ಸ್ವಾಮೀಜಿ ಯೋಗಾಸನ - ಹಾಸ್ಯ ಪ್ರಸಂಗ

ಸ್ವಾಮೀಜಿ ಯೋಗಾಸನ - ಹಾಸ್ಯ ಪ್ರಸಂಗ

ಲೇ ಕೇಳ್ರಲಾ ಇವತ್ತು ನಮ್ಮ ಊರಿಗೆ ಸ್ವಾಮೀಜಿ ಬತ್ತಾ ಇದಾರೆ. ಶ್ರೀ ಶ್ರೀ ಶ್ರೀ ರಾಮದೇವ ಚಂಗೂಲಿ ಸ್ವಾಮಿಗಳು.  ಇವರು ರವಷ್ಟು ಪೇಮಸ್ ಕನ್ರಲಾ. ಇವರಮ್ಯಾಕೆ ದೇವರು ಬತ್ತದಂತೆ, ಹಂಗೆಯಾ ನಮಗೆ ಯೋಗಾಸನ,ಯಾಯಾಮ ಎಲ್ಲಾ ಏಲ್ಕೊಡ್ತಾರಂತೆ. ನೋಡ್ರಲಾ ಅವರು ಬರದೊರಳಗೆ ಊರನ್ನು ಸಿಂಗಾರ ಮಾಡ್ ಬೇಕ್ರಲಾ ಅಂದ ಗೌಡಪ್ಪ. ಆತು ಅಂದು. ಊರ್ ಮುಂದೆ ಮಾವಿನ ಸೊಪ್ಪಿನ ಹಾರ ಕಟ್ಟೆಕ್ಕೆ ಗೌಡನೇ ಕಂಬ ಮ್ಯಾಗೆ ಹತ್ತಿದ್ದ, ಗೌಡ್ರೆ ಕಳಗೆ ಇಳ್ಳೀರಿ. ಯಾಕಲಾ ನಮಗೆ ಸ್ವಾಮೀಜಿ ದರ್ಸನ ಮಾತ್ರ ಸಾಕು. ಹೂವಿನ ಹಾರ ಇಲ್ಲಾ ಅಂತಾ ಅಂಗೆಯೇ ತಂಬುಳಿ ಸೊಪ್ಪಿನ ಹಾರನೇ ಹಾಕಿದ್ವಿ. ಸ್ವಾಮೀಜಿ ಬಂದ್ ಮ್ಯಾಕೆ ಯಾರಾದರೂ ತೊಗೊಂಡು ಹೋಗಿ ಸಾಂಬಾರ್ ಮಾಡ್ಕಳ್ಳಿ ಅಂತಾ. ಎಲ್ಲಾ ಹಾಕಿದ್ದಾತು. ಸಂಜೆ ಸ್ವಾಮೀಜಿ ಕಾರ್ ಬಂದೇ ಬಿಟ್ರು. ಕಾರ್ ಬಂದ್ ಬ್ರೇಕ್ ಆಕ್ತದ್ದಾಗೆನೇ ಎಲ್ಲರೂ "ಜೈ,ಜೈ" ಅಂದ್ರೆ, ನಮ್ಮ ಗೌಡಪ್ಪ ಮಾತ್ರ ಅಳ್ತಿದ್ದ. ಆನಂದ ಬಾಸ್ಪನಾ ಗೌಡ್ರೆ, ಲೇ ಕಾರ್ ಹಿಂದಕ್ಕೆ ತೆಗೆಯಕ್ಕೆ ಏಳಲಾ. ಟೈರ್ ನನ್ನ್ ಕಾಲು ಮೇಲೈತೆ. ಹಿಂದಕ್ಕೆ ತೆಗಿತಿದ್ದಾಗೆನೇ ಗೌಡಪ್ಪ. ಚಡ್ಡಿ ಮ್ಯಾಕೆ ನಿಂತಿದ್ದ. ಕಾರಿನ ಜೊತೆ ಪಂಚೇನೂ ಓಗಿತ್ತು.

ಸ್ವಾಮೀಜಿ ಬಟ್ಟೆ ತೊಳಿದೇ ಅದೇ ಏಟ್ ದಿನಾ ಆಗಿತ್ತೋ ಕಾವಿ ಬಟ್ಟೆ ಕಾಫಿ ಕಲರ್ಗೆ ತಿರುಗಿತ್ತು. ಸಿಸ್ಯರು ಮಾತ್ರ ಯಾರ್ ಏನೇ ಕೊಟ್ಟು ಬ್ಯಾಗಿಗೆ ತುಂಬದೆಯಾ. ಕೊನೆ ಸಿಸ್ಯ ಅಂತೂ ಹಮಾಲಿ ತರಾ ಆಗಿಹೋಗಿದ್ದ. ಸಿಪ್ಪೇ ಸುಲಿದೇ ಇರೋ ಕಾಯಿ ಚೀಲದಾಗೆ ಒಂದು ನೂರಿತ್ತು. ಏ ಯಾರಿಗಾದ್ರೂ ಕೊಡ್ ಬಾರದಾ. ಆಹ್, ಊರಿಗೆ ಹೋಗಿ ಸಂತೇಲಿ ಮಾರ್ತೀವಿ. ಏ ಥೂ. ನಮ್ಮೂರು ಹೆಂಗಸರು ಸ್ವಾಮಿ ಮುಖಕ್ಕೆ ಆರತಿ ಮಾಡಿದ್ದೇ ಮಾಡಿದ್ದು. ಗಾಳಿ ಬಂದು ದೀಪ ಆರಿ ಓಗಿತ್ತು. ಬರೀ ತಟ್ಟೆಗೆಯಾ ಆರತಿ.  ಸ್ವಾಮೀಜಿನೂ ಬೆನ್ನು ಮುಟ್ಟಿ ಆಸೀರ್ವಾದ ಮಾಡಿದ್ದೇ ಮಾಡಿದ್ದು. ಅಲ್ಲಲಾ ಬಸ್ನಾಗೆ ನಾವೇನಾದ್ರೂ ಮೈ ತಾಕ್ಸಿದ್ರೆ ಎಣ್ಣು ಐಕ್ಳು ಎಂಗೈತೆ ಮೈಗೆ ಅಂತಾವೆ. ಇಲ್ಲಿ ನೋಡ್ಲಾ ಸ್ವಾಮೀಜಿ ಆಟವಾ ಅಂದ ಸುಬ್ಬ. ಸುಮ್ಕಿರಲ್ಲಾ  ಅದು ಆಸೀರ್ವಾದ ಕನ್ಲಾ.  ಊರ್ನಾಗೆ ಮೆರವಣಿಗೆ ಮಾಡವಾ ಅಂದ್ರು.

ಗೌಡಪ್ಪ ನಮ್ಮನೇಗೆ ಮೊದಲನೆ ಪಾದ ಪೂಜೆ ಅಂದ. ಸರಿ ಬುಡ್ಲಾ. ಮೆರವಣಿಗೆ ಹೊಂಡ್ತು. ಹಳ್ಳಿ ಎಂದ್ ಮ್ಯಾಕೆ ಕೇಳ್ಬೇಕಾ. ದಾರ್ಯಾಗೆ ಎಮ್ಮೆ,ದನ ಸಗಣಿ ಹಾಕಿರ್ತತೆ. ಹಾಗೇ ಸಣ್ಣ ಐಕ್ಲು ಏನೇನೋ ಮಾಡಿರ್ತಾವೆ. ಅಂತೂ ಕತ್ಲಾಗೆ ಮೆರವಣಿಗೆಯೆಲ್ಲಾ ಮುಗಿದು. ಸ್ವಾಮೀಜಿ ಗೌಡಪ್ಪನ ಮನೆ ಪಾದ ಪೂಜೆಗೆ ಹೋದ್ರು. ಅವರ ಮರದ ಚಪ್ಪಲಿ ಇಟ್ಟು ಗೌಡಪ್ಪ ಪೂಜೆ ಮಾಡಕ್ಕೆ ಸುರುಮಾಡ್ದ. ಅಲ್ಲ ಕನ್ಲಾ ಇಂತಹ ಚಪ್ಪಲಿ ನಾವು ಮಾಡ್ಸಕಂಡ್ ಬಿಟ್ರೆ, ಹೊಲಿಯೋ ಕ್ಯಾಮೆನೇ ಇರಕ್ಕಿಲ್ಲಾ ಅಂದಾ ಸುಬ್ಬ. ಅಂಗೇ ಮಾಡು ಪಕ್ಕದೋರು ಮ್ಯಾಕೆ ಕಾಲ್ ಇಟ್ರೆ ಗುನ್ನ ಬೀಳ್ತದೆ. ಅವಾಗ ಗೊತ್ತಾಯ್ತದೆ ನಿಂಗೆ. ಬುಡಪ್ಪಾ ಬೇಡ. ಗೌಡಪ್ಪ ಪೂಜೆ ಮಾಡಿದ್ ಮ್ಯಾಕೆ ತೀರ್ಥ ತೊಗಳ್ರಲಾ ಅಂದ್ರು . ಮೊದಲು ಗೌಡಪ್ಪಂಗೆ. ಒಂದು ಸೌಟ್ ಹುಯ್ದಿರು. ಪುಣ್ಯ ಜಾಸ್ತಿ ಬತ್ತದೆ ಅಂತಾ. ಗೌಡಪ್ಪ ಕುಡಿದು ಹಳ್ಳೆಣ್ಣೆ ಮುಖ ಮಾಡ್ದ. ಯಾಕ್ ಗೌಡ್ರೆ, ಕೋಮಲ್ ಒಂಥರಾ ಐತೆ, ರುಚಿ, ವಾಸ್ನೆ, ಹೊಟ್ಟೆ ತೊಳಸ್ತದಂಗೆ ಆಗ್ತೈತೆ ಅಂದ. ಏ ಸ್ವಾಮಿ ತೀರ್ಥ ಅಂಗೆಲ್ಲಾ ಅನ್ನಬಾರ್ದು, ಹುಯ್ಯಕಾ. ಅದನ್ನು ಎಲ್ಲರೂ ಕುಡಿದಿದ್ದೇ ಕುಡಿದಿದ್ದು. ಆಸೀರ್ವಚನಕ್ಕೆ ಕೂತೋರು ಹೊಟ್ಟೆ ಗುಳು,ಗುಳು ಅಂತಿತ್ತು. ಒಬ್ಬರಾದ ಮೇಲೆ ಒಬ್ಬರು ಎದ್ದು ಓಗದೇಯಾ. ಕಡೇಗೆ ಸ್ವಾಮಿ ಮತ್ತು ಸಿಸ್ಯಂದರು ಮಾತ್ರ. ಇದ್ಯಾಕ್ ಹಿಂಗೆ. ಅಂತದ್ದೇನ್ ಐತೆ ತೀರ್ಥದಾಗೆ. ಅಷ್ಟೊತ್ತಿಗೆ ಪಕ್ಕದ್ಮನೆ ಸಾಕಮ್ಮ ಬಂದು, ಲೇ ಕೋಮಲಾ ಕುಡಿಬ್ಯಾಡ್ಲಾ. ಮೆರವಣಿಗೆ ಮಾಡಬೇಕಾದ್ರೆ, ಸ್ವಾಮೀಜಿ ನನ್ನ ಮೊಮ್ಮಗ ಪುಟ್ಟನ ಪ್ರಸಾದ ತುಳಿದ್ಯಾರೆ ಕನ್ಲಾ. ಆಹ್. ಸ್ವಾಮೀಜಿ ನನ್ನ ತೀರ್ಥವನ್ನು ಕುಡಿದಿದ್ದೀರಿ. ನಿಮ್ಮ ಜನ್ಮ ಪಾವನ ಆತು ಅಂದ್ರು.  ಆಮ್ಯಾಕೆ  ಗೌಡಪ್ಪ ಉಪ್ಪು ನೀರಾಕ್ಕೊಂಡು ವಾಂತಿ ಮಾಡಿದ್ದೇ ಮಾಡಿದ್ದು.

ನೋಡ್ರಲಾ ಸ್ವಾಮೀಜಿಗಳು ನಾಳೆಯಿಂದ ಯೋಗಾಸನ ಏಲ್ಕೊಡ್ತಾರೆ ಬೆಳಗ್ಗೆ 6ಗಂಟೆಗೆ ಎಲ್ಲರೂ ಸಿದ್ದೇಸನ ಗುಡಿ ತಾವ ಬರಬೇಕು. ಬೆಳಗ್ಗೆನೇ ಎಲ್ಲಾವೂ ಮುಖನೂ ತೊಳಿದೆನೇ ಸಿದ್ದೇಸನ ಗುಡಿ ತಾವ ಬಂದ್ವು. ಸ್ವಾಮೀಜಿ ಕಾವಿ ಬಟ್ಟೆ ಬಿಟ್ಟು. ಚಡ್ಡಿ ಬನೀನು ಆಕ್ಕೊಂಡು ಬಂದಿದ್ರು. ಯಾಕಲಾ ಹಿಂಗೆ. ಲೇ ಸಿರಸಾಸನ ಮಾಡ್ಬೇಕಾದ್ರೆ ಎಲ್ಲರಿಗೂ ದರ್ಸನ ಆಯ್ತದೇ ಅಂತ ಹಿಂಗ್ ಬಂದಾವ್ರೆ. ಮೊದಲಿಗೆ ಸೂರ್ಯ ನಮಸ್ಕಾರ ಸುರುಹಚ್ಕೊಂಡ್ರು. ದಪ್ಪಗಿದ್ದವೆಲ್ಲಾ ಹಂಗೆ ಮಕ್ಕೊಂಡ್ ತಿದ್ವು. ನಮ್ಮ ಗಬ್ಬುನಾಥ ಗೌಡಪ್ಪ ಎಲ್ಲಿ ಅಂದ್ರೆ ಎಣ್ಣು ಐಕ್ಳು ಇದ್ದ ಕಡೆ ಇದ್ದ. ಗೌಡಪ್ಪಾ, ಬಂದೆ ತಡ್ಯಲಾ. ಈಗ ಉಟ್ ಬೈಸ್ ಎಂದು ನೂರು ಹೊಡಿಸಿದರು. ಈಗ ಪ್ರಾನಾಯಾಮ, ಈಗ ಕೂರ್ಮಾಸನ. ಸಿರಸಾಸನ. ಬ್ಯಾಲೆನ್ಸ್ ಸಿಗದೇ ಯಾರ್ಯಾರೋ ಮೇಲೆ ಬಿದ್ದಿದ್ದೇಯಾ. ಕೆಲವರು ಕಟ್ಟೆಯಿಂದ ಕೆಳಗೆ ಬಿದ್ದು ಮೂಗು ಬಾಯ್ನಾಗೆ ರಕ್ತ. ಈಗ ವೇಗವಾಗಿ ತಿರುಗುವುದು. ಎಲ್ಲರೂ ತೇರು ತಿರುಗಿದ್ದಂಗೆ ತಿರುಗಿದ್ದೇಯಾ. ಸ್ವಲ್ಪ ಹೊತ್ತು ಆದ್ ಮ್ಯಾಕೆ. ಸಿದ್ದೇಸನ ಗುಡಿ ಮೂಲ್ಯಾಗೆ ವಾಂತಿ ಮಾಡಿದ್ದೇ ಮಾಡಿದ್ದು. ರಾತ್ರಿ ಅದೇನ್ ಹಳಸಿದ್ದು ಪಳಸಿದ್ದು ತಿಂದಿದ್ವೋ ಏನೋ. ಕಡೆಯದಾಗಿ ಎಂದು ಎಲ್ಲರದ್ದೂ ಹೊಟ್ಟೆ ತಿರಗ್ಸೋ ಆಸನ. ಹಿಂಗೆ ವಿವಿಧ ಆಸನ ಮುಗಿಯೋ ಅಟ್ಟೊತ್ತಿಗೆ. ಹತ್ತು ಗಂಟೆ ಆಗಿತ್ತು. ಮಿಕ್ಕಿದ್ದು ನಾಳ್ಯಾಕೆ ಅಂದ್ರು. ಮಧ್ಯಾಹ್ನ ನಮ್ಮ ಕಟ್ಟೆ ಪಂಚಾಯಿತಿ, ರಸ್ತೆ ಎಲ್ಲಾ ಖಾಲಿ ಐತೆ. ಏನಪ್ಪಾ ಇದು ಅಂತಾ ನಿಂಗವ್ವನ ಮನೇಗೆ ಓದ್ರೆ.ಮಗಾ ಬೆಳಗ್ಗೆಯಿಂದ ಹತ್ತು ಬಾರಿ ಕೆರೆತಾವ ಹೋಗಿ ಬಂದು ಹೊಟ್ಟೇಲಿ ಇರೋದೆಲ್ಲಾ ಖಾಲಿ ಆಗೈತೆ. ಈಗ ಚೊಂಬು ಹಿಡಿಯೋಕ್ಕೂ ಸಕ್ತಿ ಇಲ್ಲ. ಏ ಏನೋ ಭಟ್ಟಿ ಜಾರಿರಬೇಕು ಅಂದೆ. ಭಟ್ಟಿನೂ ಇಲ್ಲ ಏನೂ ಇಲ್ಲ. ಸ್ವಾಮೀಜಿ ಹೊಟ್ಟೆ ತಿರಗ್ಸೋ ಆಸನದ ಎಫೆಕ್ಟ್ ಅಂದ್ಲು ಸೊಸೆ.

ಚಾ ಅಂಗಡಿ ಸುಬ್ಬ, ಸ್ಲೋ ಮೋಸನಾಗೆ ಚಾ ಆಕ್ತಿದ್ದ. ಯಾಕಲಾ, ಕೈ ಮ್ಯಾಕೆ ಎತ್ತಿದ್ರೆ ಅಂಗೇ ಹಿಡ್ಕೊಂತತಲಾ ಅಂದ. ಕೆರೆತಾವ ಹೋದ ಐಕ್ಲು ಒಂದು ಗಂಟೆ ಆದರೂ ವಾಪಸ್ಸು ಬತ್ತಾ ಇರ್ಲಿಲ್ಲ. ಯಾಕ್ರಲಾ. ಕುಂತರೆ ಏಳಕ್ಕೇ ಆಯ್ತ ಇಲ್ಲಾ ಅನ್ನೋರು. ಎಲ್ಲಾ ಯೋಗಾಸನದ ಎಫೆಕ್ಟ್ ಕನ್ಲಾ. ಎಲ್ಲರೂ ಮರನಾ ಹುಡ್ಕೋರು, ಹಿಡ್ಕೊಂಡು ಏಳಕ್ಕೆ ಅನುಕೂಲ ಆಯ್ತದೆ ಅಂತಾ. ಚೊಂಬನ್ನ ತೊಗಂಡು ಹೋಗದೇ ಒಂದು ದೊಡ್ಡ ಇಸ್ಯ ಆಗಿತ್ತು.  ಗೌಡಪ್ಪನ ಮನೆಗೆ ಹೋದೆ. ಗೌಡಪ್ಪ ಕಿಸ್ಕಂಡ್ ಬಿಟ್ಟಿದ್ದ. ಯಾಕ್ರೀ ಗೌಡ್ರೆ. ಲೇ ಅದೇನ್ ಯೋಗಾಸನಲಾ. ಕೈ ಕಾಲು ಎಲ್ಲಾ ಸಟ್ಕಂ ಬಿಟ್ಟೈತೆ ಅಂದ್ರು, ಲೇ ಬಚ್ಚಲು ಮನೆಗೆ ಹೋಗಬೇಕು ಬಾರೇ ಅಂತಾ ಹೆಂಡರನ್ನ ಕರೆದ. ಆ ಯಮ್ಮ ಒಳಗಿಂದ ರೋಬೋಟ್ ಬಂದಂಗೆ ಬಂದ್ಲು. ಗೌಡ್ರೆ ಇದಕ್ಕೆ ಒಂದ್ 90 ಆಕಿದ್ರೆ ಎಲ್ಲಾ ಸರಿ ಆಗ್ತೈತೆ. ಅದು ಕೆಟ್ಟುದಲ್ವಾ. ಏ ಡಾಕ್ಟ್ರೇ ಹೇಳವ್ರೆ. ಯಾವ ಡಾಕಟರಲಾ. ಅದೇ ನಮ್ಮ ಡಾ.ವಿಜಯಮಲ್ಯ. 

ರಾಮ ಮಾತ್ರ ಬಹಳ ಗಟ್ಟಿ ಇರೋರ್ ತರಾ ಮನೆ ಮುಂದೆ ಚೇರ್ ಆಕ್ಕೊಂಡು ಪೇಪರ್ ಓದ್ತಾ ಇದ್ದ. ನೀನೇ ಪರವಾಗಿಲ್ಲ ಬಿಡ್ಲಾ ಗಟ್ಟಿ ಇದೇಯಾ ಅಂದೆ. ಅದಕ್ಕೆ ಅವನ ಹೆಂಡ್ರು. ಏನ್ ಗಟ್ಟಿನೋ ಏನೋ, ಬೆಳಗ್ಗೆ ಬಂದಾಗಿಂದ ಅಲ್ಲೇ ಕೂತವ್ರೆ. ಚೇರ್ ಕೆಳಗೆ ದೊಡ್ಡ ತೂತ ಮಾಡಿವ್ನಿ ಅಂದ್ಲು. ಅದಕ್ಕೆ ಕೆಟ್ಟ ವಾಸ್ನೆ ಬತ್ತಾ ಇದೆ. ಏನ್ಲಾ ರಾಮ. ಹೂಂ ಕನ್ಲಾ. ಯಾರಿಗೇ ಬೈದ್ರು ಜಗಳಕ್ಕೆ ಮಾತ್ರ ಬತ್ತಾನೇ ಇರ್ಲಿಲ್ಲ. ಹಂಗೇ ಕುಂತಲ್ಲೇ ಹಲ್ಲು ಕಡಿಯೋರು. ಮಾರನೆ ದಿನ ಯೋಗಾಸನ ಸಿಬಿರ ಖಾಲಿ ಇತ್ತು. ಸ್ವಾಮೀಜಿ ಇನ್ನು ಹತ್ತು ದಿನ ಬಿಟ್ಟು ಮತ್ತೆ ಬತ್ತಾರಂತೆ ಮೊದಲನೆ ಪಾದ ಪೂಜೆ ಗೌಡಪ್ಪನ ಮನೆಯಲ್ಲಿ ಅಂತಿದ್ದಾಗೆನೇ ಗೌಡಪ್ಪ ಒಂದು ಬಕ್ಕಿಟ್ಟು ವಾಂತಿ ಮಾಡಿದ್ದ. ಅವ್ನಗೂ ಸತ್ಯ ತಿಳಿದಿತ್ತು. ಯೋಗಾಸ ಸಿಬಿರ ಅಂತೆ ಅಂದೆ. ಅಯ್ಯಯ್ಯೋ ಗುರುವೇ ಸಿದ್ದೇಸ ನಾವ್ಯಾರೂ ಊರ್ನಾಕೆ ಇರಕ್ಕಿಲ್ಲ ಅಂತಾ ಹೇಳ್ಬಿಡ್ಲಾ ಸ್ವಾಮೀಜಿಗೆ.

Rating
No votes yet

Comments