ಅರೆ ಅಲ್ಲಾ .......

ಅರೆ ಅಲ್ಲಾ .......

ಬರಹ

ನಮ್ಮ ಹಳ್ಳೀಲಿ ಏನೇ ಹಬ್ಬ ಆದ್ರೂ ಜಾತಿ,ಭೇದ ಮರೆತು  ಎಲ್ರೂ ಒಟ್ಟಿಗೆ ಮಾಡ್ತೀವಿ.  ನಾವು ಮಸೀದಿಗೆ ಹೋಯ್ತೀವಿ. ಅವರೂ ನಮ್ಮ ಸಿದ್ದೇಸನ ಗುಡಿಗೆ ಬರ್ತಾರೆ. ನಾವು ನಮಾಜ್ ಮಾಡಿದ್ರೆ, ಅವ್ರು ಅಣ್ಣು ಕಾಯಿ ಮಾಡಿಸ್ತಾರೆ. ಬಹಳ ದಿನದ ಮ್ಯಾಕೆ, ಹಳ್ಳೀಲಿ. ಒಂದು ದೇವರ ನಾಮಗಳ ಕಾರ್ಯಕ್ರಮ ಏರ್ಪಡಿಸೋದು ಅಂತಾ ತೀರ್ಮಾನಿಸಿದ್ವಿ. ನಮ್ಮೂರಿನ ಅಧ್ಯಕ್ಸ ಹಳಸೋದ ಫಲಾವು ವಾಸ್ನೆಯ ಗಬ್ಬುನಾಥ ಗೌಡಪ್ಪನ ಅಧ್ಯಕ್ಸತೆಯಲ್ಲಿ ನಡೀತು.

ಎಲ್ಲರೂ ಸರಿ ಹಂಗಾರೆ ಮುಂದಿನ ತಿಂಗಳು ಸಿದ್ದೇಸನ ಕಟ್ಯಾಗೆ ಮಡಗವಾ ಅಂದ್ರು. ಅಷ್ಟೊತ್ತಿಗೆ ಹಿಂದಿಂದ ಯಾವನೋ ಅವತ್ತಿನ ಕಾರ್ಯಕ್ರಮಕ್ಕೆ ಗೌಡಪ್ಪ ಸಾನ ಮಾಡಕಂಡು ಬರಬೇಕು. ಅಂತಿದ್ದಾಗೇನೇ ಲೋಟ ತೊಗೊಂಡು ಗೌಡಪ್ಪ ಅಂಗೇ ಬೀಸ್ದ. ಅವನಿಗೆ ಲೋಟ ಬಿತ್ತೋ ಇಲ್ಲೋ,  ಗೌಡಪ್ಪನ ಕಂಕಳ ಹತ್ತಿರ ಇದ್ದೋರು ಮಾತ್ರ ಮೂರ್ಛೆ ಹೋಗಿದ್ರು. ಆಮ್ಯಾಕೆ ನೀರಾಕಿ ಎಬ್ಸಿದ್ವಿ ಬಿಡಿ. ಆಸ್ಪತ್ರೆಗೆ ಅನಸ್ತೀಸಿಯಾ ಕಾಲಿಯಾದ್ರೆ.  ಗೌಡಪ್ಪನ ಬನೀನನ್ನ ಪೇಸೆಂಟ್ ಮುಖದ ಮ್ಯಾಕೆ ಹಾಕಿದ್ರೆ, ಆಪರೇಸನ್ ಆದ್ರೂ ಪೇಸೆಂಟ್ ಮೇಲ್ ಏಳಕ್ಕಿಲ್ಲಾ ಅನ್ನೋ ಗಾದೆ ನಮ್ಮ ಹಳ್ಳ್ಯಾಗೆ ಐತೆ. ಅದು ಬಿಡಿ.

ಮುಸ್ಲಿಂ ಸಮುದಾಯದ ಮುಖಂಡ ನಜೀರ್ ಸಾಬ ನಮ್ದೂಕೆ ಬತ್ತೀವಿ. ಅಂಗೇ ನಾವೂ ದೇವರ ನಾಮಾಗೇ ಹಾಡ್ತೀವಿ ಅಂದ. ಅಲ್ಲಾ ಇವ್ನಾ. ನೋಡ್ಲಾ ಹಾಡುಗಳು ಕನ್ನಡದಾಗೆ ಸುದ್ದವಾಗಿ ಇರಬೇಕು ಕನ್ಲಾ. ಅಂಗೇ ಆಗ್ಲಿ ಬುಡು. ನೋಡಪ್ಪಾ ಇದೇ ದಾರಿ ಕೊನ್ಯಾಗೆ ನಮ್ಮ ರಾಯರು ಅವ್ರೆ ಅಲ್ಲಿ ಹಾಡು ಕಲ್ತಕ್ಕಾ . ಅಷ್ಟೊತ್ತಿಗೆ ನಿಂಗಪ್ಪನ ಕ್ಯಾಂಟೀನ್ ಒಡೆದು ಹೋದ ಹಾಲಿಂದು ಕೆಟ್ಟ ಚಾ ಬಂತು, ಕುಡಿದು ಅವತ್ತಿನ ಮೀಟಿಂಗ್ ಮುಗಿಸಿದ್ವಿ.

 

ಕಾರ್ಯಕ್ರಮ ಸುರು ಆಯ್ತು. ಈಗ ಮೊದಲಿಗೆ ಪ್ರಸಿದ್ದ ಕವಿ,ಗಾಯಕ,ಕೋಮಲ್ರವರು ದೇವರ ನಾಮ ಒಗಿತಾರೆ ಹಿಡ್ಕಳ್ಳಿ. ಹಃಃ
ರಂಗಾ ನೀ ಇಲ್ದೆ ನಾ ಹೆಂಗಿರಲಿ
ನೀ ಇಲ್ಲದೇ ನನ್ನ ಬಾಳು ನರಕ
ಬಾ ಬಾರೋ ರಂಗ
ಬಾ ಎಂದರೆ ಬಂದಿದೆಯೋ ಸೂರ
ನೀ ಬಂದರೆ ದಿಗ್ವಿಜಯದ ಹಾರ......... ಲೇ ಇವ್ನು ಪಿಚ್ಚರ್ ಹಾಡು ಮಿಕ್ಸ್ ಮಾಡ್ ಹೇಳ್ತಾ ಇದ್ದಾನ್ಲಾ. ಲೇ ಇದು ದೇವರ ನಾಮ ರೀಮಿಕ್ಸ್ ಕನ್ರಲಾ. ಅದೇ ಅಯ್ಯಪ್ಪನ ಹಾಡಾದ್ರೆ ಬಾಯಿ ಬುಟ್ಕೊಂಡು ಕೇಳ್ತೀರಾ. ಲೇ ಈ ರಂಗ ಯಾರಲಾ ಅಂದ ಗೌಡಪ್ಪ. ಗೌಡರೇ ಕಿಸ್ನ. ಯಾರು ನಮ್ಮ ಬೀದ್ಯಾಗೆ ಕಟ್ಟಿಗೆ ಒಡಿತಾನಲ್ಲಾ ಅವ್ನಾ. ದೇವರು ಕಿಸ್ನಾರಿ. ಸರೀ ನೀ ಕುಂತ್ಕಳಲ್ಲಾ. ಬೇರೆಯವರಿಗೆ ಚಾನ್ಸ್ ಕೊಡುವಾ.
ಅಷ್ಟೊತ್ತಿಗೆ ನಜೀರ ಸಾಬ ಅಂಡ್ ಟೀಂನೋರು ಬಂದ್ರು. ನಮ್ದೂಕೆ ಸುರು ಮಾಡವಾ ಅಂದ್ರು. ಸುರು ಹಚ್ಕೊಳಿ. ಅಂತಿದ್ದಾಗೇನೇ ಎಲ್ಲಾ ಕರ್ಚೀಫ್ ತೆಗೆದು ನೆಲದ ಮೇಲೆ ಹಾಕಿದ್ರು. ಏನ್ಲಾ ಇದು, ಗೌಡಪ್ಪ. ನಮಾಜ್. ಬಗ್ಗೋ ಬೇಕಾದ್ರೆ ಹುಸಾರು ಅನ್ನಲಾ. ಮುಂದ್ಗಡೆ ಸಗಣಿ ಐತೆ. ಮುಖಕ್ಕೆ ಮೆತ್ಕಾಂಡಾತು. ಎಲ್ಲರದ್ದೂ ನಮಾಜ್ ಆತು. ಸುರು ಹಚ್ಕೊಂಡ್ರು ನಜೀರ ಸಾಬ. ಮೈಕ್ ಹಿಂದಕ್ಕೆ ಮಡಗಲಾ. ಕಡೆಗೆ ಹಾಡು ಹೇಳ್ತಾ ಹೇಳ್ತಾ ಮೈಕಿನ ಕವರ್ ತಿಂದ್ ಬಿಟ್ಟಾನು.

ಪ್ರಾರ್ಥನೆ. ಅರೆ ಅಲ್ಲಾ.

 ಸುಕ್ಲಂದು ಭರದರಂದು ವಿಸ್ಣುಂದು ಸಸಿವರ್ನಂಗೆ
ಚರ್ತುಭಜಂದು ಪ್ರಸನ್ನಂದು ದಯ್ಯಂದು ಸರ್ವ ಇಜ್ಞೋಪ ಶಾಂತೆಯೇ..... ಏನ್ಲಾ ಇದು. ಕಡೇ ಸಬ್ದ ಮಾತ್ರ ಸರಿಯಾಗಿ ಏಳ್ದಾ ನೋಡ್ಲಾ. ಮುಂದೆ ಚೆನ್ನಾಗಿ ಏಳ್ತಾರೆ ಬಿಡ್ರಿ ಗೌಡ್ರೆ. ಏನಂದಯೋ. ಹತ್ತಿರ ಬಂದು ಹೇಳೋ. ಏಏಏಏಏಏ ಹತ್ತಿರ ಮಾತ್ರ ಬರಕ್ಕಿಲ್ಲಾ.

ದಾಸರ ಪದಗಳು

 ಈ ದಾಸ ಏಳಿದ್ದನ್ನೇ ಮಾಡೋದು ಮಾಡಿದ್ದನ್ನೇ ಏಳೋದು......ಏನ್ಲಾ ಇವ್ನು ದರ್ಸನ್ ಪಿಚ್ಚರ್ ಡೈಲಾಗ್ ಹೇಳ್ತಾವ್ನೆ. ಲೇ ದಾಸರ ಪದಗಳನ್ನು ಹಾಡೋ.
ದರ್ವಾಜ ಕೋಲ್ಕೆ
ಸೇವೆಯಂದು ಕೊಡ್ರಿ ಹರಿಯೇ.
ಗೌಡ್ರೆ ನಮ್ಗೆ ದಾಸ್ರ ಪದ ಬರಕ್ಕಿಲ್ಲಾ ಲಕ್ಸ್ಮೀದು ಅಮ್ಮಾ ಇಲ್ವಾ. ಅವರದು ಮೇಲೆ ಹೇಳ್ತೀವಿ. ಹೇಳ್ ಸಾಯಿ.

 

ಅಲ್ಲಾಹು ಅಕ್ಬರ್.
ಲಕ್ಸ್ಮೀ ಬಾರವ್ವಾ, ಲಕ್ಸ್ಮೀ....ಬಾರವ್ವ.ಆವ್ ಆವ್ ಆವ್
ಭಾಗ್ಯಮ್ಮಂದು ಲಕ್ಸ್ಮೀ ಬರ್ತಾರೆ
ನಮ್ಮಂದು ಇಸ್ಕಿ ಭಾಗ್ಯಮ್ಮಂದು ಲಕ್ಸ್ಮೀ ಬರ್ತಾರೆII
ಹೆಜ್ಜೇದು ಮೇಲೆ ಹೆಜ್ಜೇದು ಇಟ್ಬಿಟಿ
ಸಜ್ಜಂದು ಸಾಧು ಪೂಜೆಗೆ ಮಾಡ್ಬಿಟಿ
ಮಜ್ಜಿಗೆಯೊಳಗಿಂದು ಮಕ್ಕನಿನಂತೇ
ಭಾಗ್ಯಮ್ಮಂದು ಲಕ್ಸ್ಮೀ ಬರ್ತಾರೆ. ...........ಸೈಡ್ನಾಗೆ ಇದ್ದೋರು ವ್ಹಾವ್ಹಾವ್ಹಾ.

ಶಕ್ಕರದು ತುಪ್ಪಗೆ ಕಾಲ್ವೆಗೆ ಹರ್ಸಿಬಿಟ್ಟಿ
ಶುಕ್ರವಾರದು ನಮಾಜ್ದು ಟೇಮಿಗೆ
ಅಕ್ಕರೆಯುಳ್ಳ ಅರಗಿಣಿ ರಂಗಂದ್ದು
ಚೊಕ್ಕಂದು ಪುರಂದರಂದು ವಿಠಲಂಗೆ ರಾಣಿ
ವಿಠಲಂದು ಬೇಗಂ, ವಿಠಲಂದು ಬೇಗಂ..... ರೀ ಸಾಹೇಬರೆ ಏನ್ ಹಾಡಿರಿ ನಿಮ್ದೂ. ಹಿಂದು ಮುಸ್ಲಿಂ ಬೆರೆತಿದ್ದಾರೆ ಎನ್ನುವುದಕ್ಕೆ ಶಕ್ಕರ್ ತುಪ್ಪಾನೇ ಸಾಕ್ಸಿ ಬಿಡ್ರಿ.

ಅರೆ ಇಸ್ಕಿ ಸಿದ್ದೇಸನ ಮೇಲೆ ಹೇಳಿಲ್ಲಾ.
ಸಿದ್ದೇಸಂಗೆ ನಮ್ದೊಂದು ಸಲಾಂ
ನಮ್ಗೆ ಆಸೀರ್ವಾದ ಮಾಡೋನು
ನಿಮ್ದೂಕೆ ಇಲ್ದೆ, ನಮ್ದೂಕೆ ಏನೂ ಇಲ್ಲ
ಅರೆ ಇಸ್ಕಿ. ಸಿದ್ದೇಸ ನೀ ಕಾಣಂಗೆ ಇಲ್ಲ
ಕಂಡ್ರೂ ನಿಮ್ದೂ ಏನೂ ಅಂತಾ ತೋರ್ಸಕ್ಕಿಲ್ಲ ......ಇದು ಇನ್ನೂ ಮುಗದೇ ಇರಲಿಲ್ಲ. ಆಗ್ಲೇ ಸ್ಟೇಜ್ನಾಗಿಂದ ಒಬ್ಬರಾದ ಮೇಲೆ ಒಬ್ಬರೂ ತಲೆ ಮೇಲೆ ಟವಲ್ ಹಾಕ್ಕೊಂಡು ಎದ್ದು ಓಯ್ತಾ ಇದ್ರು. ಯಾವ ಟೇಂನಾಗೆ ಬೇಕಾದ್ರೂ ಕಲ್ಲು ಬರುತ್ತೆ ಅಂತಾ. ಗೌಡ್ರೆ ಅಂದೆ. ವಂದನಾರ್ಪಣೆ ಮಾಡ್ಲಾ. ಮೊದ್ಲು ಎದ್ದು ಜಾಗ ಖಾಲಿ ಮಾಡ್ರಿ. ಇಲ್ಲಾಂದ್ರೆ ಜನ ನಮ್ಗೆ ಎಳ್ಳು ನೀರು ಬಿಡೋದಂತು ಗ್ಯಾರೆಂಟಿಯಾ. ಅಂಗಾ. ನಜೀರ ಸಾಬರೆ ನೀವು ಮುಂದುವರೆಸಿ ಅಂದೆ. ನಮಗೂ ಗೊತ್ತು. ಯಾರಾದ್ರೂ ಹೊಡಿತಾರೆ ಅಂತಾ ಮನ್ಯಾಗಿರೋ ತಟ್ಟೆ ಎಲ್ಲಾ ತಂದು ಮಡಿಕ್ಕೊಂಡಿದೀವಿ. ಆಆಆಆಆಆಆ.