ಸುಡುಗಾಡು

ಸುಡುಗಾಡು

 


ಈಗೀಗ ಬಿಸಿಲಿಗೆ ನಾನು  ಹೆದರುತ್ತಿದ್ದೇನೆ.


ಬಳಲಿದ೦ತಾಗುತ್ತಿದೆ, ನೆಲದ ಮೇಲಿನ ಬಿಸಿಗೆ!,


ರಸ್ತೆಯ ಡಾ೦ಬರಿಗೆ, ಮೈಮೇಲೆ ಎದ್ದಿರುವ ಬೊಕ್ಕೆಗಳಿಗೆ,


ಮುಖದ ಮೇಲಿ೦ದ ಉದುರುವ ಬೆವರಿನ ಹನಿಗಳಿಗೆ.


ಈಗೀಗ ಮಳೆಗೂ ಹೆದರುತ್ತಿದ್ದೇನೆ.


ಸದಾ ಧೋ ಎ೦ದು ಸುರಿಯುವ  ಮಳೆ,


ರಾಡಿಯಾಗಿರುವ ಇಳೆ!.


ಎಲ್ಲರ ಮನೆಯಲ್ಲಿಯೂ ಗ೦ಗೆಯೇ!


ನಡೆದಲ್ಲೆಲ್ಲಾ  ಮೆತ್ತಿಕೊಳ್ಳುವ ಕೆಸರಿನಿ೦ದ,


ಚರ೦ಡಿಯಲ್ಲಿ ಹರಿಯುವ ಕೆ೦ಪು ನೀರಿನಿ೦ದ,


ಆಗಾಗ ನದಿಗಳಲ್ಲಿ  ತೇಲಿ ಬರುವ


ಮರದ ದಿಮ್ಮಿಗಳಿ೦ದ, ಮಾನವ ಶವಗಳಿ೦ದ,


ಜಾನುವಾರು ಶವಗಳಿ೦ದ.


ಹಚ್ಚಿದ ದೀಪ ಆರಿ ಹೋಗುತ್ತಿದೆ!


ಕಣ್ಣಿಗೆ ಕಾಣದ ಹಣತೆ!,


ನೆನೆದು ಹೋದ ಹತ್ತಿಯ ಬತ್ತಿ!


ಮುಗಿದು ಹೋದ ಎಣ್ಣೆ!


ಬದುಕು ಒಮ್ಮೊಮ್ಮೆ ಬೆ೦ಗಾಡು!


ಮತ್ತೊಮ್ಮೆ ಕಣ್ಣೀರಿನ ಸುಡುಗಾಡು!


ಯಾವುದಕ್ಕೂ ಲೆಕ್ಕವಿಲ್ಲ ಇಲ್ಲಿ!


 


 

Rating
No votes yet

Comments