ಛೇ... ಇಂದೇನೂ ಬರೆಯಲಾಗುತ್ತಿಲ್ಲ!

ಛೇ... ಇಂದೇನೂ ಬರೆಯಲಾಗುತ್ತಿಲ್ಲ!

ಛೇ.. ಇಂದೇನೂ ಬರೆಯಲಾಗುತ್ತಿಲ್ಲ
ಘಂಟೇ ನೋಡಿ ಆಗಲೇ ಹತ್ತಾಯ್ತಲ್ಲಾ!


ಗೋಪೀನಾಥರದು ಮತ್ತೊಂದು ಸೀನನ ಕತೆ
ಸುರೇಶ್ ನಾಡಿಗರದು ದೆವ್ವ ಬಿಡಿಸುವ ಕತೆ


ವಸಂತರದು ಮರೆಯಾದ ಸೂರ್ಯನ ಕವನ
ಎಲ್ಲಾ ಬರೆದರೂ ಇಲ್ಲಿನ್ನೂ ಹುಟ್ಟಿಲ್ಲ ಕತೆ ಕವನ


ಪ್ರತಿಕ್ರಿಯೆಗಳ ಬಾಣಗಳಿಂದ ಮುದುರಿತೇ ಮನ
ನಾ ಬರೆದದ್ದನ್ನೆಲ್ಲಾ ಮೆಚ್ಚಿಕೊಳ್ಳಲೇ ಬೇಕೇ ಜನ


ಛೇ ಹಾಗಲ್ಲ ಇದು ನಿಜದಿ ನನಗೇನೂ ಹೊಸದಲ್ಲ
ದಿನವಿಡೀ ಮಾತಾಡಿದ ದಿನಗಳವೆಷ್ಟು ಇದ್ದವಲ್ಲಾ...


ಪ್ರತಿಕ್ರಿಯೆಗಳಿಗೆ ಸಮಚಿತ್ತದಲಿ ಸ್ವಾಗತ ಎಂದು
ಸಾರಿಯಾಗಿದೆ ಆಸುಮನ ನಿಮ್ಮೆದುರೇ ಅಂದು


ಮತ್ತೇನು ಆಗಿರಬಹುದು ನನ್ನೀ ಮನಕೆ ಇಂದು
ಯಾಕೆ ಅಕ್ಷರರೂಪ ತಾಳದು ಭಾವನೆಗಳಿಂದು


ಓಹ್... ಗೊತ್ತಾಯ್ತು ಇಂದು ಮತ್ತೆ ಶುಕ್ರವಾರ
ಅಷ್ಟು ಬೇಗನೇ ಮುಗಿದೇ ಹೋಯ್ತಲ್ಲ ಈ ವಾರ


ವಾರಾಂತ್ಯದ ರಜೆಗೆ ಮೈಮನಗಳೆರಡೂ ಇದೀಗ
ಸಿದ್ಧವಾಗಿ ನನಗನ್ನುತ್ತಿವೆ ನಾವಿಲ್ಲ ನಿನ್ನ ಜೊತೆಗೀಗ!
*************************
ಆತ್ರಾಡಿ ಸುರೇಶ ಹೆಗ್ಡೆ



 

Rating
No votes yet

Comments