ರಾತ್ರಿಯ ಕನಸುಗಳು..!.
ನನ್ನ ಹೃದಯದ ಬಯಲಿನಲಿ, ನಿನ್ನ
ನೆನಪುಗಳು ಚಿಗುರಾಗಿ ಅರಳಿದ್ದು..
ಎರಡು ಅಮವಾಸ್ಯೆಗಳು ಕಳೆದು
ಮೂರನೆ ಹುಣ್ಣಿಮೆಯ ಅಂತರದಲ್ಲಿ...
ಬಾವನೆಗಳು ಬಯಕೆಗಳಾಗಿ
ಆಸೆಗಳು ಹೂವಾಗಿ ಅರಳಿದಾಗ..
ನನ್ನ ನಿನ್ನ ಸಂಬಂಧದ ನಡುವೆ
ಎರಡು ಹೆಜ್ಜೆಗಳ ಅಂತರವಷ್ಟೆ ಇತ್ತು...
ಮುಂಗುರುಳು ತಿರುವುತ್ತ
ಬಾನಿನೆಡೆಗೆ ಮುಖಮಾಡಿ..
ನೋಟ ಬಾನಿನತ್ತ ಇದ್ದರೂ
ತವಕ ಪಡುವ ಮನಸ್ಸು ನನ್ನೆಡೆಗಿತ್ತು...
ಆಸೆಗಳನ್ನೇ ಇಟ್ಟಿಗೆಗಳ್ಳನ್ನಾಗಿಸಿ
ಜೀವನವೆಂಬ ಮನೆಯನ್ನು
ಚಿನ್ನದ ಬಣ್ಣದಿಂದ ಲೇಪಿಸುತ್ತಾ..
ಮೌನವಾಗಿ ಕಟ್ಟುತ್ತಿಲಿದ್ದೆ...
ಶಾಶ್ವತವಾಗಿರಲೆಂದು ಪ್ರೀತಿಯ
ಕಣ್ಣೀರನು ಸುರಿಸಿ..
ಮನೆಯ ಅಂಗಳಕ್ಕೊಪ್ಪುವ
ಹೂ ದೋಟವನ್ನು ಬೆಳೆಸುತ್ತಿದ್ದೆ...
ಮೊಗ್ಗು ಬಿರಿವ ಹೊತ್ತಿನಲ್ಲಿ
ಮನಸು ಮನಸುಗಳು ಒಂದಾದಾಗ
ಅದನ್ನು ಕಂಡು ಮನ ಮುರಿಯುವ
ಮನಸುಗಳ ಸಂಖ್ಯೆಯೇ ಹೆಚ್ಚಾಗಿರುವಾಗ...
ನಮ್ಮ ಹೂದೋಟದ ಅಂಗಳಕ್ಕೆ
ಮತ್ಯಾರನ್ನು ಅನುಮತಿಸಲಿಲ್ಲ
ನಮ್ಮ ಬಾಳಿಗೆ ನಾವೇ ಒಡೆಯರಾದೆವು
ನಮ್ಮ ಜೀವನದ ಪುಟಗಳನ್ನು ನಾವೇ ಬರೆದುಕೊಂಡೆವು...
ನಮ್ಮ ಬಾಳಿನಲಿ ಬೆಳಕನ್ನು ಬಿಟ್ಟು
ಕತ್ತಲಿಗೆ ಅವಕಾಶ ನೀಡಲಿಲ್ಲ..
ಎಲ್ಲಾ ರಾತ್ರಿಗಳಲ್ಲೂ ಹುಣ್ಣಿಮೆಯನ್ನು ಕಾಣುತ್ತಾ
ಪ್ರತಿ ರಾತ್ರಿ ಕನಸುಗಳನ್ನು ಬೆಳೆಯುತ್ತಿದ್ದೆವು...
ವಸಂತ್
Comments
ಉ: ಪ್ರತಿ ರಾತ್ರಿಯಲ್ಲೂ ಕನಸುಗಳನ್ನು ಬೆಳೆಯುತ್ತಿದ್ದೆವು..!.
In reply to ಉ: ಪ್ರತಿ ರಾತ್ರಿಯಲ್ಲೂ ಕನಸುಗಳನ್ನು ಬೆಳೆಯುತ್ತಿದ್ದೆವು..!. by gopinatha
ಉ: ಪ್ರತಿ ರಾತ್ರಿಯಲ್ಲೂ ಕನಸುಗಳನ್ನು ಬೆಳೆಯುತ್ತಿದ್ದೆವು..!.