ಮೈಕೆಲ್ ಜಾಕ್ಸನ್ ನಮ್ಮಿಂದ ಅಗಲಿ ಒಂದು ವರುಷ...

ಮೈಕೆಲ್ ಜಾಕ್ಸನ್ ನಮ್ಮಿಂದ ಅಗಲಿ ಒಂದು ವರುಷ...

ರಾಜ್ ಕುಮಾರ್, ಎಸ್ ಪಿ ಬಿ, ಪಿ ಬಿ ಶ್ರೀನಿವಾಸ್, ಜೇಸುದಾಸ್, ಘಂಟಸಾಲ ಇವರೆಲ್ಲರ ದ್ವನಿಗಳು..ಸಾಹಿತ್ಯ...ಭಾವನೆ....ಎಲ್ಲದರೊಡಗೆ...
ಎಲ್ಲೋ ಒಂದು ಕಡೆ...ನನಗೆ ಗೊತ್ತಿಲ್ಲದಂತೆ ನನ್ನನ್ನು ಆಕ್ರಮಿಸಿಕೊಂಡ ಮತ್ತೊಂದು ಧ್ವನಿ...ಈ ’ಎಮ್ ಜೆ’

ಅವನ ಆ ಹಾಡುಗಳನ್ನ ಕಷ್ಟಪಟ್ಟು ಅರ್ಥ ಮಾಡಿಕೊಂಡು (ಆಂಗ್ಲ ಭಾಷೆಯ ಬಗ್ಗೆ ನನಗಿದ್ದ ಅಲ್ಪ ಜ್ನಾನ... ಅಂದಿನ ಕಾಲಕ್ಕೆ...) ಆ ಸಂಗೀತ.....ಆ ಸಾಹಿತ್ಯ...೧೦-೨೦ ಸಲ ಕೇಳಿದರೂ ಅರ್ಥವಾಗದಿದ್ದ ಕಾಲದಿಂದಲೂ ನನಗೆ ಅವನೆಂದರೆ...ಅವನ ಹಾಡೆಂದರೆ.....ಬಹಳ ಇಷ್ಟ....

ಅವನು ಸತ್ತು ಇಂದಿಗೆ ೧ ವರುಷ...

ಅವನ ವೈಯುಕ್ತಿಕ ಜೀವನದ ಬಗ್ಗೆಯಾಗಲಿ, ಅಥವಾ ಆತನ ಬಗ್ಗೆ ಈಗಲು ಪ್ರಚಲಿತವಿರುವ ದಂತ ಕಥೆಗಳ ಬಗ್ಗೆಗಾಗಲೀ ನನಗೇ ಯಾವ ಆಸಕ್ತಿಯೂ ಇಲ್ಲ....ಆದರೆ..ಅವನ ಹಾಡುಗಳು...ಆ ಸಂಗೀತ..ಎಂದಿಗೂ ಅಜರಾಮರ.

ನನ್ನ ಅಭಿಪ್ರಾಯ ಇನ್ನೊಬ್ಬ ’ಎಮ್ ಜೆ’, ಇನ್ನೊಬ್ಬ ’ರಾಜ್’. ಇನ್ನೊಬ್ಬ ’ಸಿ ಅಶ್ವಥ್’ .....ಬಹುಷ: ಬರಲಾರರು...ಆದರೆ ಅವರು ಇಂದಿಗೂ ನನ್ನಂತ ಸಾವಿರಾರು, ಲಕ್ಶಾಂತರ ಸಾಮಾನ್ಯ ಜನಗಳ ಮನಸಿನಲ್ಲಿ ಎಂದೆಂದಿಗೂ ಅಳಿಸಲಾರದಂತೆ...ಅಜರಾಮರಾಗಿರುವರು.

Rating
No votes yet

Comments