ಎರಡು ಸಾಲುಗಳು - ೫
ಒಂದು ದಿನ ಎಲ್ಲರನ್ನೂ ಗೆದ್ದು ನಿಲ್ಲುತ್ತೇನೆ
ಆಗ ಬಳಿ ಯಾರೂ ಇರಲ್ಲ, ಗೊತ್ತು. ಈಗಲೂ ಯಾರೂ ಇಲ್ಲ
ಅವರವರು ಹೇಳಿದ್ದೆ ಸತ್ಯ, ಎಲ್ಲರೂ ಹೇಳಿದ್ದು
ಸಾರ್ವಕಾಲಿಕ ಸತ್ಯ. ಆದರೆ ಅದು ಸತ್ಯವಾಗಬೇಕಿಲ್ಲ
ನಿನ್ನ ಮೇಲೆ ಕವನ ಬರೆದೂ ಬರೆದೂ ಇಂದು
ಈ ಭಣಗುಟ್ಟುವ ಕವಿತೆಗಳ ಮಧ್ಯೆ ಕಳೆದು ಹೋದವ, ನಾನು!
ಕೆಲವೊಮ್ಮೆ ಪ್ರೀತಿ ಎಂದರೆ ಪ್ರೀತಿ ಕೊಡುವುದು ಮಾತ್ರ
ಎಳ್ಳಷ್ಟು ಪ್ರೀತಿಯ ನಿರೀಕ್ಷಿಸುವುದಲ್ಲ
ಸಾವಿರ ಜನರನ್ನು ಕೊಂದವ ಕೊನೆಗೂ
ಹೇಳಿದ್ದು, ನನಗೆ ನೆನಪಿಲ್ಲ
ಮನುಷ್ಯ ತಪ್ಪು ಮಾಡುತ್ತಾನೆ ನಿಜ
ಆದರೆ ಅರುವತ್ತು ವರ್ಷಗಳಲ್ಲ
ನಿನ್ನ ಮೇಲೆ ಪ್ರೀತಿಯ ಹಾಲಿನ ಧಾರೆಯೆರೆದೆ
ಒಂದು ಹನಿ ಹುಳಿ ಎಲ್ಲವನ್ನು ಕದಡಿತೇಕೆ
ಒಬ್ಬ ಭ್ರಮೆ ಹುಟ್ಟಿಸಿದ, ಉಳಿದವರು ಆ ಭ್ರಮೆ
ನಾಶವಾಗದಂತೆ ಮುಂದುವರಿಸಿದರು
ನೋವಿನ ನರವನ್ನು ಕತ್ತರಿಸಿದ್ದೇನೆ ಎಂದು
ಸುಮ್ಮನೆ ಹೇಳಿದ್ದೆ, ನಿಜಕ್ಕೂ ಕತ್ತರಿಸಬೇಕಿತ್ತು
ಇಂದೂ ಮುಂಜಾನೆ ಬೇಗ ಎದ್ದಿದ್ದೆ , ಆದರೆ ರಾತ್ರಿ ಮಳೆ
ಜೋರಾಗಿ ಸುರಿದಿತ್ತು, ಇಬ್ಬನಿ ಕಾಣಲಿಲ್ಲ.
Rating
Comments
ಉ: ಎರಡು ಸಾಲುಗಳು - ೫
ಉ: ಎರಡು ಸಾಲುಗಳು - ೫
ಉ: ಎರಡು ಸಾಲುಗಳು - ೫
ಉ: ಎರಡು ಸಾಲುಗಳು - ೫
In reply to ಉ: ಎರಡು ಸಾಲುಗಳು - ೫ by gopaljsr
ಉ: ಎರಡು ಸಾಲುಗಳು - ೫
ಉ: ಎರಡು ಸಾಲುಗಳು - ೫
In reply to ಉ: ಎರಡು ಸಾಲುಗಳು - ೫ by ಭಾಗ್ವತ
ಉ: ಎರಡು ಸಾಲುಗಳು - ೫