ಒಂದು ಧಾವಂತದ ಕಥೆ

ಒಂದು ಧಾವಂತದ ಕಥೆ

ನೀವು ಸಂತೋಷದಿಂದ ಇರಬೇಕೆಂದರೆ ನಿಮ್ಮನ್ಯಾರೂ ತಡೆಯಲಾರರು
ನೀವು ದುಃಖದಲ್ಲೇ ಇರಬೇಕೆಂದುಕೊಂಡರೆ ನಿಮಗಾರೂ ಸಹಾಯಮಾಡಲಾರರು
ಸದಾ ಸಂತೋಷದಿಂದಿರಿ
ಧಾವಂತದ ಯುಗದ ಧಾವಂತದ ಕಥೆಯಿದು

ಒಂದು ಪ್ರಾಥಮಿಕ ಶಾಲೆಯ ವಿಧ್ಯಾರ್ಥಿಗಳಿಗೆ ಅವರನ್ನು ದೇವರು ಏನನ್ನಾಗಿ ಮಾಡಬೇಕೆಂದು ಎಣಿಸುವರೋ ಅದರ ಬಗ್ಗೆ ಪ್ರಬಂಧ ಬರೆಯಲು ಹೇಳಲಾಗಿತ್ತು.
ಸಂಜೆ  ಅಧ್ಯಾಪಕಿ ಅದನ್ನು ತಿದ್ದುತ್ತಿರುವಾಗ ಒಂದು ಮಗುವಿನ ಪ್ರಬಂಧ ಅವಳನ್ನು ತುಂಬಾ ಬಾವುಕಳನ್ನಾಗಿಸಿತು. ಅವಳ ಪತಿರಾಯ ಅದೇ ಆಗ ಮನೆಯೊಳಕ್ಕೆ ಬಂದವನು, ಅವಳು ಅಳುವುದನ್ನು ನೋಡಿ ಕಾರಣ  ಕೇಳಿದ.
ಅವಳು ತಾನು ನೋಡುತ್ತಿದ್ದ ಪ್ರಬಂಧವನ್ನು ಅವನಿಗಿತ್ತು ಓದಲು ಹೇಳಿದಳು. ಅದು ಹೀಗಿತ್ತು

" ಓ ದೇವರೇ, ನಾನು ಈ ದಿನ ನಿನ್ನನ್ನು ವಿಶೇಷವಾಗಿ ಬೇಡಿಕೊಳ್ಳುತ್ತೇನೆ ನನ್ನನ್ನು ನಮ್ಮನೆಯ ಟೀವಿಯನ್ನಾಗಿಸು.ಯಾಕೆಂದರೆ ನಾನೂ ನಮ್ಮ  ಮನೆಯ ಟೀವಿಯಂತೆ ಎಲ್ಲರ ಆಕರ್ಷಣೆಯ ಬಿಂದುವಾಗಬೇಕು.ನನ್ನ ಸುತ್ತ ನಮ್ಮ ಮನೆಯವರು ನೆರೆದಿರಬೇಕು, ನಾನು ಮಾತನಾಡುವಾಗ ಅವರೆಲ್ಲ ಆಸಕ್ತಿವಹಿಸಿ ನನ್ನ ಮಾತನ್ನೇ ಕೇಳಬೇಕು,ನಾನು, ಟೀವಿ ಕೆಲಸ ಮಾಡದಿರುವಾಗ  ಹೇಗೆ ಇರುತ್ತದೋ ಹಾಗೇ ಠೀಕು ಠಾಕಾಗಿ ನಾನೂ ಇರಬೇಕು, ತನ್ನ ತಂದೆಯು ಸಂಜೆ ಮನೆಗೆ ಬಂದಾಗ, ತಾನು ಬಳಲಿದರೂ ಹೇಗೆ ಟೀವಿಯ ಸಾಂಗತ್ಯ ಬಯಸುತ್ತಾರೋ ಹಾಗೆಯೇ ನನ್ನ ಸಾಂಗತ್ಯವನ್ನು ಬಯಸುವ ಹಾಗೆ ಆಗಬೇಕು.ನನ್ನ ತಾಯಿಯೂ ತಾನು ಬೇಸರದಲ್ಲಿದ್ದಾಗಲೂ ಹೇಗೆ ಟೀವಿಯನ್ನೇ ನೋಡುತ್ತ ನನ್ನನ್ನು ಕಡೆಗಣಿಸುತ್ತಾಳೋ, ಹಾಗೇ ನನ್ನನ್ನೂ ನೋಡುತ್ತಲಿರುವ ಹಾಗೆ ಆಗಲಿ.ನನ್ನ ಸಹೋದರ ಸಹೋದರಿಯರು ನನ್ನ ಸಂಗಕ್ಕಾಗಿ ಜಗಳಾಡಬೇಕು ಮತ್ತು ನನ್ನ ಮನೆಯವರು ಅಗಾಗ ಎಲ್ಲವನ್ನೂ ಬಿಟ್ಟು ನನ್ನ ಜತೆಯೇ ಕಾಲ ಕಳೆಯುವ ಹಾಗಾಗಬೇಕು.ಹಾಗೆಯೇ ಕೊನೆಯಲ್ಲಿ ನಾನು ನನ್ನ ಮನೆಯವರನ್ನು ಸದಾ ಸಂತೋಷದಲ್ಲಿಡುವ ಹಾಗೆ ಮತ್ತು ಅವರಿಗೆ ಸದಾಕಾಲ ಮನರಂಜನೆ ನೀಡುವ ಹಾಗಾಗಬೇಕು.
ದೇವರೇ ನಾನು ಹೆಚ್ಚಿನದೇನನ್ನೂ ಕೇಳೋಲ್ಲ, ದಯವಿಟ್ಟು ನಾನು ಟೀವಿಯ ಹಾಗೆ ಜೀವಿಸುವಂತೆ ಮಾಡು."

ಆಗ ಪತಿದೇವ ಕೇಳಿದ " ಅಯ್ಯೋ ಪಾಪದ ಮಗು, ಅವರೆಂತಹ ಕ್ರೂರ ತಂದೆತಾಯಿಗಳಿರಬಹುದು?"

 ಹೆಂಡತಿ ಪೇಲವವಾಗಿ ಆವನತ್ತ ತಿರುಗಿ ಹೇಳಿದಳು "ಈ ಪ್ರಬಂಧ ನಮ್ಮ ಮಗುವಿನದ್ದೇ"

 

ಚಿತ್ರ  ಬರಹ:  
ನೆಟ್ ಆಧಾರ

 

Rating
No votes yet

Comments