ನಾನು ನನ್ನ ಕನಸು...

ನಾನು ನನ್ನ ಕನಸು...

ನಾನು ನನ್ನ ಕನಸು ಚೆನ್ನಾಗಿದೆ. ಕನ್ನಡ ಚಿತ್ರರಂಗದ ಸದ್ಯದ ದಿನಗಳಲ್ಲಿ ಇದೊಂದು ಹೃದಯ ಸ್ಪರ್ಶಿ ಚಿತ್ರ. ತಾಯಿ-ಮಗನ  ಚಿತ್ರಗಳು ಈ ಹಿಂದೆ ಬಂದು ಹೋಗಿವೆ. ಆದರೆ, ಇಲ್ಲಿ ತಂದೆ-ಮಗಳ ನಡುವಿನ ಪ್ರೀತಿನೇಯಲ್ಲ. ಇಲ್ಲಿ ಬರುವ ಕಥೆಯಲ್ಲಿ  ಹಲವು ಪಾತ್ರಗಳು ಬಂದು ಹೋಗುತ್ತವೆ. ಆದ್ರೂ, ಇಲ್ಲಿ ತಂದೆಯ ಪ್ರೀತಿನೇ ಬಹುಮುಖ್ಯವಾದ ಪಾತ್ರವಹಿಸುತ್ತದೆ. ಸಾಮಾನ್ಯವಾಗಿ ಮಗನಿಗೆ ತಾಯಿಯ ಕಡೆಗೆ ಒಲವು ಜಾಸ್ತಿ. ತಂದೆಗೆ ಹೆಣ್ಣುಮಗಳ ಮೇಲೆ ಅತೀವವಾದ ಪ್ರೀತಿ. ಇದನ್ನೇ ಪ್ರಮುಖ ಎಳೆಯನ್ನಾಗಿಟ್ಟುಕೊಂಡು ನಟ-ನಿರ್ಮಾಪಕ ಪ್ರಕಾಶ್ ರೈ ಈ ಚಿತ್ರವನ್ನ ಕನ್ನಡಿಗರಿಗೆ ಕೊಟ್ಟಿದ್ದಾರೆ...


ಆದ್ರೆ, ಈ ಮೊದಲು ಇದೇ ಕಥೆನೇ `ಅಭಿಯುಂ ನಾನುಂ'ಎಂಬ ಹೆಸರಿನಲ್ಲಿ  ತೆಲುಗು ಭಾಷೆಯಲ್ಲಿ ತೆರೆ ಕಂಡಿದೆ.ಪ್ರಕಾಶ್ ರೈ ಇಲ್ಲೂ ಅದೇ ತಂದೆ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.ಆದರೆ, ಕನ್ನಡದ ವಿಷಯಕ್ಕೆ ಬಂದಾಗ ಸ್ವತ: ಪ್ರಕಾಶ್ ರೈ ನಿರ್ದೇಶನ ಮಾಡಿದ್ದಾರೆ.ಸಂಭಾಷಣೆಯನ್ನೂ ತಾವೇ ಬರೆದಿದ್ದಾರೆ.


ಇಷ್ಟೊಂದು ಅಂಶದ ಚಿತ್ರದಲ್ಲಿ `ಕನಸು' ಪ್ರಕಾಶ್ ರೈ ಅವರ  ಒಬ್ಬಳೇ ಮಗಳು. ಇವಳು ಹುಟ್ಟಿದಾಗ   ಅಪ್ಪ  ಉತ್ತಪ್ಪನಿಗೆ ಎಲ್ಲಿಲ್ಲದ ಸಡಗರ...ಸಂಭ್ರಮ. ತಾಯಿಗಿಂತಲೂ ಹೆಚ್ಚಿನ ಪ್ರೀತಿ ತೋರುವ    ಅಪ್ಪ..ಮುದ್ದಿನ ಮಗಳು ಏನೇ ಕೇಳಲಿ ಇಲ್ಲವೇ ಇಲ್ಲ  ಅನ್ನುವ ತಂದೆ.
ದಿನಗಳು ಉರುಳಿದಂತೆ..ಕ್ಷಣಗಳು ಮಧುರವಾದಂತೆ ಈ ಅಪ್ಪನ ಪ್ರೀತಿ ಕಡಿಮೆ ಆಗೋದೆಯಿಲ್ಲ. ಆದ್ರೂ, ಅತೀಯಾದ್ರೆ ಎಲ್ಲವೂ ಕಷ್ಟ  ಅನ್ನೋ ಮಾತಿದೆಯಲ್ಲ. ಇದು  ಇಲ್ಲೂ ನಿಜವಾಗುತ್ತದೆ. ಪ್ರೀತಿಯ ಮಗಳು ಬೆಳದಂತೆಲ್ಲ ಒಂದೊಂದೆ ಶಾಕ್ ಕೊಡ್ತಾಳೆ...


ಇಂತಹ   ಅನಿರೀಕ್ಷಿತ ಬದಲಾವಣೆಗಳು ಮುಂದೆ ಅಪ್ಪನಿಗೆ ಕಷ್ಟವಾಗ್ತವೆ. ಮಗಳು ದೂರವಾದರೆ, ಎಷ್ಟು ಕಷ್ಟ.ಪ್ರೀತಿಯ  ಅಪ್ಪನಿಗೆ ಇನ್ನಿಲ್ಲದ  ಆಘಾತಗಳು. ಇವುಗಳನ್ನ ಪ್ರಕಾಶ್ ರೈ ತುಂಬಾನೇ ಚೆನ್ನಾಗಿ ತೋರಿದ್ದಾರೆ.ನಟ ಅಚ್ಚುತ್ ರಾವ್ ನಿಭಾಯಿಸಿದ  ಬ್ರಿಜೇಷ್ ಪಟೇಲ್ ಕ್ಯಾರೆಕ್ಟರ್ ಇಲ್ಲಿ ಆಗಾಗ ನಗೆಯ ಹೊನಲು ಹರಿಸುತ್ತದೆ.ಸಿಹಿಕಹಿ ಚಂದ್ರು ಅವರ ಪಾತ್ರವೂ ಇದೇ ಕೆಲಸವನ್ನ ಮಾಡ್ತದೆ. ಇದಕ್ಕೆ ಸಮ್ ಎಕ್ಸಾಂಪಲ್  ಕೆಳಗಿವೆ ನೋಡಿ...


ನಟ ರಮೇಶ್- ಪ್ರಕಾಶ್ ನಡುವಿನ ಸಂಭಾಷಣೆ ವೇಳೆ..


ಸಿಹಿಕಹಿ ಚಂದ್ರು: ಉತ್ತಪ್ಪ ನಿಮ್ಮ ಸ್ನೇಹಿತರಾ..?


ಪ್ರಕಾಶ್ ರೈ: ಇಲ್ಲಾ..ನನ್ನ ಕೊಲೆ ಮಾಡೋದಕ್ಕೆ ಬಂದಿದ್ದಾರೆ. ರೇಟ್ ಮಾತಾಡ್ತಾಯಿದ್ದಿನಿ...


ಇಂತಹ ಹಲವು ಸನ್ನಿವೇಷಗಳಿವೆ. ಚಿತ್ರದಲ್ಲಿಯ  ಈ ದೃಶ್ಯಗಳು ತುಂಬಾನೇ ಖುಷಿಕೊಡ್ತವೆ. ಅಪ್ಪ-ಮಗಳ ಮಮತೆಯ ನಡುವೇ ಒಂಚೂರು ಉಪ್ಪಿನ ಕಾಯಿ ಥರ ಟೇಸ್ಟಿ..ಟೇಸ್ಟಿ. ಚಿತ್ರದಲ್ಲಿಯ ಹಾಡುಗಳು ಕೂಡ ಇದೇ ಕೆಲಸವನ್ನ ಮಾಡ್ತವೆ. ಹಂಸಲೇಖ  ಅವರ ರುಚಿಕಟ್ಟಾದ ಸಾಹಿತ್ಯ, ತಣ್ಣನೆಯ ಮಾಧುರ್ಯತೆಯ  ಅನುಭವ ನೀಡುವ  ಸಂಗೀತ ಎದೆ ತಟ್ಟುತ್ತವೆ. ಅಪ್ಪಂದಿರಲ್ಲಿ ಅಡಗಿದ ಪ್ರೀತಿಯನ್ನ ಹೊರಗೆಡುವುಂತೆ ಮಾಡ್ತವೆ..


ಆದರೆ, ಇಷ್ಟೆಲ್ಲ ಇರುವ  ಚಿತ್ರಕ್ಕೆ ಮೊದಲ ದಿನ ಉತ್ತಮ ರೆಸ್ಪಾನ್ಸ್ ಬಂತು. ಈಗಲೂ  ಅದೇ ಅಭಿಪ್ರಾಯವಿದೆ. ಆದ್ರೂ, ಥೀಯಟರ್ ಗೆ ಬರುವ  ಜನ  ಕಡಿಮೇನೆ ಅನಿಸುತ್ತದೆ. ಒಂದು ಸಂಡೆ ನಾನು ನನ್ನ ಹುಡುಗಿ ಚಿತ್ರ ನೋಡಲು ಹೋಗಿದ್ದೇವು. ಬೆಂಗಳೂರಿನ `ಭೂಮಿಕಾ' ಥೀಯಟರ್ ನಲ್ಲಿ  ಈ ಚಿತ್ರ ನೋಡಿ ತುಂಬಾನೇ ಖುಷಿಪಟ್ಟೆವು.ಎಲ್ಲ   ಅಪ್ಪಂದಿರುಗಳಿಗೆ ಹೇಳಿ ಮಾಡಿಸಿದಂತಹ ಚಿತ್ರವಿದು.


- ರೇವನ್ ಪಿ.ಜೇವೂರ್

Rating
No votes yet

Comments