೈನೆರೆತ ಬಗೆ ಮೋಹಕ

ಪ್ರೀತಿ ಅರಸಿ, ಪ್ರೇಮ ಬಯಸಿ
ಕನಸು ಕಲ್ಪನೆಗಳ ಹೊಸೆವ ಪರಿ ಅನೂಹ್ಯ
ಏಕಾಂತ ಹುಡುಕುವ, ಸಂಗಾತಿ ಹಾತೊರೆವ
ಮನದ ತೊಳಲಾಟಗಳ ವೈಶಿಷ್ಟ್ಯ

ಕರೆಯ ಕೇಳುತ ಕರವ ಚಾಚಿದ
ಸುಮಿತ್ರನ ಮರೆಯಲಾದಿತೆ?
ನೋವ ನೆನೆಯದೆ ಸುಖ ಸವಿದು
ಬದುಕ ಕಲಿಸಿದ ಹರೆಯ ತೊರೆಯಲಾದಿತೆ?
ತೊರೆದು ಮರೆಯಲಾದಿತೆ?