ಲೋಕಾಯುಕ್ತರ ರಾಜೀನಾಮೆ

ಲೋಕಾಯುಕ್ತರ ರಾಜೀನಾಮೆ

ಬರಹ

ಯಾಕೋ ಇತ್ತೀಚಿನ ಬೆಳವಣಿಗೆ ಗಳನ್ನು ನೋಡಿದರೇ ಕರ್ನಾಟಕದ ಜನ ಪ್ರತಿಭಟಿಸುವ ಶಕ್ತಿಯನ್ನೆ ಕಳೆದುಕೊಂಡಿದ್ದಾರೆ ಅನಿಸ್ತಿದೆ, ಆಳುವ ಸರ್ಕಾರಗಳು ಚುನಾವಣೆಗಳ ಫಲಿತಾಂಶವನ್ನೆ ತಮ್ಮ ಪ್ರತಿಯೊಂದು ಕಾರ್ಯಕ್ಕೂ ಒಂದು ನೆಪ ಮಾಡಿಕೊಂಡಿದ್ದಾರೆ .ಪ್ರತಿಪಕ್ಷಗಳಂತೂ ಒಳಜಗಳ,ನಾಯಕರ ಪ್ರತಿಷ್ಠೆಗಳಲ್ಲಿಯೇ ಅದು  ಅಸ್ತಿತ್ವದಲ್ಲಿದೆಯೇ ಇಲ್ಲವೇ ಎನ್ನುವುದೇ  ತಿಳಿಯದಾಗಿದೆ..ನಿಜವಾಗಿ ರಾಜ್ಯದಲ್ಲಿ ಪ್ರತಿಪಕ್ಷಗಳ ಕೆಲಸ ಮಾಡುತ್ತಿರುವುದು ಮಾದ್ಯಮಗಳು,ರಾಜ್ಯಪಾಲರು,ಲೋಕಾಯಕ್ತ ಮತ್ತು ಮಾನವ ಹಕ್ಕುಗಳ ಆಯೋಗಗಳು
        ಆದರೆ ಇತ್ತೀಚಿನ ದಿನಗಳಲ್ಲಿ ಸರ್ಕಾರ ಇವುಗಳನ್ನೇ ನಿಷ್ಕ್ರೀಯಗೊಳಿಸಲು ಯತ್ನಿಸುತ್ತಿರುವುದು ನಾಚಿಕೆಗೇಡಿನ ಕೆಲಸ.ಒಂದುಕಡೆ ರಾಜ್ಯಪಾಲರು ಸರ್ಕಾರದ ರೀತಿನೀತಿಗಳನ್ನು    ಪ್ರಶ್ನಿಸಿದರೆ ಸಂಪುಟದ ಸದಸ್ಯರೇ ರಾಜ್ಯಪಾಲರನ್ನೇ ಹೀಯಾಳಿಸುವ ಪ್ರವೃತ್ತಿಯನ್ನು ರೂಢಿಸಿಕೊಂಡು ತಮ್ಮ  ಉದ್ಧಟತನ ಪ್ರದರ್ಶಿಸಿದ್ದಾರೆ. ದೇಶ ಕಂಡ ಅತ್ಯುತ್ತಮ ಕಾನೂನು ತಜ್ಞರಲ್ಲಿ ನಮ್ಮ ರಾಜ್ಯಪಾಲರು ಒಬ್ಬರು.ಅವರ ಸಲಹೆ ಗಳನ್ನು ಸ್ಪರ್ದಾತ್ಮಕತೆ ಯಿಂದ ನೋಡದೇ ಪೂರ್ವಗ್ರಹಪೀಡಿತರಾಗಿ ನೋಡಿ ಅವರ ದಿವ್ಯ ನಿರ್ಲ್ಯಕ್ಷ್ಯ ತೋರುತ್ತಿರುವುದು ನಮ್ಮ ಸರ್ಕಾರದ ಸಾಚಾತನವನ್ನೇ ಅನುಮಾನದಿಂದ ನೋಡುವಂತಾಗಿದೆ.
ಇನ್ನು ಮಾನವ ಹಕ್ಕುಗಳ ಆಯೋಗದ ಅದ್ಯಕ್ಷರಿಗೆ ಅವರ ಅಂಗರಕ್ಷಕರನ್ನೇ ನೇಮಿಸದೇ ಅವರೇ ದೂರು ನೀಡುವಂತ ಪರಿಸ್ಥಿತಿ. ಅವರನ್ನು ಸಹ ಬಹಿರಂಗವಾಗಿ ತೆಗಳುತ್ತ ಮಾನಸಿಕ ಸ್ಥೈರ್ಯವನ್ನೆ ಹುಡುಗಿಸುವ ಪ್ರಯತ್ನ ಮಾಡುತ್ತಿದೆ..
 ಇನ್ನು ಲೋಕಾಯುಕ್ತರ ರಾಜಿನಾಮೆ ರಾಜ್ಯದಲ್ಲಿ ಒಂದು ಬಿರುಗಾಳಿಯನ್ನೇ ಎಬ್ಬಸಿದೆ...ಸರ್ಕಾರದ ಅಸಹಕಾರ, ದಿವ್ಯ ನಿರ್ಲ್ಯಕ್ಷ್ಯ,ನಿಷ್ಕ್ರೀಯತೆ,ಪರಮಾಧಿಕಾರ,ಗಣಿ ವಿಷಯಕ್ಕೆ ಇವೇಲ್ಲವೂ ಲೋಕಾಯುಕ್ತರ ರಾಜಿನಾಮೆಗೆ ಕಾರಣವಾಗಿರಬಹುದು.ಆದರೇ  ಇಂತಹ ಸಂದರ್ಭದಲ್ಲಿ ಅವರ ರಾಜೀನಾಮೆ ರಾಜ್ಯದ ಜನತೆಯಲ್ಲಿ ಭ್ರಮನಿರಸನವನ್ನು ಮೂಡಿಸಿದೆ.ರಾಜೀನಾಮೆ ವಾಪಸ್ಸು ಪಡೆಯುವಂತೆ ಎಲ್ಲಡೆಯಿಂದ ಹೋರಾಟದ ಕೂಗುಗಳು ಕೇಳಿಬರುತ್ತದೆ.ರಾಜ್ಯಪಾಲರಂತೂ ಲೋಕಾಯುಕ್ತರ ರಾಜೀನಾಮೆ ಪ್ರಜಾಪಭುತ್ವ ವ್ಯವಸ್ಥೆಯ ಪ್ರಮುಖ ಸಂಸ್ಥೆಯಂದರ ಅವನತಿಯ ಸೂಚಕವೆಂದು ಆತಂಕ ವ್ಯಕ್ತಪಡಿಸಿದ್ದಾರೆ.ಕೇಂದ್ರದ ಗೃಹ ಸಚಿವರೂ ಲೋಕಾಯುಕ್ತರು ತಮ್ಮ ರಾಜೀನಾಮೆಯನ್ನು ವಾಪಸ್ಸು ಪಡೆಯಲು ಕೇಳಿಕೊಂಡಿರುವುದು ಅವರ ಮೌಲ್ಯವನ್ನು ತೋರಿಸುತ್ತದೆ. ರಾಷ್ಟ್ರ ಕಂಡ ಅತ್ಯುತ್ತಮ ನ್ಯಾಯಾವಾದಿಯಾಗಿ,ರಾಜ್ಯದ ಲೋಕಾಯುಕ್ತಾರಾಗಿ ಅವರ ಕಳಂಕರಹಿತ,ಜನಸ್ನೇಹಿ ಸೇವೆಯು ಜನತೆಯ ಮುಂದಿರುವಾಗ ರಾಜ್ಯದ ಬಿಜಿಪಿ ಮುಖಂಡರು ಅವರ ನಿಷ್ಠೆಯ ಬಗ್ಗೆ ಮಾತನಾಡಿರುವುದು ನಾಚಿಕೆಗೇಡಿನ ಹೇಯಕೃತ್ಯವೆಂದೇ ಹೇಳಬಹುದು..
      ಕೊನೆಯದಾಗಿ ಕರ್ನಾಟಕದ ಹಿತಕ್ಕಾಗಿ,ಭ್ರಷ್ಟರ ನಿರ್ಮೂಲನೆಗೆ, ಶ್ರೀ,ಸಂತೋಷ್ ಹೆಗಡೆ ಯವರ ಅವಶ್ಯಕತೆ ತುಂಬಾ ಇದೆ ಆದ್ದರಿಂದ ರಾಜ್ಯದ ಜನತೆಗೋಸ್ಕರವಾಗಿಯಾದರು ತಮ್ಮ ನಿಲುವನ್ನು ಬದಲಿಸುವಂತಾಗಲಿ ಹಾಗೂ ಸರ್ಕಾರವು ಲೋಕಾಯುಕ್ತರಿಗೆ ಪರಮಾಧಿಕಾರ ನೀಡುವತ್ತ  ಪ್ರಾಮಾಣಿಕವಾಗಿ ಪ್ರಯತ್ನಿಸುವಂತಾಗಲಿ ಎಂದು ಬಯಸೋಣ....
 
 

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet