ಹೊರನಾಡ ಸಂಪದಿಗರು
ಶೀರ್ಷಿಕೆ ನೋಡಿ ಇವನ್ಯಾರಪ್ಪಾ ಸಂಪದಿಗರನ್ನ ಹೊರನಾಡು ಒಳನಾಡು ಅಂತ ಬೇರೆ ಬೇರೆ ಮಾಡ್ತಾ ಇದೀನಿ ಅಂದುಕೊಳ್ಳಬೇಡಿ. ಕಳೆದ ವಾರ ಕಳಸಕ್ಕೆ ಹೋಗಿದ್ದೆ, ಅಲ್ಲಿಂದ ಹೊರನಾಡು ಕೇವಲ ೮ ಕಿ.ಮೀ. ಬೆಂಗಳೂರಿಗೆ ಮರಳೋ ದಿನ ನಮ್ಮ ಸಂಪದಿಗರಾದ ನಾವುಡರ ನೆನಪಾಯ್ತು. ಅದ್ಯಾವುದೋ ಲೇಖನದಲ್ಲಿ ಮೂಲ ನಕ್ಷತ್ರದ ಬಗ್ಗೆ ತಿಳುವಳಿಕೆ ನೀಡಿದ್ದರಿಂದ, ಅಲ್ಲದೇ ನಮ್ಮ ಊರಿನವರಾದ್ದರಿಂದ ಕುತೂಹಲವಿತ್ತು.
ಹಾಗೇ ನನ್ನ ದೊಡ್ಡಮ್ಮನ ಮಗನ ಹತ್ರ ಹೇಳಿದಾಗ, ಹೋಗಿ ಬರೋಣ ನಾವುಡ್ರು ನಂಗೆ ಪರಿಚಯ ಅಂತ ಕರ್ಕೊಂಡು ಹೋದ. ದೇವಸ್ತಾನಕ್ಕೆ ಹೋಗಿ ರಾಘವೇಂದ್ರ ಅವ್ರು ಎಲ್ಲಿರ್ತಾರೆ ಅಂದ್ರೆ ಯಾವ ರಾಘವೇಂದ್ರ ಅಂತ ಉತ್ರ ಬಂತು. ಆಮೇಲೆ ನಾವ್ಡ್ರು ಅಂದಾಗ, ಹಂಗೇಳಿ ಮತ್ತೆ ಇಲ್ಲೇ ಹೀಗೆ ಮುಂದಕ್ಕೆ ಹೋಗಿ, ಬಲಕ್ಕೆ ತಿರ್ಗಿ.. ಅಲ್ಲೇ ಕೋನೇ ಕೋಣೇಲಿ ಇದಾರೆ ಅಂತ ಉತ್ರ ಬಂತು. ದೇವಸ್ತಾನದ ಆಸುಪಾನಿನಲ್ಲಿ ಇವರು ನಾವುಡರು ಅಂತಾನೇ ಫೇಮಸ್ಸು.
ಹೋಗಿ ಅವ್ರನ್ನ ಮಾತಾಡ್ಸಿದ ಕೂಡ್ಲೇ ಅವರ ಮುಖದಲ್ಲಿ ಎಲ್ಲಿಲ್ಲದ ಆಪ್ತತೆ. ಕೈ ಹಿಡಿದು ಕರ್ಕಂಡ್ ಹೋಗಿ ಒಂದು ಕಾಫೀನೂ ಕುಡ್ಸಿಯಾಯ್ತು. ಹಿಂದಿನ ದಿನ ಬಂದಿದ್ದ ಹರ್ಷ ಸಾಲಿಮಠ್, ಅದಕ್ಕೂ ಮುಂಚೆ ಭೇಟಿ ನೀಡಿದ ಪ್ರಸನ್ನ, ಹರಿಹರಪುರ ಶ್ರೀಧರ್ ಬಗ್ಗೆ ಹೇಳಿದ್ರು. ಮುಂದಿನವಾರ ನಾಗರಾಜ್ ಹೋಗ್ತಾ ಇದಾರೆ. ಸಂಪದ ಸಮ್ಮಿಳನ ತಪ್ಪಿಸಿಕೊಂಡ್ರೂ ಸಂಪದಿಗರು ಒಬ್ಬೊಬ್ಬರಾಗಿ ಭೇಟಿ ನೀಡೋದು ಸಂತೋಷ ಅಂತಿದಾರೆ ಈಗ.
ಕ್ಯಾಮರಾಗೆ ಪೋಸು ಕೊಡಿ ಅಂದ್ರೆ ಸ್ವಲ್ಪ ನಾಚಿಕೊಳ್ಳೋ ನಾವುಡರು, ತಮ್ಮ ಬಿಡುವಿರದ ಸಮಯದಲ್ಲೇ ಬಿಡುವು ಮಾಡಿಕೊಂಡಿದ್ದು ನಿಜಕ್ಕೂ ಮುದ ನೀಡಿತು. ಮುಂದಿನ ಸಲ ಬಂದ್ರೆ ಏನೇನೋ ತೋರ್ಸ್ತೀನಿ ಅಂದಿದಾರೆ. ಆದಷ್ಟು ಬೇಗ ಹೋಗ್ಬೇಕು. ನೀವೂ ಹೊರನಾಡ ಕಡೆ ಹೊರಟಿದ್ರೆ ನಾವುಡರನ್ನ ಖಂಡಿತಾ ಭೇಟಿಯಾಗಿ. ಅವರ ಮುಖಪರಿಚಯಕ್ಕೆ ಇರ್ಲಿ ಅಂತ, ನಾನು ಕಷ್ಟ ಪಟ್ಟು ಅವ್ರು ಯಾರೋ ಜೋತೆ ಮಾತಾಡ್ತಾ ಇರ್ಬೇಕಾದ್ರೆ ತೆಗೆದ ಚಿತ್ರ. ಅವರ ಹೊಳಪಿನ ಕಣ್ಣು ನಿಜಕ್ಕೂ ನನ್ನ ಛಾಯಾಗ್ರಹಣಕ್ಕೆ ಒಳ್ಳೆಯ ವಿಷಯವಾಗಬಲ್ಲದು.
Comments
ಉ: ಹೊರನಾಡ ಸಂಪದಿಗರು
In reply to ಉ: ಹೊರನಾಡ ಸಂಪದಿಗರು by sm.sathyacharana
ಉ: ಹೊರನಾಡ ಸಂಪದಿಗರು
ಉ: ಹೊರನಾಡ ಸಂಪದಿಗರು
In reply to ಉ: ಹೊರನಾಡ ಸಂಪದಿಗರು by asuhegde
ಉ: ಹೊರನಾಡ ಸಂಪದಿಗರು
ಉ: ಹೊರನಾಡ ಸಂಪದಿಗರು
In reply to ಉ: ಹೊರನಾಡ ಸಂಪದಿಗರು by Chikku123
ಉ: ಹೊರನಾಡ ಸಂಪದಿಗರು
In reply to ಉ: ಹೊರನಾಡ ಸಂಪದಿಗರು by palachandra
ಉ: ಹೊರನಾಡ ಸಂಪದಿಗರು
ಉ: ಹೊರನಾಡ ಸಂಪದಿಗರು
In reply to ಉ: ಹೊರನಾಡ ಸಂಪದಿಗರು by manju787
ಉ: ಹೊರನಾಡ ಸಂಪದಿಗರು
In reply to ಉ: ಹೊರನಾಡ ಸಂಪದಿಗರು by Nagaraj.G
ಉ: ಹೊರನಾಡ ಸಂಪದಿಗರು
In reply to ಉ: ಹೊರನಾಡ ಸಂಪದಿಗರು by palachandra
ಉ: ಹೊರನಾಡ ಸಂಪದಿಗರು
In reply to ಉ: ಹೊರನಾಡ ಸಂಪದಿಗರು by Nagaraj.G
ಉ: ಹೊರನಾಡ ಸಂಪದಿಗರು
In reply to ಉ: ಹೊರನಾಡ ಸಂಪದಿಗರು by manju787
ಉ: ಹೊರನಾಡ ಸಂಪದಿಗರು
In reply to ಉ: ಹೊರನಾಡ ಸಂಪದಿಗರು by manju787
ಉ: ಹೊರನಾಡ ಸಂಪದಿಗರು
In reply to ಉ: ಹೊರನಾಡ ಸಂಪದಿಗರು by manju787
ಉ: ಹೊರನಾಡ ಸಂಪದಿಗರು
ಉ: ಹೊರನಾಡ ಸಂಪದಿಗರು
ಉ: ಹೊರನಾಡ ಸಂಪದಿಗರು
ಉ: ಹೊರನಾಡ ಸಂಪದಿಗರು
In reply to ಉ: ಹೊರನಾಡ ಸಂಪದಿಗರು by shaamala
ಉ: ಹೊರನಾಡ ಸಂಪದಿಗರು
ಉ: ಹೊರನಾಡ ಸಂಪದಿಗರು