ಸಂಕ್ಷಿಪ್ತ ಗುರುಚರಿತ್ರೆ...
ಸಂಕ್ಷಿಪ್ತ ಗುರುಚರಿತ್ರೆ. ಇದು ಚಿತ್ರದುರ್ಗ ಮತ್ತು ಸುತ್ತಮುತ್ತ ಪ್ರಚಲಿತದಲ್ಲಿರುವ ಪ್ರಾರ್ಥನಾ ಪ್ರಾಕಾರ. ನೀವು ಭಕ್ತಿಯಿಂದ ಭಜಿಸಿದರೆ ನಿಮಗೆ ಸನ್ಮಂಗಳಗಳು ಉಂಟಾಗುವುದರಲ್ಲಿ ಯಾವ ಸಂದೇಹವೂ ಇಲ್ಲ. ಹರಿ ಓಂ. ಪ್ರತಿದಿನವೂ ಪ್ರಾತಃಕಾಲ ಮತ್ತು ಸಾಯಂಕಾಲ ಇದನ್ನುಭಕ್ತಿಯಿಂದ ಪಠಿಸುವುದರಿಂದ ಎಲ್ಲಾ ಇಷ್ಠಾರ್ಥಗಳೂ ನೆರವೇರುತ್ತವೆ.
ಆರು ವರ್ಣಿಪರಯ್ಯ ಗುರು ನಿನ್ನ ಮಹಿಮೆಯಾ ಪಾರವಿಲ್ಲದ ನಿನ್ನ ಗುಣ ಚರಿತವನ್ನಾ
ವರ ವೇದಗಳು ತಾವು ನಿರುತ ವರ್ಣಿಸಿ ದಣಿದು ಕರ ಮುಗಿದು ನಿಂತವೈ ನೀರಜಾಕ್ಷ
ಸರಸಿ ಜಾಸನನಾಗಿ ವಿರಚಿಸಿದೆ ಜಗವನ್ನು ಹರಿಯ ರೂಪದಿ ಬಂದು ನಿರುತದೀ ಪೊರೆದೇ
ಹರನ ರೂಪವ ತಾಳ್ದು ಹರಣ ಕಾರ್ಯವ ಗೈದೆ ಮೂರು ರೂಪದಿ ಬಂದು ಗುರುದತ್ತನಾದೆ
ಎರಡರಲಿ ಸಮನಾಗಿ ಎರಡನೆಯ ರೂಪಾಗಿ ವರಯೋಗಿ ಶ್ರೀಪಾದ ಗುರುವರ್ಯನಾಗಿ
ಶರಣು ರಜಕನು ಕೇಳ್ದ ದೊರೆತನವ ಕೊಟ್ಟಿನ್ನು ವರ ವಿಪ್ರನನು ಕಾಯ್ದೆ ಕುರುಪುರದ ದೇವಾ
ವರವಾಡಿ ಕ್ಷೆತ್ರದಲಿ ತರುವದೌದುಂಬರದಿ ನಿರುತದಲಿ ವಾಸಿಸುವ ನರಸಿಂಹ ಯತಿಯೇ
ಅರಿಯದಾ ತರುಣನಿಗೆ ವರ ವಿದ್ಯೆಗಳನಿತ್ತೆ ಸಿರಿಯ ಭೂಸುರಗಿತ್ತು ನೆರೆ ಕರುಣಿಯಾದೆ
ತರುಣಿಯಾ ಮೊರೆಕೇಳಿ ತರುಣಗಸುವನು ಕೊಟ್ಟೆ ವರಕ್ಷೇತ್ರ ಗಾಣಿಗದಿ ಸುರಜ ಸಂಗಮದೊಳಿದ್ದೆ
ನೆರೆ ಬಡವ ವಿಪ್ರನಲಿ ಬರಡು ಮಹಷಿಯ ಹಿಂಡಿ ಕ್ಷೀರ ಪಾನವ ಮಾಡಿ ಸಿರಿಯ ಸ್ಥಿರಮಾಡಿದೆ
ಮುನಿ ತ್ರಿವಿಕ್ರಮ ಯತಿಯ ಅನುಮಾನ ಹರಿಸಲು ಘನ ವಿಶ್ವರೂಪದಲಿ ಮನದ ಶಂಕೆಯ ಹರಿಸಿ
ಉನ್ನತದ ವೇದಗಳ ಘನ ಪತಿತನಿಂ ನುಡಿಸಿ ಮನಗರ್ವದಾ ದ್ವಿಜರ ಘನಸೊಕ್ಕ ಮುರಿದೇ
ನಾರಿಯರ ನಮಸ್ಕೃತಿಗೆ ವರದಾನವನು ಮಾಡಿ ಪುರುಷನಸುವನು ಕಾಯ್ದು ತರುಣಿ ಧರ್ಮವನರುಹಿ
ಪರಗೃಹದ ಭೋಜನವ ನಿರುತದಲಿ ವರ್ಜಿಸಿದ ವರ ಪಿಪ್ರನನುನಯದಿಪರಮ ಧರ್ಮವ ಪೇಳ್ದೇ
ಕಡು ಬಡವ ಭಾಸ್ಕರನ ಪಡಿಯರ್ಧ ದಿನಿಸಿನಿಂ ಎಡೆ ನಾಲ್ಕು ಸಾಸಿರದಿ ಬಿಡದೆ ಸರ್ವರ ಉಣಿಸಿ
ಬಿಡದೆ ಸೇವೆಯೊಳಿದ್ದ ಕಡು ವೃಧ್ಧ ಬಂಜೆಗೆ ನೀಡಿ ಶಿಶುಗಳ ನೆರಡ ಮಾಡಿದಾಶ್ಚರ್ಯವ
ಗುರು ಭಕ್ತ ಕಂತುಕನ ಅರಗಳಿಗೆಯಲಿ ವೊಯ್ದು ವರ ಮಲ್ಲಿಕಾರ್ಜುನದಿ ಹರಲಿಂಗದಿ ತೋರಿದೇ
ಸತ್ತ ಕೊರಡನು ಚಿಗಿಸಿ ಅತಿಕುಷ್ಠ ರೋಗಿಯನು ಅತುಳ ತೋಷದಿ ಕಾಯ್ದು ಹಿತದ ಭಕ್ತನ ಮಾಡಿದೇ
ಅತಿ ಭಕ್ತ ಸಾಯಂದೇವಗೆ ಸತತ ಸೇವೆಯ ಧರ್ಮ ಪ್ರೀತಿಯಿಂದಲಿ ಪೇಳಿ ಕ್ಷೇತ್ರ ಕಾಶಿಯ ತೋರ್ದೆ
ಗುರುವರನ ನರನೆಂದು ದುರತ ಕಷ್ಟದ ನಂದಿಯ ಕರುಣದಿಂದಲಿ ಕಾಯ್ದು ವರಕವಿತೆ ನುಡಿಸಿದೇ
ಶ್ರೇಷ್ಟ ಕವಿ ನರಹರಿಯ ಭ್ರಷ್ಟ ಸಂಶಯವಳಿಸಿ ಅಷ್ಟ ರೂಪದಿ ನೀನು ಅಷ್ಟ ಗ್ರಾಮದೊಳಿದ್ದು ಇಷ್ಟಾರ್ಥಗಳ ಸಲಿಸಿ ಶ್ರೇಷ್ಟ ಮೂರುತಿಯಾದೇ
ಗುರುವಾಕ್ಯವನೆ ನಂಬಿ ಧರೆಯ ಬೆಳೆಸನೆ ಕೊಯ್ದು ಧೀರ ನೊಕ್ಕಲಿಗನಿಗೆ ಬರಸಿದಾಧಿಕ ಬೆಳೆಯ
ಊರ ಹತ್ತಿರವಿರುವ ವರ ತೀರ್ಥಗಳ ಮಹಿಮೆ ಸರಸದಲಿ ನೀಪೇಳಿ ಪೊರೆದೆ ರತ್ನಾಯಿಯಾ
ದೊರೆತನದ ಯವನನಿಗೆ ವರದಾನ ಸಲಿಸಲು ಕರುಣಿ ಶ್ರೀಪಾದನೇ ನರಸಿಂಹನಾಗಿ ಕಂಡೆ
ಶರಣರನು ನೀ ಕಾಯ್ದು ವರಗಿರಿಗೆ ತೆರಳಿದಾ ಪರಮ ಮಂಗಳ ಮೂರ್ತಿ ಗುರುದತ್ತ ನಿನ್ನ ಕೀರ್ತಿ
ಹನ್ನೊಂದನೇಂದ್ರಿಯದಿ ಹನ್ನೊಂದು ನುಡಿಗಳನು ದಿನ ನಿತ್ಯ ಪಠಿಸಿದರೆ ಮನ ಕಾಮನೆಯ ಪೂರ್ತಿ
ಅನುನಯದಿ ಸಲಿಸುವನು ಅನುಸೂಯ ತನುಜನು ಮನುಜರೇ ಗುರು ನುಡಿಸಿದೀ ಗುರು ಚರಿತ್ರೆಯ ಸಾರ.
ಗುರುಸ್ತುತಿ ಸಂಪೂರ್ಣಂ: