ಚಿಂದಿ ಆಯುವ ಹುಡುಗ..!

ಚಿಂದಿ ಆಯುವ ಹುಡುಗ..!

    ಅವನ...  ಕಸಗಳೆಲ್ಲ ....
    ಬೀದಿಯುದ್ದಕ್ಕೂ ಚೆಲ್ಲಾಪಿಲ್ಲಿ
    ಆದರೂ
    ಅದರ ಬದಿಯೇ ಹಾದು
    ಹೋಗುವಾಗ...
    ತನ್ನದಲ್ಲವೆಂಬ ನಿರ್ಲಕ್ಷ..!
    
   ಅದರಲ್ಲೇ ಬದುಕು
   ಹುಡುಕುವ
   ಚಿಂದಿ ಆಯುವ ಹುಡುಗ
   ಕಸದೊಳಗೆ ಅರಸುತ್ತಿರುವಾಗ.....!
    
   ಅವನು.........
   ತಟ್ಟನೆ ನಿಂತ.. !
   'ಕಣ್ತಪ್ಪಿನಿಂದ ಬೇಕಾದ
   ವಸ್ತು ತಾನು ಎಸೆದಿದ್ದರೆ...?"
   ಮತ್ತೆ ಕಸದೆಡೆಗೆ
   ಕಣ್ಣು ಹಾಯಿಸುತ್ತಾನೆ  !
   
  ಈ  ಬದುಕೇ ಹೀಗೆ....!
  ಇಲ್ಲದ್ದರಲ್ಲಿ  ಇದ್ದದ್ದು ಹುಡುಕುವ
  ಕೆಲವರು.....
  ಎಸೆದದ್ದರಲ್ಲಿ  ಬದುಕು ಕಾಣುವ
  ಹಲವರು.....
 
            -ಭಾಗ್ವತ್
   
   

Rating
No votes yet

Comments